ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!

ರಾಂಚಿ (ಜಾರ್ಖಂಡ್) – ಇಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿಯ ಮೇಲೆ ಜೂನ್ 16ರ ರಾತ್ರಿ ಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾದ ಘಟನೆ ನಡೆದಿದೆ. ಅದೃಷ್ಟವಶಾತ್, ಎರಡೂ ಬಾಟಲಿಗಳು ಕಚೇರಿಯ ಆವರಣದೊಳಗೆ ತಲುಪಲು ಸಾಧ್ಯವಾಗಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. ಬೆಳಗ್ಗೆ ಸ್ವಯಂಸೇವಕರು ಕಚೇರಿಯ ಆವರಣಕ್ಕೆ ಬಂದಾಗ ಅವರಿಗೆ ಈ ಘಟನೆಯ ಬಗ್ಗೆ ಮಾಹಿತಿ ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ಯುವಕರು ಪೆಟ್ರೋಲ್ ಬಾಂಬ್ ಎಸೆಯುತ್ತಿರುವುದು ಕಂಡುಬಂದಿದೆ. ಆನಂತರ ಈ ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.