‘ದೇವರು ನನ್ನ ಒಳಉಡುಪುಗಳ ಅಳತೆ ತೆಗೆದುಕೊಳ್ಳುತ್ತಾರೆ !’(ಅಂತೆ)

ಪತ್ರಿಕಾಗೋಷ್ಠಿಯಲ್ಲಿ ನಟಿ ಶ್ವೇತಾ ತಿವಾರಿ ಇವರಿಂದ ಖೇದಕರ ಹೇಳಿಕೆ

ಮಧ್ಯಪ್ರದೇಶದ ಗೃಹ ಸಚಿವರಿಂದ ಹೇಳಿಕೆ ನೀಡಿದ ಬಗ್ಗೆ ವಿಚಾರಣೆಯ ಆದೇಶ

ಹಿಂದೂಗಳು ಸಂಘಟಿತರಲ್ಲದ ಕಾರಣ ಯಾರೂ ಬೇಕಾದರೂ ಆಗಾಗ ದೇವತೆಗಳನ್ನು ಅವಮಾನಿಸುತ್ತಾರೆ ! ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ತೀವ್ರವಾಗಿ ಮತ್ತು ನ್ಯಾಯಸಮ್ಮತವಾಗಿ ಖಂಡಿಸಬೇಕು ಮತ್ತು ಸಂಬಂಧಪಟ್ಟ ನಟಿಯ ಕ್ಷಮೆಯಾಚಿಸುವಂತೆ ಮಾಡಬೇಕು !

ಭೋಪಾಲ – ದೇವರು ನನ್ನ ಒಳಉಡುಪುಗಳ ಅಳತೆ ತೆಗೆದುಕೊಳ್ಳುತ್ತಿದ್ದಾರೆ, ಎಂದು ನಟಿ ಶ್ವೇತಾ ತಿವಾರಿ ಭೋಪಾಲ್.ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮುಂಬರುವ ‘ವೆಬ್ ಸರಣಿ’ಯನ್ನು (ಇಂಟರನೆಟನಲ್ಲಿನ ಆನ್‌ಲೈನ್ ವಾಹಿನಿಗಳ ಮೂಲಕ ಪ್ರಸಾರವಾಗುವ ಸರಣಿ) ಘೋಷಿಸುವಾಗ ತಿವಾರಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ತಿವಾರಿ ಕ್ಷಮೆಯಾಚಿಸಬೇಕು, ಎಂದು ಜನರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ನೀಡುವಾಗ, ‘ಈ ಕಾರ್ಯಕ್ರಮದಲ್ಲಿ ನಟಿಯು ತಮಾಷೆಯಿಂದ ನೀಡಿದ ಹೇಳಿಕೆಗಾಗಿ ಅವರನ್ನು ಟ್ರೋಲ್ (ಟೀಕೆ) ಮಾಡುತ್ತಿದ್ದಾರೆ’, ಎಂದು ಅನೇಕ ಸುದ್ದಿವಾಹಿನಿಗಳು ವರದಿ ಮಾಡಿವೆ. (ಪತ್ರಿಕೆಗಳು ದೇವರು ಮತ್ತು ಧರ್ಮದ ಬಗ್ಗೆ ಕಿಂಚಿತ್ತೂ ಸಂವೇದನಾಶೀಲ ಇಲ್ಲದ್ದರಿಂದ, ನಟಿಯ ಗಂಭೀರ ಹೇಳಿಕೆಯನ್ನು ತಮಾಷೆಯಂತೆ ನೋಡುತ್ತಿವೆ ! – ಸಂಪಾದಕರು) ಈ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಇದನ್ನು ಸಹಿಸುವುದಿಲ್ಲ. ಭೋಪಾಲನ ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆ ನಡೆಸಿ ೨೪ ಗಂಟೆಯೊಳಗೆ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.