ಮತಾಂತರಕ್ಕಾಗಿ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಹಿಂದೂ ವಿದ್ಯಾರ್ಥಿನಿ ಲಾವಣ್ಯಳ ವ್ಯಥೆ ವಿಡಿಯೋ ಮೂಲಕ ಬಹಿರಂಗ

ನನಗೆ ಓದಲು ಬಿಡದೆ ವಸತಿಗೃಹದಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಲಾಯಿತು !

ಇಡೀ ಪ್ರಕರಣವನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಹಿಂದೂಗಳಿಗೆ ಅಪೇಕ್ಷಿತವಿದೆ !

ಚೆನ್ನೈ : ತಮಿಳುನಾಡಿನ ಕಾನ್ವೆಂಟ್ ಶಾಲೆಯೊಂದರಲ್ಲಿ ಮತಾಂತರವಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಂಜಾವೂರಿನ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲಾವಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನದ ಒಂದು ವಿಡಿಯೋ ಇದೀಗ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಆಕೆ ‘ನನಗೆ ವಸತಿ ನಿಲಯದಲ್ಲಿ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದರು ಮತ್ತು ಓದಲು ಬಿಡುತ್ತಿರಲಿಲ್ಲ’, ಎಂದು ದೂರುತ್ತಾ ಆಕೆಯ ಶಾಲೆಯು ತನ್ನನ್ನು ಮತಾಂತರಕ್ಕೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿದ್ದಾಳೆ.

ವಿಡಿಯೋದಲ್ಲಿ ಲಾವಣ್ಯ ಮುಂದಿನ ಆರೋಪ ಮಾಡಿದ್ದಾಳೆ,

೧. ವಸತಿ ಗೃಹದ ಮಹಿಳಾ ‘ವಾರ್ಡನ್’(ವ್ಯವಸ್ಥೆಯನ್ನು ನೋಡಿಕೊಳ್ಳುವ) ಸಮಾಯಾ ಮೇರಿಯು ನನ್ನನ್ನು ಲೆಕ್ಕಚಾರ ಮಾಡಲು ಹೇಳುತ್ತಿದ್ರು. ನಾನು ‘ನನಗೆ ಅಭ್ಯಾಸ ಮಾಡಬೇಕಿದೆ’, ಎಂದಾಗ ‘ಈ ಕೆಲಸ ಮುಗಿಸಿ ಆಮೇಲೆ ಬೇರೆ ಕೆಲಸ ಮಾಡು’, ಎನ್ನುತ್ತಿದ್ದರು. ನಾನು ಸರಿಯಾಗಿ ಲೆಕ್ಕಾಚಾರ ಮಾಡಿದ್ದರೂ, ಲೆಕ್ಕ ತಪ್ಪಿದೆ’, ಎಂದು ಹೇಳಿ ಪುನಃ ಲೆಕ್ಕಚಾರ ಮಾಡುವಂತೆ ಮಾಡುತ್ತಿದ್ದಳು. ಸಮಾಯಾ ಮೇರಿ ನನಗೆ ವಸತಿಗೃಹದ ಗೇಟ್ ಮುಚ್ಚುವುದು ಮತ್ತು ತೆರೆಯುವ, ನೀರಿನ ವಿದ್ಯುತ್ ಪಂಪ್ ಆರಂಭಿಸುವುದು ಮತ್ತು ಬಂದ್ ಮಾಡುವುದು ಇತ್ಯಾದಿ ಕೆಲಸಗಳನ್ನು ಹೇಳಿದರು.

೨. ‘ಶಾಲೆಯಲ್ಲಿ ಕುಂಕುಮ ಹಚ್ಚಬಾರದು’, ಎಂಬ ನಿಯಮವಿದೆಯೇ’, ಎಂದು ಆಕೆಯನ್ನು ಕೇಳಿದಾಗ ಅಂಥದ್ದೇನೂ ಇಲ್ಲ ಎಂದು ಉತ್ತರಿಸಿದಳು.

೩. ನಾನು ೧೦ ನೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ ಮತ್ತು ನನಗೆ ಚೆನ್ನಾಗಿ ಓದುವ ಇಚ್ಛೆ ಇತ್ತು; ಆದರೆ ನನಗೆ ವಹಿಸಿದ ಕೆಲಸದ ಕಾರಣ ನನಗೆ ಸರಿಯಾಗಿ ಓದಲು ಸಾಧ್ಯವಾಗಲಿಲ್ಲ. ಕೌಟುಂಬಿಕ ಸಮಸ್ಯೆಯಿಂದಾಗಿ ಈ ವರ್ಷ ಶಾಲೆಗೆ ತಡವಾಗಿ ಸೇರಿದೆ.

೪. ಈ ಎಲ್ಲಾ ಕಾರಣಗಳಿಂದ ನನಗೆ ನನಗೆ ಅಭ್ಯಾಸದ ಕಡೆ ಗಮನಹರಿಸಲು ಸಾಧ್ಯವಾಗಲಿಲ್ಲ ಮತ್ತು ನನಗೆ ಕಡಿಮೆ ಅಂಕಗಳು ಬಂದವು. ಅದು ನನಗೆ ಸಹಿಸಲಾಗಲಿಲ್ಲ; ಹಾಗಾಗಿ ನಾನು ವಿಷ ಕುಡಿದೆ.

೫. ನಾನು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಶಾಲೆಯವರು ನನ್ನನ್ನು ಮನೆಗೆ ಹೋಗಲು ಬಿಟ್ಟರು. ‘ಆಗ ನಾನು ವಿಷ ಕುಡಿದೆ’, ಇದು ಶಾಲೆಯ ಆಡಳಿತ ಮಂಡಳಿಗೆ ಗೊತ್ತಿರಲಿಲ್ಲ.

೬. ‘ನನಗೆ ಪೊಂಗಲ್ ನಿಮಿತ್ತ ಮನೆಗೆ ಹೋಗಬೇಕೆಂದುಕೊಂಡಿದ್ದೆ, ಆದರೆ ಅಭ್ಯಾಸದ ಕಾರಣ ನೀಡುತ್ತಾ ವಾರ್ಡನ್ ನನಗೆ ಹೋಗಲು ಅವಕಾಶ ನೀಡದೆ ವಸತಿಗೃಹದಲ್ಲಿ ಇರುವಂತೆ ಮಾಡಿದರು’, ಎಂದು ಲಾವಣ್ಯ ವಿಡಿಯೋದಲ್ಲಿ ಆರೋಪಿಸಿದ್ದಾಳೆ.

ವೀಡಿಯೋ ಮಾಡುವವರ ತನಿಖೆಯಾಗಬೇಕು ! – ಸರ್ವೋಚ್ಚ ನ್ಯಾಯಾಲಯ

ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯ ಪೀಠವು ಲಾವಣ್ಯಳ ಸಾವಿಗೆ ಕೆಲವು ದಿನಗಳ ಮೊದಲು ಆಕೆ ಮಾಡಿದ ಆರೋಪಗಳ ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿಯನ್ನು ವಿಚಾರಣೆಗೆ ಹಾಜರಾಗಲು ಮತ್ತು ಚಿತ್ರೀಕರಣಕ್ಕೆ ಬಳಸಿದ ಸಂಚಾರವಾಣಿಯನ್ನು ಜಮೆ ಮಾಡಲು ಆದೇಶಿಸಿದೆ. ‘ಈ ಘಟನೆಯ ಕುರಿತು ಅಪರಾಧ ತನಿಖಾ ದಳದಿಂದ ತನಿಖೆ ನಡೆಸುವಂತೆ ಕೋರಿ ಬಾಲಕಿಯ ತಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಆರೋಪಗಳನ್ನು ತಳ್ಳಿ ಹಾಕಿದ ಕಾನ್ವೆಂಟ್ ಶಾಲೆ

ಈ ಪ್ರಕರಣದ ಬಗ್ಗೆ ಶಾಲಾ ಆಡಳಿತ ಮಂಡಳಿ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ. ‘ಆಡಳಿತವು ವಿದ್ಯಾರ್ಥಿಗಳ ಯಾವುದೇ ಧಾರ್ಮಿಕ ಶ್ರದ್ಧೆಯ ಬಗ್ಗೆ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ನಮ್ಮ ಸಂಸ್ಥೆಯು ೧೮೦ ವರ್ಷಗಳಿಂದ ವಂಚಿತರು ಹಾಗೂ ಶಿಕ್ಷಣದಿಂದ ದೂರವಿರುವ ಮಕ್ಕಳಿಗೆ ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ಈ ಶಾಲೆಯನ್ನು ನಡೆಸುತ್ತಿದೆ’, ಎಂದು ಆಡಳಿತ ಮಂಡಳಿ ತಿಳಿಸಿದೆ.