ನಾಗಪುರದ ವಾಯುಸೇನಾ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ ಪ್ರಕರಣ

ನಾಗಪುರ – ಭಾರತೀಯ ವಾಯುಸೇನೆಯ ಅಧಿಕಾರಿಯ 24 ವರ್ಷದ ಹಿಂದೂ ಪತ್ನಿಯನ್ನು ‘ಲವ್ ಜಿಹಾದ್’ ಜಾಲದಲ್ಲಿ ಸಿಲುಕಿಸಿ, ಅತ್ಯಾಚಾರ ಎಸಗಿ, ಬಲವಂತವಾಗಿ ಮತಾಂತರಗೊಳಿಸಲು ಪ್ರಯತ್ನಿಸಿದ ಆರೋಪದ ಮೇಲೆ ಪೊಲೀಸರು ಮುಖ್ಯ ಆರೋಪಿ ಅಯಾಜ್ ಮದಾರೆ, ಆತನ ಸಹಚರ ಅಮೀನ್ ಶೇಖ್ ನಂತರ ಇದೀಗ ಮಧ್ಯಪ್ರದೇಶದಿಂದ ಮೌಲಾನಾನನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
1. ಮುಖ್ಯ ಆರೋಪಿ ಅಯಾಜ್ ಮದಾರೆ (ವಯಸ್ಸು 26) ಸಂತ್ರಸ್ತೆಯ ಸಹಪಾಠಿಯಾಗಿದ್ದನು. ಆತ ಆಕೆಯೊಂದಿಗೆ ಆಪ್ತತೆ ಬೆಳೆಸಿ, ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಫೋಟೋಗಳು ಮತ್ತು ವಿಡಿಯೋಗಳನ್ನು ಮಾಡಿ, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಪದೇ ಪದೆ ಲೈಂಗಿಕ ಶೋಷಣೆ ನಡೆಸಿದ್ದಾನೆ. ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮದುವೆಯಾಗಬೇಕೆಂದು ಒತ್ತಡ ಹೇರಿದ್ದನು.
2. ಮಧ್ಯಪ್ರದೇಶದಿಂದ ಕರೆತರಲಾದ ಮೌಲಾನಾ ಸಂತ್ರಸ್ತೆಯ ಮೇಲೆ ಮಾಟಮಂತ್ರ ಮತ್ತು ಅಘೋರಿ ಕೃತ್ಯಗಳನ್ನು ಮಾಡಿ, ಬಲವಂತವಾಗಿ ಮತಾಂತರ ಮತ್ತು ನಿಕಾಹ್ ಮಾಡಲು ಅಮಾನವೀಯ ಪ್ರಯತ್ನಗಳನ್ನು ನಡೆಸಿದ್ದಾನೆ. ಇದರಲ್ಲಿ ಮತಾಂಧ ಆರೋಪಿ ಅಮೀನ್ ಶೇಖ್ (ವಯಸ್ಸು 30) ಕೂಡ ಸಹಾಯ ಮಾಡಿದ್ದಾನೆ. ಸಂತ್ರಸ್ತೆಯು ಭಯದಿಂದ ಈ ಕಿರುಕುಳವನ್ನು ಪತಿಯಿಂದ ಮುಚ್ಚಿಟ್ಟಿದ್ದಳು; ಆದರೆ ಪತಿ ಮನೆಯಲ್ಲಿದ್ದಾಗ ಆರೋಪಿಗಳ ಬೆದರಿಕೆ ಕರೆ ಬಂದಿದ್ದರಿಂದ, ಆಕೆ ಪತಿಗೆ ಎಲ್ಲವನ್ನೂ ಹೇಳಬೇಕಾಯಿತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”