ಕೊಯಮತ್ತೂರಿನ 100 ವರ್ಷಗಳ ಹಳೆಯ ‘ಮಾರಿಯಮ್ಮನ್’ ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಾಣಕ್ಕೆ ಮಧ್ಯಂತರ ತಡೆ!

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಕೊಯಮತ್ತೂರಿನ 100 ವರ್ಷಗಳ ಹಳೆಯ ‘ಮಾರಿಯಮ್ಮನ್’ ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಾಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ‘ದೇವಸ್ಥಾನದ ಆವರಣದಲ್ಲಿ ದೊಡ್ಡ ಚರ್ಚ್ ನಿರ್ಮಿಸುವ ಪ್ರಸ್ತಾವನೆಯ ಹಿಂದೆ ದುರುದ್ದೇಶವಿಲ್ಲ ಎಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣನ್ ಅವರಿದ್ದ ನ್ಯಾಯಪೀಠವು ಬಾಲಸುಬ್ರಹ್ಮಣ್ಯಂ ಎನ್. (ಕೊಯಮತ್ತೂರಿನ ಕಲಾಪಟ್ಟಿಯ ನಿವಾಸಿ) ಸಲ್ಲಿಸಿದ್ದ ಅರ್ಜಿಯ ಮೇಲೆ ಈ ಮಧ್ಯಂತರ ಆದೇಶವನ್ನು ನೀಡಿದೆ.
ನ್ಯಾಯಾಲಯವು ನಮೂದಿಸಿದ ಅವಲೋಕನಗಳು
1. ಕೊಯಮತ್ತೂರು ಧಾರ್ಮಿಕವಾಗಿ ಸೂಕ್ಷ್ಮವಾದ ನಗರವಾಗಿದೆ. ಇಲ್ಲಿ ಬಾಂಬ್ ಸ್ಫೋಟಗಳು ಮತ್ತು ಹಿಂಸಾತ್ಮಕ ಧಾರ್ಮಿಕ ಗಲಭೆಗಳು ನಡೆದಿವೆ. ಪ್ರಸ್ತಾವಿತ ಚರ್ಚ್ ಪ್ರಸ್ತುತ ಮಾರಿಯಮ್ಮನ್ ದೇವಸ್ಥಾನದಿಂದ ಕೂಗಳತೆಯ ದೂರದಲ್ಲಿದೆ. ಈ ಪ್ರದೇಶದಲ್ಲಿ ಕ್ರೈಸ್ತ ಕುಟುಂಬಗಳ ಸಂಖ್ಯೆ ಬಹಳ ಕಡಿಮೆ ಇದೆ. ಅಂತಹ ಸ್ಥಳದಲ್ಲಿ ದೊಡ್ಡ ಚರ್ಚ್ ಕಟ್ಟುವ ಪ್ರಸ್ತಾವನೆಯಿದ್ದರೆ, ‘ಅದರ ಹಿಂದೆ ದುರುದ್ದೇಶವಿಲ್ಲ’ ಎಂದು ಹೇಳಲು ಸಾಧ್ಯವಿಲ್ಲ.
2. ಸ್ಥಳೀಯ ಪ್ರದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಮತ್ತು ಅವರು ದೇವಸ್ಥಾನದ ಆವರಣದಲ್ಲಿ ಚರ್ಚ್ ನಿರ್ಮಿಸುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಹಿಂದೂಗಳು ಬಹುಸಂಖ್ಯಾತರಾಗಿರುವಾಗ ಮತ್ತು ಅವರು ದೇವಸ್ಥಾನದ ಆವರಣದಲ್ಲಿ ಚರ್ಚ್ ನಿರ್ಮಿಸುವುದನ್ನು ಬಲವಾಗಿ ವಿರೋಧಿಸುತ್ತಿರುವಾಗ, ಆಡಳಿತವು ಈ ವಿರೋಧವನ್ನು ನಿರ್ಲಕ್ಷಿಸುವಂತಿಲ್ಲ.
3. ಭಾರತೀಯ ಸಂವಿಧಾನದ 25ನೇ ವಿಧಿಯು ಧರ್ಮವನ್ನು ಪಾಲಿಸುವ ಮತ್ತು ಪ್ರಸಾರ ಮಾಡುವ ಹಕ್ಕನ್ನು ನೀಡುತ್ತದೆ; ಆದರೆ ಈ ಹಕ್ಕು ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟಿರುತ್ತದೆ. ಕಾನೂನುಬದ್ಧ ಹಕ್ಕು ಸಾಬೀತಾದರೆ ಅಥವಾ ವಿರೋಧವು ಅಸಮಂಜಸವೆಂದು ಕಂಡುಬಂದರೆ, ಆ ಹಕ್ಕನ್ನು ಎತ್ತಿಹಿಡಿಯಲು ಸರಕಾರವು ಯಾವುದೇ ಹಂತಕ್ಕೆ ಹೋಗಬಹುದು.
4. ಪ್ರಸ್ತುತ ಪ್ರಕರಣದಲ್ಲಿ ಚರ್ಚ್ ನಿರ್ಮಾಣವನ್ನು ತಡೆಯಲು ಮೇಲ್ನೋಟಕ್ಕೆ ಬಲವಾದ ಕಾರಣವಿದೆ ಎಂದು ನ್ಯಾಯಪೀಠವು ಕಂಡುಕೊಂಡಿದೆ. ಮಧ್ಯಂತರ ಆದೇಶವನ್ನು ನೀಡದಿದ್ದರೆ, ಸಾಮಾಜಿಕ ಸಾಮರಸ್ಯಕ್ಕೆ ಭಾರಿ ಹಾನಿಯಾಗುತ್ತದೆ.
5. ರಾಜಕೀಯ ಪರಿಸ್ಥಿತಿ ಬದಲಾಗಬಹುದು; ಆದರೆ ಕಾನೂನಿನ ಸ್ಥಿತಿಯು ಜಾರಿಯಲ್ಲಿರುವವರೆಗೆ, ಅದನ್ನು ಜಾರಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಮಧ್ಯಪ್ರದೇಶದ ಮೌಲಾನಾ ಬಂಧನ !