ಗುಂಟೂರಿನ (ಆಂಧ್ರಪ್ರದೇಶ) ಮಹಮದ್ ಅಲಿ ಜಿನ್ನಾ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಹಿಂದೂ ವಾಹಿನಿ ಸಂಘಟನೆಯ ೩ ಕಾರ್ಯಕರ್ತರ ಬಂಧನ !

ಮಹಮದ್ ಅಲಿ ಜಿನ್ನಾ ಟವರನ ಹೆಸರನ್ನು ಬದಲಾಯಿಸದಿದ್ದರೇ ಅದನ್ನು ಧ್ವಂಸ ಮಾಡುತ್ತೇವೆ ! – ಭಾಜಪ ಮತ್ತು ಹಿಂದೂ ಸಂಘಟನೆಯ ಎಚ್ಚರಿಕೆ

ಮಹಮದ್ ಅಲಿ ಜಿನ್ನಾ ಅವರ ಹೆಸರಿನ ಟವರ ಇರುವ ಗುಂಟೂರು ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿದೆಯೋ ? ಸ್ವಾತಂತ್ರ್ಯ ಬಂದು ೭೫ ವರ್ಷಗಳಲ್ಲಿ ಈ ಹೆಸರನ್ನು ಉಳಿಸಿಕೊಂಡು ಬಂದ ಆಡಳಿತಗಾರರಿಗೆ ನಾಚಿಕೆಗೇಡು !

ಗುಂಟೂರು (ಆಂಧ್ರಪ್ರದೇಶ) – ಇಲ್ಲಿಯ ಕೋಥಾಪೇಟ್ ಪ್ರದೇಶದಲ್ಲಿ ಸಂಚಾರನಿರ್ಬಂಧದ ಆದೇಶವನ್ನು ಉಲ್ಲಂಘಿಸಿ ಮಹಮದ್ ಅಲಿ ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ವಾಹಿನಿ ಸಂಘಟನೆಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಶುಕ್ರವಾರದಂದು ಮೆರವಣಿಗೆ ನಡೆಸಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರಯತ್ನಿಸುತ್ತಿದ್ದ ಈ ಸಂಘಟನೆಯ ಕಾರ್ಯಕರ್ತರನ್ನು ತಡೆಗಟ್ಟಲು ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಬಂದೋಬಸ್ತು ಮಾಡಿದ್ದರು.

ಕಳೆದ ಕೆಲವು ದಿನಗಳಿಂದ ಭಾಜಪ ಹಾಗೂ ಹಿಂದೂ ಸಂಘಟನೆಗಳು ಈ ಟವರನ ಹೆಸರು ಬದಲಾಯಿಸುವಂತೆ ಒತ್ತಾಯಿಸುತ್ತಿವೆ. ‘ಒಂದು ವೇಳೆ ಸರಕಾರ ಈ ಬೇಡಿಕೆಗೆ ಕಿವಿಗೊಡದಿದ್ದರೆ, ಟವರ್ ನೆಲಸಮ ಮಾಡಲಾಗುವುದು’, ಎಂದು ಎಚ್ಚರಿಕೆ ನೀಡಿದರು. ಭಾಗ್ಯನಗರದ ಭಾಜಪ ಶಾಸಕ ಟಿ. ರಾಜಾ ಸಿಂಹ ಇವರು ಈ ಮೊದಲು ಟವರಿಗೆ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಇಡಬೇಕೆಂದು ಒತ್ತಾಯಿಸಿದ್ದರು.