ಪೂ. ಭಯ್ಯೂಜಿ ಮಹಾರಾಜರ ಆತ್ಮಹತ್ಯೆಯ ಪ್ರಕರಣದಲ್ಲಿ ಸೇವಕ, ವಾಹನಚಾಲಕ ಮತ್ತು ಅವರ ಆರೈಕೆಯ ಸೇವಕಿಗೆ ೬ ವರ್ಷಗಳ ಸೆರೆಮನೆ ಶಿಕ್ಷೆ !

ಇಂದೂರ (ಮಧ್ಯಪ್ರದೇಶ) – ಪೂ. ಭಯ್ಯೂಜಿ ಮಹಾರಾಜರಿಗೆ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಇಂದೂರ ನ್ಯಾಯಾಲಯವು ಪೂ. ಮಹಾರಾಜರ ಸೇವಕ ವಿನಾಯಕ ದುಧಾಳೆ, ವಾಹನ ಚಾಲಕ ಶರದ ದೇಶಮುಖ ಮತ್ತು ಕೇಅರ್ ಟೇಕರ(ಆರೈಕೆ ಮಾಡುವವರು) ಪಲಕ ಇವರನ್ನು ಸಾಕ್ಷಿಗಳ ಆಧಾರದಲ್ಲಿ ದೋಷಿಯೆಂದು ನಿರ್ಧರಿಸಿದ್ದಾರೆ. ಈ ಮೂವರಿಗೆ ೬ ವರ್ಷಗಳ ಸೆರೆಮನೆಯ ಶಿಕ್ಷೆ ನೀಡಲಾಗಿದೆ. ದೋಷಿಯೆಂದು ನಿರ್ಧರಿಸಿರುವ ಪಲಕ ಯುವತಿಯು ಪೂ. ಭಯ್ಯೂಜಿ ಮಹಾರಾಜರಿಂದ ಲಕ್ಷಾಂತರ ರೂಪಾಯಿಗಳನ್ನು ಕಿತ್ತಿಕೊಂಡಿರುವ ಆರೋಪವಿದೆ. ೨೦೧೮ ರಲ್ಲಿ ಪೂ. ಭಯ್ಯೂಜಿ ಮಹಾರಾಜರು ತಮ್ಮ ಪರವಾನಿಗೆ ಹೊಂದಿದ್ದ ರಿವ್ಹಾಲ್ವರನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಯ ಮೊದಲು ಅವರು ಚೀಟಿಯನ್ನು ಬರೆದಿಟ್ಟಿದ್ದರು. ಪ್ರಾರಂಭದಲ್ಲಿ ಕೌಟುಂಬಿಕ ಕಲಹ ಅಥವಾ ನಿರಾಶೆ ಈ ಎರಡು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ಹೇಳಲಾಗಿತ್ತು. ವಿಶೇಷವೆಂದರೆ ಆತ್ಮಹತ್ಯೆಯ ಮೊದಲು ಕೆಲವು ತಿಂಗಳು ಮೊದಲೇ ಅವರು ‘ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯದಿಂದ ನಾನು ಈಗ ನಿವೃತ್ತನಾಗುತ್ತಿದ್ದೇನೆ’, ಎಂದು ಘೋಷಿಸಿದ್ದರು.

ಪೂ. ಭಯ್ಯೂಜಿ ಮಹಾರಾಜರ ಮಾಹಿತಿ

ಪೂ. ಭಯ್ಯೂಜಿ ಮಹಾರಾಜರು ಇಂದೂರನವರಾಗಿದ್ದು, ದೇಶಾದ್ಯಂತ ಇರುವ ರಾಜಕೀಯ ಮುಖಂಡರು ಮತ್ತು ಚಲನಚಿತ್ರ ಕಲಾವಿದರು ಪೂ. ಭಯ್ಯೂಜಿ ಮಹಾರಾಜರ ಅನುಯಾನಿಗಳಾಗಿದ್ದರು. ದೇವೆಂದ್ರ ಫಡ್ನವೀಸ, ವಿಲಾಸರಾವ ದೇಶಮುಖ ಮತ್ತು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರ ಬಳಿ ಚರ್ಚೆಗಾಗಿ ಹೋಗುತ್ತಿದ್ದರು. ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳೂವ ರೈತರ ಮಕ್ಕಳಿಗಾಗಿ ಪೂ. ಭಯ್ಯೂಜಿ ಮಹಾರಾಜರು ಬಹಳ ದೊಡ್ಡ ಕಾರ್ಯವನ್ನು ಮಾಡಿದ್ದಾರೆ. ಮರಾಠವಾಡಾದಲ್ಲಿ ಅವರ ಸಂಸ್ಥೆಯು ೫೦೦ ಕೆರೆಗಳನ್ನು ನಿರ್ಮಿಸಿದೆ. ಸಸಿ ನೆಡುವ ಕಾರ್ಯಕ್ರಮಕ್ಕೆ ಅವರು ದೊಡ್ಡ ಚಾಲನೆಯನ್ನು ನೀಡಿದರು. ಜನರಿಂದ ಅವರು ಯಾವುದೇ ಉಡುಗೊರೆಯನ್ನು ಸ್ವೀಕರಿಸುತ್ತಿರಲಿಲ್ಲ. ಅದರ ಬದಲು ‘ಒಂದು ಗಿಡವನ್ನು ನೆಡಿರಿ’, ಎಂದು ಅವರು ಹೇಳುತ್ತಿದ್ದರು.