
ಇಸ್ಲಾಮಾಬಾದ್ (ಪಾಕಿಸ್ತಾನ) – ಅಮೆರಿಕ ಮತ್ತು ಇರಾನ್ ನಡುವೆ ಯುದ್ಧವನ್ನು ಕೊನೆಗೊಳಿಸಲು ಐತಿಹಾಸಿಕ ಶಾಂತಿ ಒಪ್ಪಂದ ನಡೆದಿದೆ. ಇನ್ನೊಂದು ಕಡೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಇದರ ಕೀರ್ತಿಯನ್ನು ಪಡೆದಿದ್ದಾರೆ.
ಶಹಬಾಜ್ ಶರೀಫ್ ಅವರು, ನಾನು ಸಂತೋಷ ಮತ್ತು ತೃಪ್ತಿಯಿಂದ ಘೋಷಿಸುತ್ತಿದ್ದೇನೆ ಎಂದು ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ‘ಇಸ್ಲಾಮಾಬಾದ್ ಒಪ್ಪಂದ’ಕ್ಕೆ ಎಲೆಕ್ಟ್ರಾನಿಕ್ ಮೂಲಕ ಸಹಿ ಹಾಕಲಾಗಿದೆ. ಮಧ್ಯವರ್ತಿಯಾಗಿ ನಾನೂ ಅದನ್ನು ಅನುಮೋದಿಸಿದ್ದೇನೆ. ಇಸ್ಲಾಮಾಬಾದ್ ಒಪ್ಪಂದ ತಕ್ಷಣವೇ ಜಾರಿಗೆ ಬರಲಿದೆ. ಒಪ್ಪಂದದ ಮೊದಲ ಹಂತದಲ್ಲಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಿದೆ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳು ತಕ್ಷಣವೇ ನೌಕಾ ದಿಗ್ಬಂಧನವನ್ನು ತೆಗೆದುಹಾಕಲಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಾನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಶ್ಲಾಘಿಸುತ್ತೇನೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ಅವರ ದೃಢ ಬದ್ಧತೆ ಮತ್ತು ಶಾಂತಿಯುತ ಪರಿಹಾರಕ್ಕೆ ನೀಡಿದ ಆದ್ಯತೆಯಿಂದಾಗಿ ಈ ಸಂಘರ್ಷ ಅಂತ್ಯಗೊಂಡಿದೆ, ಇದು ಈ ಪ್ರದೇಶಕ್ಕೆ ಮತ್ತು ಜಗತ್ತಿಗೂ ಅತ್ಯಂತ ವಿನಾಶಕಾರಿಯಾಗಬಹುದಿತ್ತು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ