
ಲಂಡನ್ (ಬ್ರಿಟನ್) – ಕೆಲವು ದಿನಗಳ ಹಿಂದೆ ರಷ್ಯಾಕ್ಕೆ ಸೇರಿದ ತೈಲ ಸಾಗಣೆ ನೌಕೆಯೊಂದರ ಮೇಲೆ ಬ್ರಿಟನ್ ಕ್ರಮ ಕೈಗೊಂಡು ಭಾರತೀಯ ಕ್ಯಾಪ್ಟನ್ ಅಜಯ್ ಪಂತ್ ಅವರನ್ನು ಬಂಧಿಸಿತ್ತು. ಈಗ ಇದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಯುದ್ಧನೌಕೆಯನ್ನು ‘ಇಂಗ್ಲಿಷ್ ಚಾನೆಲ್’ (ಜಲಸಂಧಿ) ಪ್ರದೇಶದಲ್ಲಿ ನಿಯೋಜಿಸಿದೆ. ರಷ್ಯಾದ ನೌಕಾದಳದ ‘ಅಡ್ಮಿರಲ್ ಗ್ರಿಗೊರೊವಿಚ್’ ನೌಕೆಯು ಬ್ರಿಟಿಷ್ ಧ್ವಜ ಹೊಂದಿದ್ದ ಸಣ್ಣ ನೌಕೆಯೊಂದರ ಮುಂದೆ ಎಚ್ಚರಿಕೆಯಾಗಿ ಗುಂಡಿನ ದಾಳಿ ನಡೆಸಿದೆ; ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಂತರ ಆ ನೌಕೆ ತನ್ನ ಮಾರ್ಗ ಬದಲಾಯಿಸಿತು. ಬ್ರಿಟನ್ ನ ರಕ್ಷಣಾ ಸಚಿವಾಲಯವೂ ಈ ಘಟನೆಯನ್ನು ಖಚಿತಪಡಿಸಿದೆ.
ಕ್ಯಾಪ್ಟನ್ ಪಂತ್ ಅವರು ರಷ್ಯಾದಿಂದ ನಿಷೇಧಿತ ತೈಲವನ್ನು ಮೂರನೇ ದೇಶಕ್ಕೆ ಸಾಗಿಸಿರುವುದು ಮತ್ತು ಬ್ರಿಟಿಷ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆಂದು ಬ್ರಿಟನ್‌ನ ‘ನ್ಯಾಷನಲ್ ಕ್ರೈಮ್ ಏಜೆನ್ಸಿ’ ಆರೋಪಿಸಿದೆ. ಕ್ಯಾಪ್ಟನ್ ಪಂತ್ ಅವರನ್ನು ಬ್ರಿಟನ್ ನ ಸೌತಾಂಪ್ಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು