ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರ ಪರಿಣಾಮ!

ನವದೆಹಲಿ – ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಟರ್ಕಿಯು ಪಾಕಿಸ್ತಾನದ ಪರ ವಹಿಸಿ ಮಿಲಿಟರಿ ನೆರವು ನೀಡಿತ್ತು. ಇದರ ತಕ್ಷಣದ ಪರಿಣಾಮವಾಗಿ, ಭಾರತವು ಟರ್ಕಿಯ ‘ಸೆಲೆಬಿ ಏವಿಯೇಷನ್’ ಸಂಸ್ಥೆಯನ್ನು ದೇಶದಿಂದ ಹೊರಹಾಕಿದ ನಂತರ, ಆ ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟವಾಗಿದೆ. ಭಾರತದ ಈ ಕ್ರಮದಿಂದಾಗಿ ತನಗೆ ಒಂದೇ ದಿನದಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
‘ಆಪರೇಷನ್ ಸಿಂದೂರ್’ ನಂತರ ಭಾರತದಲ್ಲಿ ಟರ್ಕಿಯ ಸಂಸ್ಥೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸತೊಡಗಿದವು. ಈ ಹಿನ್ನೆಲೆಯಲ್ಲಿ ಭಾರತ ಸರಕಾರವು ಮೇ ೨೦೨೫ ರಲ್ಲಿ ‘ಸೆಲೆಬಿ’ ಯ ಭಾರತೀಯ ಶಾಖೆಯ ಭದ್ರತಾ ಮಂಜೂರಾತಿಯನ್ನು ಕೂಡಲೇ ರದ್ದುಗೊಳಿಸಿತು. ‘ಸೆಲೆಬಿ ಏರ್‌ಪೋರ್ಟ್ ಸರ್ವಿಸಸ್ ಇಂಡಿಯಾ’ ಇದು ದೇಶದ ಅತಿ ದೊಡ್ಡ ಗ್ರೌಂಡ್ ಹ್ಯಾಂಡ್ಲಿಂಗ್ ಸಂಸ್ಥೆಗಳ ಪೈಕಿ ಒಂದಾಗಿತ್ತು. ಈ ಸಂಸ್ಥೆಯು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದ ಸಮನ್ವಯ, ಪ್ರಯಾಣಿಕರ ನಿರ್ವಹಣೆ ಮತ್ತು ವಿಮಾನಗಳಿಗೆ ಅಗತ್ಯವಿರುವ ತಾಂತ್ರಿಕ ಸೇವೆಗಳನ್ನು ಪೂರೈಸುವ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯು ಪ್ರತಿ ವರ್ಷ ಅಂದಾಜು ೫೮,೦೦೦ ವಿಮಾನಗಳ ಹಾರಾಟ ಮತ್ತು ೫ ಲಕ್ಷದ ೪೦ ಸಾವಿರ ಟನ್ ಸರಕುಗಳ ನಿರ್ವಹಣೆ ಮಾಡುತ್ತಿತ್ತು.
ಒಂದೇ ದಿನದಲ್ಲಿ ಎಲ್ಲವೂ ಮುಗಿದುಹೋಯಿತು! – ಸಂಸ್ಥೆ
ಸಂಸ್ಥೆಯ ಅಧ್ಯಕ್ಷರಾದ ಕ್ಯಾನನ್ ಸೆಲೆಬಿಯೋಗ್ಲು ಈ ಬಗ್ಗೆ ಮಾತನಾಡಿ, ೨೦೦೦ ಸಾಲಿನಿಂದ ಭಾರತದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ತುಂಬಾ ಶ್ರಮಪಟ್ಟಿತ್ತು. ಇದು ಕೇವಲ ವ್ಯವಹಾರದ ನಷ್ಟವಲ್ಲ, ಎರಡು ದಶಕಗಳ ಕಠಿಣ ಪರಿಶ್ರಮದ ಫಲವಾಗಿತ್ತು. ನಾವು ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿ ಈ ವ್ಯವಹಾರವನ್ನು ಕಟ್ಟಿದ್ದೆವು; ಆದರೆ ಇದೆಲ್ಲವೂ ಒಂದೇ ದಿನದಲ್ಲಿ ಕೊನೆಗೊಂಡಿತು, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!