ಪರತೂರು (ಜಾಲನಾ ಜಿಲ್ಲೆ) ನ ‘ಕಿಡ್ಸ್ ವರ್ಲ್ಡ್ ಇಂಗ್ಲಿಷ್ ಸ್ಕೂಲ್’ನ ವಾರ್ಷಿಕ ಸ್ನೇಹಸಮ್ಮೇಳನದ ವಿಡಿಯೋ ಪ್ರಸಾರ
ಕಾಂಗ್ರೆಸ್ ನಾಯಕ ತಾರಿಕ್ ಸಿದ್ದಿಕಿ ಒಡೆತನದ ಶಾಲೆ
‘ಟ್ರೀನಿ’ ಎಂಬ ಎಕ್ಸ್ (ಟ್ವಿಟರ್) ಖಾತೆಯು ವಿಡಿಯೋ ಪ್ರಸಾರ ಮಾಡಿದ್ದಕ್ಕೆ ಶಾಲೆ ವತಿಯಿಂದ ಮೊಕದ್ದಮೆ ಹೂಡುವ ಬೆದರಿಕೆ
(ಗುಸ್ತಾಖ್-ಎ-ನಬಿ ಕಿ ಏಕ್ ಸಜಾ, ಸರ್ ತನ್ ಸೆ ಜುದಾ ಎಂದರೆ ಮೊಹಮ್ಮದ್ ಪೈಗಂಬರ್ ಅವರಿಗೆ ಅಪಮಾನ ಮಾಡಿದ್ದಕ್ಕೆ ಒಂದೇ ಶಿಕ್ಷೆ – ಶಿರಚ್ಛೇದನ)

ಜಾಲನಾ / ನವದೆಹಲಿ – ಜಾಲನಾ ಜಿಲ್ಲೆಯ ಪರತೂರು ನಗರದಲ್ಲಿರುವ ‘ಕಿಡ್ಸ್ ವರ್ಲ್ಡ್ ಇಂಗ್ಲಿಷ್ ಸ್ಕೂಲ್’ನ ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಶಾಲಾ ವಿದ್ಯಾರ್ಥಿಗಳು ನಕಲಿ ಕತ್ತಿಗಳನ್ನು ಹಿಡಿದುಕೊಂಡು ‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ, ಸರ್ ತನ್ ಸೆ ಜುದಾ’ ಎಂಬ ಪಾಕಿಸ್ತಾನಿ ಇಸ್ಲಾಮಿಕ್ ಹಾಡಿಗೆ ನೃತ್ಯ ಪ್ರದರ್ಶನ ಮಾಡುತ್ತಿರುವುದು ಕಂಡುಬಂದಿದೆ. ಇದರೊಂದಿಗೆ ವೇದಿಕೆಯ ಹಿಂಭಾಗದಲ್ಲಿ ಪಾಕಿಸ್ತಾನಿ ಉಗ್ರ ಮುಮ್ತಾಜ್ ಖಾದ್ರಿಯ ಚಿತ್ರ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಾಡು ಮೊಹಮ್ಮದ್ ಪೈಗಂಬರ್ ಅವರ ನಿಂದನೆ (ಧರ್ಮನಿಂದನೆ) ಆರೋಪ ಎದುರಿಸುತ್ತಿರುವ ಯಾವುದೇ ವ್ಯಕ್ತಿಯ ಶಿರಚ್ಛೇದ ಮಾಡಲು ಪ್ರೇರೇಪಿಸುತ್ತದೆ. ಈ ಘಟನೆಯು ಫೆಬ್ರವರಿ 2025 ರಲ್ಲಿ ನಡೆದಿದ್ದು, ‘ಟ್ರೀನಿ’ ಎಂಬ ರಾಷ್ಟ್ರವಾದಿ ‘ಎಕ್ಸ್’ ಖಾತೆಯಿಂದ ಇತ್ತೀಚೆಗೆ ಈ ಕುರಿತು ವಿಡಿಯೋ ಪ್ರಸಾರವಾದ ನಂತರ ಈ ವಿಷಯ ಮುನ್ನೆಲೆಗೆ ಬಂದಿದೆ.
EXCLUSIVE:
During Annual Day programme of Kids World English School in Partur, Jalna — school children danced on the Pakistani song of "Gustakh Nabi Ki Ek Saza…" with dummy swords.
In the background, they had celebrated with photo of Pakistani terrorist Mumtaz Qadri, who had… pic.twitter.com/bq7PbUJYb2
— Treeni (@treeni) June 16, 2026
ಶಾಲೆಯ ಅಧ್ಯಕ್ಷ ತಾರಿಕ್ ಸಿದ್ದಿಕಿಗೆ ಪಾರ್ಶ್ವವಾಯು (ಪ್ಯಾರಾಲಿಸಿಸ್) ಸ್ಟ್ರೋಕ್?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರತೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಭಾಗವತ್ ಅವರೊಂದಿಗೆ ‘ಸನಾತನ ಪ್ರಭಾತ’ ಪ್ರತಿನಿಧಿ ಮಾತನಾಡಿದ್ದಾರೆ. ಈ ವೇಳೆ ಅವರು, “ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಜೂನ್ 18 ರ ಸಂಜೆಯ ವೇಳೆಗೆ ಮೊಕದ್ದಮೆ ದಾಖಲಿಸಬೇಕೇ ಅಥವಾ ಬೇರೆ ಯಾವುದೇ ಕ್ರಮ ಕೈಗೊಳ್ಳಬೇಕೇ ಎಂಬುದು ನಿರ್ಧಾರವಾಗಲಿದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಪರ್ಕ ಸಂಖ್ಯೆಯನ್ನು ಕೇಳಿದಾಗ, ಅಧ್ಯಕ್ಷ ತಾರಿಕ್ ಸಿದ್ದಿಕಿ ಅವರಿಗೆ ಪಾರ್ಶ್ವವಾಯು ಹೊಡೆದಿದೆ ಎಂದು ಅವರು ಹೇಳಿದರು. ಈ ಬಗ್ಗೆ ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಮೇಶ್ವರ್ ರೆಂಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಸಿದ್ದಿಕಿ ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಈ ಪ್ರಕರಣದಲ್ಲಿ ‘ಎಕ್ಸ್’ ಬಳಕೆದಾರರು ರಾಷ್ಟ್ರೀಯ ಬಾಲ ಹಕ್ಕುಗಳ ಸಂರಕ್ಷಣಾ ಆಯೋಗ, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು ಮತ್ತು ಜಾಲನಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತನಿಖೆ ನಡೆಸಿ, ಯಾವುದೇ ಅಕ್ರಮ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಜಾಲನಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಸಾಳಿ ಮಾತನಾಡಿ, ತನಿಖೆ ಈಗಷ್ಟೇ ಆರಂಭವಾಗಿದ್ದು, ಶೀಘ್ರದಲ್ಲೇ ವರದಿ ಬರಲಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಿ.ಬಿ.ಎಸ್.ಇ. ಪಠ್ಯಕ್ರಮದಡಿ ಶಾಲೆಯ ನೋಂದಣಿ
(ಸಿ.ಬಿ.ಎಸ್.ಇ. : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ – ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ)
ವಿಶೇಷವೆಂದರೆ, ಪರತೂರಿನ ‘ಕಿಡ್ಸ್ ವರ್ಲ್ಡ್ ಇಂಗ್ಲಿಷ್ ಸ್ಕೂಲ್’ ಶಾಲೆಯು ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಡುವ ಸಿ.ಬಿ.ಎಸ್.ಇ. ಪಠ್ಯಕ್ರಮದ ಅಡಿಯಲ್ಲಿ ನೋಂದಣಿಯಾಗಿದೆ.
‘ಟ್ರೀನಿ’ ಎಕ್ಸ್ ಖಾತೆಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ಶಾಲಾ ಆಡಳಿತ ಮಂಡಳಿ ಬೆದರಿಕೆ!ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯು, ಈ “ಕಾರ್ಯಕ್ರಮದ ಸಮಯದಲ್ಲಿ ‘ಎಲ್.ಇ.ಡಿ. ಸ್ಕ್ರೀನ್’ ಮತ್ತು ವೇದಿಕೆಯ ದೃಶ್ಯ ವಿನ್ಯಾಸದ ಜವಾಬ್ದಾರಿಯನ್ನು ಹೊರಗಿನ ಗುತ್ತಿಗೆದಾರರಿಗೆ ವಹಿಸಲಾಗಿತ್ತು. ವೇದಿಕೆಯಲ್ಲಿ ಪ್ರದರ್ಶಿಸಲಾದ ದೃಶ್ಯಗಳ ಮೇಲೆ ಶಾಲೆಯ ನೇರ ನಿಯಂತ್ರಣವಿರಲಿಲ್ಲ” ಎಂದು ಹೇಳಿದೆ. (ಇಂತಹ ಹಾಸ್ಯಾಸ್ಪದ ಸ್ಪಷ್ಟೀಕರಣ ನೀಡುವ ಶಾಲಾ ಆಡಳಿತ ಮಂಡಳಿಯು ತನ್ನ ಮಕ್ಕಳಲ್ಲಿ ಎಂತಹ ಸಂಸ್ಕಾರವನ್ನು ಮೂಡಿಸುತ್ತಿರಬಹುದು ಎಂಬುದರ ಕುರಿತು ತನಿಖೆ ಆಗಬೇಕು! – ಸಂಪಾದಕರು). ಆ ದೃಶ್ಯಗಳು ‘ಅರ್ತುಗ್ರುಲ್’ ಎಂಬ ಟರ್ಕಿಶ್ ಧಾರಾವಾಹಿಯದ್ದಾಗಿದ್ದವು (ಈ ಧಾರಾವಾಹಿಯು ಇಸ್ಲಾಮಿಕ್ ಪ್ರಚಾರಕ್ಕೆ ಹೆಸರುವಾಸಿಯಾಗಿದೆ ಮತ್ತು ಅದರಲ್ಲಿ ಶಿರಚ್ಛೇದನದ ದೃಶ್ಯಗಳಿವೆ). ‘ಟ್ರೀನಿ’ ಈ ವಿಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿಯು ಟ್ರೀನಿ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕಿದೆ. ಈ ಬಗ್ಗೆ ‘ಸನಾತನ ಪ್ರಭಾತ’ ಪ್ರತಿನಿಧಿಯು ‘ಟ್ರೀನಿ’ ಸಂಪಾದಕರಾದ ಶ್ರೀ. ಪಿಯೂಷ್ ಉಪಾಧ್ಯಾಯ ಅವರೊಂದಿಗೆ ಮಾತನಾಡಿದಾಗ, ಅವರು, “ನಾವು ಈ ವಿಡಿಯೋವನ್ನು ಪ್ರಸಾರ ಮಾಡಿದ ನಂತರ ಈ ಶಾಲೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದರಿಂದಾಗಿ ಅವರು ತಮ್ಮ ಯೂಟ್ಯೂಬ್ ಖಾತೆಯಿಂದ ಆ ನೃತ್ಯದ ವಿಡಿಯೋವನ್ನು ಡಿಲೀಟ್ ಮಾಡಿದ್ದಲ್ಲದೆ, ತಮ್ಮ ಯೂಟ್ಯೂಬ್ ಚಾನಲ್ ಅನ್ನೇ ಡಿಲೀಟ್ ಮಾಡಿದ್ದಾರೆ. ನಮಗೆ ಮೊಕದ್ದಮೆ ದಾಖಲಿಸುವ ಬೆದರಿಕೆಗಳು ಬರುತ್ತಿದ್ದರೂ, ಇದು ಸತ್ಯ ಘಟನೆಯಾಗಿರುವುದರಿಂದ ನಾವು ಈ ವಿಡಿಯೋವನ್ನು ತೆಗೆದುಹಾಕುವುದಿಲ್ಲ.” |
ಉಗ್ರ ಮುಮ್ತಾಜ್ ಖಾದ್ರಿ ಯಾರು?
ಮುಮ್ತಾಜ್ ಖಾದ್ರಿ 2011 ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ತಸೀರ್ ಅವರನ್ನು ಎಕೆ-47 ರೈಫಲ್‌ನಿಂದ 27 ಗುಂಡು ಹಾರಿಸಿ ಹತ್ಯೆ ಮಾಡಿದ್ದನು. ಪಾಕಿಸ್ತಾನದ ನ್ಯಾಯಾಲಯವು ಅವನನ್ನು ದೋಷಿ ಎಂದು ಘೋಷಿಸಿ 2016 ರಲ್ಲಿ ಗಲ್ಲು ಶಿಕ್ಷೆ ವಿಧಿಸಿತು. ಆದಾಗ್ಯೂ ಪಾಕಿಸ್ತಾನದ ಕೆಲವು ಉಗ್ರಗಾಮಿ ಗುಂಪುಗಳು ಇಂದಿಗೂ ಅವನನ್ನು ವೈಭವೀಕರಿಸುತ್ತವೆ. 500 ಕ್ಕೂ ಹೆಚ್ಚು ಇಸ್ಲಾಮಿಕ್ ಧರ್ಮಗುರುಗಳು ತಸೀರ್ ಹತ್ಯೆಯನ್ನು ಬೆಂಬಲಿಸಿದ್ದರು.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ
ಮಧ್ಯಪ್ರದೇಶದ ಮೌಲಾನಾ ಬಂಧನ !