ಅಮೆರಿಕದ ಗುಪ್ತಚರ ವರದಿಯಲ್ಲಿನ ಮಾಹಿತಿ

ವಾಷಿಂಗ್ಟನ್ (ಅಮೆರಿಕ) – ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳ ಹಿನ್ನೆಲೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಂದು ವರದಿಯನ್ನು ಬಿಡುಗಡೆ ಮಾಡಿವೆ. ಜೂನ್ ೧೯ ರಂದು ಉಭಯ ದೇಶಗಳ ನಡುವೆ ಕದನ ವಿರಾಮದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಾಗುವುದು ಮತ್ತು ಅದರ ನಂತರ ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳು ಪ್ರಾರಂಭವಾಗಲಿವೆ.
ಆದರೆ, ಗುಪ್ತಚರ ಸಂಸ್ಥೆಗಳ ವರದಿಯ ಅನುಸಾರ, ಯುದ್ಧದ ನಂತರ ಇರಾನ್ ಹಿಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಯುದ್ಧದ ಸಮಯದಲ್ಲಿ ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು (೨ ಜಲಾಶಯಗಳನ್ನು ಜೋಡಿಸುವ ಜಲಮಾರ್ಗ) ಮುಚ್ಚುವ ಮೂಲಕ ಜಗತ್ತಿಗೆ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ಇನ್ಮುಂದೆಯೂ ಇರಾನ್ ಅದನ್ನು ತನಗೆ ಬೇಕಾದಾಗ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಬಹುದಾಗಿದೆ. ಯುದ್ಧದ ನಂತರ, ಇರಾನ್ ಈ ಮಾಧ್ಯಮದಿಂದ ಜಾಗತಿಕ ಆರ್ಥಿಕತೆಗೆ ಹಾನಿ ತಲುಪಿಸುವ ಒಂದು ಹೊಸ ಶಕ್ತಿಶಾಲಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇರಾನ್‌ಗೆ ಅಣುಬಾಂಬ್‌ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರವೊಂದು ಸಿಕ್ಕಿದೆ ಎಂದು ಅಮೆರಿಕದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದು ನಿಮ್ಮಿಬ್ಬರ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ! – ಚೀನಾದ ಸಲಹೆ
ರಷ್ಯಾ ತೈಲ ಸಾಗಣೆ ನೌಕೆಯ ಭಾರತೀಯ ಕ್ಯಾಪ್ಟನ್ ಬಂಧನ; ರಷ್ಯಾ ಆಕ್ರೋಶ
ಭಾರತದ ಮೇಲೆ ದಾಳಿಯಾದರೆ ನಾವು ಭಾರತದೊಂದಿಗೆ ಇರುತ್ತೇವೆ! – ಟ್ರಂಪ್
ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು! – Trump On Iran
ಇರಾನ್‌ಗೆ ಈಗ ಅಣುಬಾಂಬ್‌ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!
ಅತ್ಯಾಚಾರ ಪ್ರಕರಣದಲ್ಲಿ ನಾರ್ವೆಯ ‘ ಕ್ರೌನ್ ಪ್ರಿನ್ಸೆಸ್’ ನ ಮಗನಿಗೆ ೪ ವರ್ಷಗಳ ಜೈಲು ಶಿಕ್ಷೆ!