
ಬಾಗಪತ್ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ. ನೀವು ಈಗ ಈ ವಿಷಯವನ್ನು ಪ್ರಸ್ತಾಪಿಸಿದ್ದೀರಿ; ಆದರೆ ಅಲ್ಲಿ ಬಹಳ ಹಿಂದಿನಿಂದಲೂ ಕಳ್ಳತನವಾಗುತ್ತಿದೆ. ಮಗುವಿನ ಲಕ್ಷಣ ತೊಟ್ಟಿಲಲ್ಲೇ ಕಾಣುತ್ತದೆ. ದೇವಾಲಯದ ನಿರ್ಮಾಣದ ಸಮಯದಲ್ಲಿ ತಜ್ಞರನ್ನು ಕರೆಯುವುದು ಅಗತ್ಯವಿತ್ತು. ದೇವಾಲಯದ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ 4 ಶಂಕರಾಚಾರ್ಯರು ಮತ್ತು 13 ಅಖಾಡಗಳ ಮುಖ್ಯಸ್ಥರು ಸಿದ್ಧರಿದ್ದರು; ಆದರೆ ಅವರನ್ನು ಬದಿಗಿಟ್ಟು ಸ್ವಂತದ ವಿಶೇಷ ಜನರನ್ನು ಟ್ರಸ್ಟ್‌ನಲ್ಲಿ ಸೇರಿಸಲಾಯಿತು. ನೀವು ನಿಮ್ಮ ವಿಶೇಷ ಜನರನ್ನು ಇರಿಸಿದಾಗ, ಅದರ ಅರ್ಥ ಅವರು ತಮ್ಮ ಕೆಲಸವನ್ನು ಮಾಡಬಹುದು; ಅದಕ್ಕಾಗಿಯೇ ಅವರನ್ನು ಇರಿಸಲಾಗಿತ್ತು. ಅಲ್ಲಿ ಕಳ್ಳತನವಾಗುತ್ತದೆ ಎಂಬುದು ಆಗಲೇ ಸ್ಪಷ್ಟವಾಗಿತ್ತು ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಪ್ರತಿಕ್ರಿಯಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಗೋಮಾತೆಯ ರಕ್ಷಣೆಗಾಗಿ ಮಾತ್ರ ಮತ ಚಲಾಯಿಸಿ!
ಗೋಮಾತೆಯ ರಕ್ಷಣೆಯ ಕುರಿತು ಶಂಕರಾಚಾರ್ಯರು ಮಾತನಾಡಿ, “ಗೋಮಾತೆಯು ಕೇವಲ ಶ್ರದ್ಧೆಯ ವಿಷಯವಲ್ಲ, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಗ್ರಾಮೀಣ ಆರ್ಥಿಕತೆಯ ಅಡಿಪಾಯವಾಗಿದೆ. ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನ ಸಿಗಬೇಕು ಎಂಬ ಉದ್ದೇಶದಿಂದ ನಾವು ಇಡೀ ಉತ್ತರ ಪ್ರದೇಶ ರಾಜ್ಯದಲ್ಲಿ ಜಾಗೃತಿ ಯಾತ್ರೆಯನ್ನು ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 200 ವಿಧಾನಸಭಾ ಕ್ಷೇತ್ರಗಳ ಜನರೊಂದಿಗೆ ಸಂವಾದ ನಡೆಸಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಗೋಮಾತೆಯ ರಕ್ಷಣೆಗಾಗಿ ಮಾತ್ರ ಮತ ಚಲಾಯಿಸಿ,” ಎಂದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ