ಉತ್ತರಪ್ರದೇಶದ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿ ಚುನಾವಣೆ ಸ್ಪರ್ಧಿಸಲು ನಿರಾಕರಣೆ !

ಜಿಲ್ಲಾಧ್ಯಕ್ಷರಿಂದ ಶೋಷಣೆಗೊಳಗಾಗುತ್ತಿರುವ ಆರೋಪ

ಕಾಂಗ್ರೆಸ್ಸಿನ ಅಧ್ಯಕ್ಷ ಹುದ್ದೆಯು ಓರ್ವ ಮಹಿಳೆಯ ಕಡೆ ಇದೆ. ಉತ್ತರಪ್ರದೇಶದ ಪ್ರಮುಖ ಹುದ್ದೆ ಮಹಿಳೆಯ ಬಳಿಯಿದೆ. ಹೀಗಿರುವಾಗ ಪಕ್ಷದಲ್ಲಿ ಮಹಿಳೆಯರ ಶೋಷಣೆಯಾಗುತ್ತಿರುವ ಆರೋಪದಲ್ಲಿ ಸತ್ಯವಿದ್ದರೆ, ಇಂತಹ ಪಕ್ಷ ಅಧಿಕಾರಕ್ಕೆ ಬಂದಾಗ ಮಹಿಳೆಯರ ರಕ್ಷಣೆ ಮಾಡಲು ಎಂದಾದರೂ ಸಾಧ್ಯವಿದೆಯೇ ?

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದಲ್ಲಿರುವ ಶೇಖುಪೂರ ಚುನಾವಣಾ ಕ್ಷೇತ್ರದ ಕಾಂಗ್ರೆಸ್ಸಿನ ಮಹಿಳಾ ಅಭ್ಯರ್ಥಿ ಫರಾಹ ನಯೀಮ ಇವರು ‘ಕಾಂಗ್ರೆಸ್ಸಿನಲ್ಲಿ ಮಹಿಳೆಯರ ಶೋಷಣೆಯಾಗುತ್ತಿದೆ’, ಎಂದು ಆರೋಪಿಸುತ್ತಾ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಪಕ್ಷದ ಬದಾಯೂ ಜಿಲ್ಲಾಧ್ಯಕ್ಷ ಓಂಕಾರ ಸಿಂಹ ಇವರ ಮೇಲೆ ಆರೋಪ ಮಾಡುತ್ತಾ ಅವರು ಇದನ್ನು ನಿರಾಕರಿಸಿದರು. ಸಿಂಹ ಇವರ ಮೇಲೆ ಕ್ರಮ ಜರುಗಿಸುವಂತೆ ಅವರು ಕೋರಿದ್ದಾರೆ. ಈ ವಿಷಯದ ಕುರಿತು ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾಡ್ರಾ ಇವರಿಗೆ ಪತ್ರವನ್ನು ಕಳುಹಿಸಿದ್ದಾರೆ.

ಫರಾಹ ನಯೀಮ ಇವರು ಪ್ರಿಯಾಂಕಾ ವಾಡ್ರಾ ಇವರಿಗೆ ಬರೆದಿರುವ ಪತ್ರದಲ್ಲಿ,

ಬದಾಯೂನ ಸಂಘಟನೆಯಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ. ಜಿಲ್ಲಾಧ್ಯಕ್ಷರಾದ ಓಂಕಾರ ಸಿಂಹ ‘ಮುಸಲ್ಮಾನ ಮಹಿಳೆಯರಿಗೆ ತಿಕೀಟು ಕೊಡಬಾರದು’, ಎಂದು ಹೇಳುತ್ತಿದ್ದಾರೆ. ನಾನು ಚಾರಿತ್ರ್ಯಹೀನಳಾಗಿರುವ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಅನೇಕ ಕೆಟ್ಟ ಆರೋಪಗಳನ್ನು ಹೊರಿಸಲಾಗಿದೆ. ನಾನು ಕಾಂಗ್ರೆಸ್ಸಿನ ಸೇವೆಯನ್ನು ಮಾಡಿದ್ದೇನೆ; ಆದರೆ ಅವನು ನನ್ನ ಮೇಲೆ ಇಂತಹ ಆರೋಪ ಮಾಡಿದ್ದಾರೆ. ಇದರಿಂದ ಬಹಳ ನೊಂದಿದ್ದೇನೆ. ಓಂಕಾರ ಸಿಂಹ ಮಾತನಾಡುವಾಗ ಅನೇಕ ಬಾರಿ ಅಶ್ಲೀಲ ಶಬ್ದಗಳನ್ನು ಉಪಯೋಗಿಸುತ್ತಾರೆ. ಓಂಕಾರ ಸಿಂಹ ನನಗೆ ತಿಕೀಟು ಸಿಗಬಾರದೆಂದು ಬಹಳಷ್ಟು ಸಲ ಪ್ರಯತ್ನಿಸಿದರು ಎಂದು ಹೇಳಿದೆ.