ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠರಿಂದ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಮಹಿಳಾ ನ್ಯಾಯಾಧೀಶರ ಆರೋಪಗಳು ಸತ್ಯವಾಗಿದ್ದರೆ ಹಾಗೂ ನ್ಯಾಯಾಧೀಶರು ಕಾಮಾಂಧರಾಗಿದ್ದರೆ, ಈ ಪ್ರಕರಣವು ತುಂಬಾ ಗಂಭೀರವಾಗಿದೆ. ‘ಇಂತಹ ನ್ಯಾಯಾಧೀಶರು ಪೀಡಿತ ಮಹಿಳೆಯರ ಪ್ರಕರಣಗಳನ್ನು ಹೇಗೆ ನಿಭಾಯಿಸುತ್ತಾರೆ’, ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ವಿಚಾರ ಬಂದದರೆ ಅದರಲ್ಲಿ ತಪ್ಪೇನಿದೆ ?

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿರುವ ಓರ್ವ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ವರಿಷ್ಠರ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ನ್ಯಾಯಾಧೀಶೆಯು ನೌಕರಿಗೆ ರಾಜೀನಾಮೆ ನೀಡಿದ್ದಾರೆ. ಈ ಮಹಿಳೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಇಬ್ಬರು ನ್ಯಾಯಾಧೀಶರ ಸಮಿತಿಯನ್ನು ರಚಿಸಿತ್ತು; ಆದರೆ, ಪೀಡಿತ ಮಹಿಳಾ ನ್ಯಾಯಾಧೀಶೆಯು ಈ ಸಮಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆ ನ್ಯಾಯಧೀಶೆಯು ಯಾವ ವರಿಷ್ಠ ನ್ಯಾಯಾಧೀಶರ ವಿರುದ್ಧ ದೂರು ನೀಡಿದ್ದರೋ, ಆ ನ್ಯಾಯಧೀಶರ ವಿರುದ್ಧ ಮಹಾಅಭಿಯೋಗ ನಡೆಸುವ ಪ್ರಸ್ತಾಪಕ್ಕೆ ಸಂಸತ್ತಿನಲ್ಲಿ ಒಪ್ಪಿಗೆ ನೀಡಲಾಗಿತ್ತು.

೧. ಈ ಮಹಿಳಾ ನ್ಯಾಯಧೀಶೆಯು, ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದ ಕೂಡಲೇ ಆಂತರಿಕ ತನಿಖಾ ಸಮಿತಿಯನ್ನು ರಚಿಸಬೇಕಿತ್ತು. ಸಮಿತಿಯು ಪಾರದರ್ಶಕವಾಗಿ ತನಿಖೆ ನಡೆಸಬೇಕಿತ್ತು; ಆದರೆ, ಈ ನಿಯಮ ಪಾಲಿಸಿಲ್ಲ ಎಂದು ಹೇಳಿದರು.

೨. ಯಾವ ನ್ಯಾಯಧೀಶರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆಯೋ ಅವರು ಪೀಡಿತೆಯನ್ನು ಸ್ಥಳಾಂತರಿಸುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪವೂ ಮಾಡಲಾಗಿದೆ. ಈ ಮಹಿಳೆಯನ್ನು ‘ಸ್ಥಳಾಂತರಿಸಿ, ಇಲ್ಲದಿದ್ದರೆ ರಾಜೀನಾಮೆ ನೀಡಿ’ ಎಂದು ಒತ್ತಾಯಿಸಲಾಯಿತು.

೩. ಪೀಡಿತೆ ಮಹಿಳಾ ನ್ಯಾಯಾಧೀಶರ ಪರವಾಗಿ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ವಾದ ಮಂಡಿಸಲಿದ್ದಾರೆ. ಅವರು, ‘ಕೆಲಸದ ಸ್ಥಳದಲ್ಲಿ ಮಹಿಳಾ ನ್ಯಾಯಾಧೀಶರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ, ಅವರ ವಿರುದ್ಧ ದೂರು ದಾಖಲಿಸಲು ಯಾವುದೇ ವೇದಿಕೆ ಇಲ್ಲ. ನ್ಯಾಯಾಲಯದಲ್ಲಿ ಲೈಂಗಿಕ ಕಿರುಕುಳದ ದೂರಿಗಾಗಿ ಯಾವ ಸಮಿತಿಯನ್ನು ರಚಿಸಲಾಗಿತ್ತೋ ಅದರ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮಷ್ಟಕ್ಕೆ ಸೀಮಿತವಾಗಿದೆ”ಎಂದು ಹೇಳಿದರು. (ಈ ಆರೋಪದ ಬಗ್ಗೆ ಗಮನ ಹರಿಸಿ ಪೀಡಿತೆ ನ್ಯಾಯಧೀಶೆಗೆ ತಮ್ಮ ದೂರನ್ನು ಹೇಳಲು ವೇದಿಕೆಯನ್ನು ಕೊಡಲು ಸರಕಾರಿ ವ್ಯವಸ್ಥೆ ಈ ನಿಟ್ಟಿನಲ್ಲಿ ಪ್ರಯತ್ನಿಸುವುದೇ ? – ಸಂಪಾದಕರು)