ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ

ಭಯೋತ್ಪಾದಕರೊಂದಿಗೆ ಸಂಬಂಧವಿರುವುದಾಗಿ ಹೇಳಿ ಕುಟುಂಬವನ್ನು ಕೊಂದು ಹಾಕುವ ಬೆದರಿಕೆ ಹಾಕಿದ

ಬದಾಯೂ (ಉತ್ತರ ಪ್ರದೇಶ) – ಬದಾಯೂ ಜಿಲ್ಲೆಯ ಸಹಸವಾನ ನಗರದಲ್ಲಿ ಮಹಮ್ಮದ್ ಫೈಜಿ ಎಂಬಾತನು 16 ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ ನಡೆಸಿರುವ ಆಕ್ರೋಶದಾಯಕ ಘಟನೆ ಮುನ್ನೆಲೆಗೆ ಬಂದಿದೆ. ಫೈಜಿಯು ಸಂತ್ರಸ್ತೆಯ ಅಶ್ಲೀಲ ವೀಡಿಯೊಗಳನ್ನು ತಯಾರಿಸಿ ಆಕೆಗೆ ಬೆದರಿಕೆ ಹಾಕಿದ್ದನು. ಅಷ್ಟೇ ಅಲ್ಲದೆ, ಫೈಜಿಯು ಸಂತ್ರಸ್ತೆಯ ಮೇಲೆ ಇಸ್ಲಾಂ ಸ್ವೀಕರಿಸಲು ಒತ್ತಡ ಹೇರಿದ್ದನು ಮತ್ತು ತನಗೆ ಭಯೋತ್ಪಾದಕರೊಂದಿಗೆ ಸಂಬಂಧಗಳಿದ್ದು ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದನು. ಈ ಪ್ರಕರಣವು ಬೆಳಕಿಗೆ ಬಂದ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ತಲುಪಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. ತದನಂತರ ಪೊಲೀಸರು ಫೈಜಿಯನ್ನು ಬಂಧಿಸಿದರು. ಆರೋಪಿ ಫೈಜಿ ಮೇಲೆ ಈ ಹಿಂದೆಯೂ ಅಪರಾಧ ಸ್ವರೂಪದ ಮೊಕದ್ದಮೆಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ಇಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನೇ ನೀಡುವುದು ಅಗತ್ಯವಾಗಿದೆ! ಸರಕಾರವು ಅಂತಹ ಕಾನೂನನ್ನು ಮಾಡಬೇಕು!