ಗಡಿ ಬಳಿಯ ರಸ್ತೆಯಲ್ಲಿ ಅಂಗಡಿ ತೆರೆದು ಸೇನೆಯ ಚಲನವಲನಗಳ ಬೇಹುಗಾರಿಕೆ ನಡೆಸುತ್ತಿದ್ದ

ಜೈಸಲ್ಮೇರ್ (ರಾಜಸ್ಥಾನ) – ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಜೈಸಲ್ಮೇರ್ ಜಿಲ್ಲೆಯಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮುಸ್ತಾಕ್ ಅಲಿ ಎಂಬಾತನನ್ನು ಬಂಧಿಸಲಾಗಿದೆ. ಈತ ಸುಮಾರು 2 ವರ್ಷಗಳಿಂದ ಪಾಕಿಸ್ತಾನದ ‘ಹ್ಯಾಂಡ್ಲರ್ಸ್’ (ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಕಾರ್ಯಾಚರಣೆ ನಡೆಸುವ ವ್ಯಕ್ತಿಗಳು) ಸಂಪರ್ಕದಲ್ಲಿದ್ದ ಹಾಗೂ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ.
ಅಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸಂಪರ್ಕಕ್ಕೆ ಬಂದಿದ್ದನು. ಗಡಿ ಪ್ರದೇಶಕ್ಕೆ ಹೋಗುವ ಪ್ರಮುಖ ಮಾರ್ಗದಲ್ಲಿ ಅಂಗಡಿಯೊಂದನ್ನು ನಡೆಸಲು ಆತನಿಗೆ ಪ್ರೇರೇಪಿಸಲಾಗಿತ್ತು. ಆತ ಅಂಗಡಿಯ ಮರೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ಸೇನೆಯ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದನು. ಸೈನಿಕರ ಓಡಾಟ, ಸೇನಾ ವಾಹನಗಳ ಚಲನೆ ಮತ್ತು ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಮುಂದೆ ಕಳುಹಿಸಲಾಗುತ್ತಿತ್ತು. ಆತ ಹಣಕ್ಕಾಗಿ ಈ ಬೇಹುಗಾರಿಕೆ ಮಾಡುತ್ತಿದ್ದನು. ಮುಸ್ತಾಕ್ ಅಲಿ ಒಬ್ಬನೇ ಬೇಹುಗಾರಿಕೆ ನಡೆಸುತ್ತಿದ್ದನೇ ಅಥವಾ ಆತನೊಂದಿಗೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ