ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇರೆಗೆ ‘ಸುದರ್ಶನ ಟೀವಿ’ಯ ಸಂಪಾದಕ ಸುರೇಶ ಚವ್ಹಾಣಕೆಯವರ ವಿರುದ್ಧ ಅರ್ಜಿ

‘ಸುದರ್ಶನ ಟೀವಿ’ ಸಂಪಾದಕರಾದ ಸುರೇಶ ಚವ್ಹಾಣಕೆಯವರು ಇಲ್ಲಿಯ ಗೋವಿಂದಪುರಿ ಪ್ರದೇಶದಲ್ಲಿ ಒಂದು ಕಾರ್ಯಕ್ರಮದಲ್ಲಿ ನೀಡಿದ ಕಥಿತ ಆಕ್ಷೇಪಾರ್ಹ ಭಾಷಣದಿಂದಾಗಿ ಅವರ ವಿರುದ್ಧ ಅರ್ಜಿಯನ್ನು ದಾಖಲಿಸಲಾಗಿದೆ.

ಪೂ. ಭಯ್ಯೂಜಿ ಮಹಾರಾಜರ ಆತ್ಮಹತ್ಯೆಯ ಪ್ರಕರಣದಲ್ಲಿ ಸೇವಕ, ವಾಹನಚಾಲಕ ಮತ್ತು ಅವರ ಆರೈಕೆಯ ಸೇವಕಿಗೆ ೬ ವರ್ಷಗಳ ಸೆರೆಮನೆ ಶಿಕ್ಷೆ !

ಪೂ. ಭಯ್ಯೂಜಿ ಮಹಾರಾಜರಿಗೆ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಇಂದೂರ ನ್ಯಾಯಾಲಯವು ಪೂ. ಮಹಾರಾಜರ ಸೇವಕ ವಿನಾಯಕ ದುಧಾಳೆ, ವಾಹನ ಚಾಲಕ ಶರದ ದೇಶಮುಖ ಮತ್ತು ಕೇಅರ್ ಟೇಕರ(ಆರೈಕೆ ಮಾಡುವವರು) ಪಲಕ ಇವರನ್ನು ಸಾಕ್ಷಿಗಳ ಆಧಾರದಲ್ಲಿ ದೋಷಿಯೆಂದು ನಿರ್ಧರಿಸಿದ್ದಾರೆ.

ಉತ್ತರಪ್ರದೇಶದ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿ ಚುನಾವಣೆ ಸ್ಪರ್ಧಿಸಲು ನಿರಾಕರಣೆ !

ಉತ್ತರ ಪ್ರದೇಶದಲ್ಲಿರುವ ಶೇಖುಪೂರ ಚುನಾವಣಾ ಕ್ಷೇತ್ರದ ಕಾಂಗ್ರೆಸ್ಸಿನ ಮಹಿಳಾ ಅಭ್ಯರ್ಥಿ ಫರಾಹ ನಯೀಮ ಇವರು ‘ಕಾಂಗ್ರೆಸ್ಸಿನಲ್ಲಿ ಮಹಿಳೆಯರ ಶೋಷಣೆಯಾಗುತ್ತಿದೆ’, ಎಂದು ಆರೋಪಿಸುತ್ತಾ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ.

೬ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಮತಾಂಧನಿಗೆ ಗಲ್ಲು ಶಿಕ್ಷೆ

೬ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ೪೮ ವರ್ಷದ ಮಹಮ್ಮದ ಮೆಜರ ಆರೋಪಿಗೆ ಇಲ್ಲಿನ ತ್ವರಿತಗತಿ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದ್ದು ೧೦ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.

ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠರಿಂದ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿರುವ ಓರ್ವ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.

ಗುಂಟೂರಿನ (ಆಂಧ್ರಪ್ರದೇಶ) ಮಹಮದ್ ಅಲಿ ಜಿನ್ನಾ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಹಿಂದೂ ವಾಹಿನಿ ಸಂಘಟನೆಯ ೩ ಕಾರ್ಯಕರ್ತರ ಬಂಧನ !

ಕೋಥಾಪೇಟ್ ಪ್ರದೇಶದಲ್ಲಿ ಸಂಚಾರನಿರ್ಬಂಧದ ಆದೇಶವನ್ನು ಉಲ್ಲಂಘಿಸಿ ಮಹಮದ್ ಅಲಿ ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ವಾಹಿನಿ ಸಂಘಟನೆಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಮತಾಂತರಕ್ಕಾಗಿ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಹಿಂದೂ ವಿದ್ಯಾರ್ಥಿನಿ ಲಾವಣ್ಯಳ ವ್ಯಥೆ ವಿಡಿಯೋ ಮೂಲಕ ಬಹಿರಂಗ

ಲಾವಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನದ ಒಂದು ವಿಡಿಯೋ ಇದೀಗ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಆಕೆ ‘ನನಗೆ ವಸತಿ ನಿಲಯದಲ್ಲಿ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದರು ಮತ್ತು ಓದಲು ಬಿಡುತ್ತಿರಲಿಲ್ಲ’, ಎಂದು ಆರೋಪಿಸಿದ್ದಾಳೆ.

‘ದೇವರು ನನ್ನ ಒಳಉಡುಪುಗಳ ಅಳತೆ ತೆಗೆದುಕೊಳ್ಳುತ್ತಾರೆ !’(ಅಂತೆ)

ಹಿಂದೂಗಳು ಸಂಘಟಿತರಲ್ಲದ ಕಾರಣ ಯಾರೂ ಬೇಕಾದರೂ ಆಗಾಗ ದೇವತೆಗಳನ್ನು ಅವಮಾನಿಸುತ್ತಾರೆ ! ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ತೀವ್ರವಾಗಿ ಮತ್ತು ನ್ಯಾಯಸಮ್ಮತವಾಗಿ ಖಂಡಿಸಬೇಕು ಮತ್ತು ಸಂಬಂಧಪಟ್ಟ ನಟಿಯ ಕ್ಷಮೆಯಾಚಿಸುವಂತೆ ಮಾಡಬೇಕು !

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಓರ್ವ ಹುಡುಗಿಯ ಸೇಡು ತೀರಿಸಿಕೊಳ್ಳಲು ಆಕೆಯನ್ನು ಮೂವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ, ನಂತರ ಇತರ ಮಹಿಳೆಯರು ಆಕೆಯ ಕೇಶಮುಂಡನ ಮಾಡಿ ಬೀದಿಯಲ್ಲಿ ಓಡಾಡಿಸಿದ್ದಾರೆ.

ಕಾಸರಗೋಡಿನಲ್ಲಿ (ಕೇರಳ) ಉಸ್ತುವಾರಿ ಸಚಿವ ಅಹಮದ ದೇವರಕೋವಿಲ್ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದರು !

ಉಸ್ತುವಾರಿ ಸಚಿವ ಹಾಗೂ ಇಂಡಿಯನ ನ್ಯಾಶನಲ್ ಲೀಗನ ನಾಯಕ ಅಹಮದ ದೇವರಕೊವಿಲ ಇವರು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡುವಾಗ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದರು.