ಚೀನಾಕ್ಕೆ ನೇಪಾಳದ ಪ್ರಶ್ನೆ

ಬೀಜಿಂಗ್ (ಚೀನಾ) – ನೇಪಾಳದ ವಿದೇಶಾಂಗ ಸಚಿವರಾದ ಶಿಶಿರ ಖನಾಲ ರವರು ಇಲ್ಲಿ ಚೀನಾದ ವಿದೇಶಾಂಗ ಸಚಿವರಾದ ವಾಂಗ್ ಯಿ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಖನಾಲ ರವರು ಕಾಲಾಪಾಣಿ, ಲಿಂಪಿಯಾಧುರಾ ಮತ್ತು ಲಿಪುಲೇಖಗಳ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೆ, ಭಾರತ ಮತ್ತು ಚೀನಾದ ನಡುವಿನ ಲಿಪುಲೇಖ ಕಣಿವೆಯ ಬಳಕೆಯ ಕುರಿತಾದ ಒಪ್ಪಂದವನ್ನು ಪ್ರಶ್ನಿಸುತ್ತಾ, ‘ಈ ವ್ಯವಸ್ಥೆಯನ್ನು ಯಾವ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ ಮತ್ತು ಅದರ ಸ್ವರೂಪವೇನು?’ ಎಂದು ಕೇಳಿದರು. ಇದಕ್ಕೆ ಉತ್ತರಿಸುತ್ತಾ ವಾಂಗ್ ಯಿ ರವರು, ಇದು ಮೂಲತಃ ಭಾರತ ಮತ್ತು ನೇಪಾಳ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕವೇ ಇದರ ಪರಿಹಾರವಾಗಲಿದೆ ಎಂದು ಹೇಳಿದರು. ಇಂತಹ ವಿಷಯಗಳನ್ನು ಸಂಬಂಧಪಟ್ಟ ದೇಶಗಳು ರಾಜತಾಂತ್ರಿಕ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು.
“On what basis did China make an agreement with India regarding the use of Lipulekh Pass?” – Nepal questions China.
China’s response: “This is an issue between the two of you; resolve it through discussions.”
Nepal should note that China has offered no support to its claim.… pic.twitter.com/zeILxioNeR
— Sanatan Prabhat (@SanatanPrabhat) June 17, 2026
ಭಾರತ ಮತ್ತು ಚೀನಾ 2020 ರ ವರ್ಷದಲ್ಲಿ ಲಿಪುಲೇಖ ಕಣಿವೆಯ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಗಡಿಯಾಚೆಗಿನ ವ್ಯಾಪಾರವನ್ನು ಪುನರಾರಂಭಿಸಲು ಸಮ್ಮತಿ ಸೂಚಿಸಿದ್ದವು. ಇದರ ಅನ್ವಯ ಉಭಯ ದೇಶಗಳು ಈ ಮಾರ್ಗವನ್ನು ತೀರ್ಥಯಾತ್ರೆ ಮತ್ತು ವ್ಯಾಪಾರಕ್ಕಾಗಿ ಬಳಸಲು ನಿರ್ಧರಿಸಿದ್ದವು. ಆಗ ನೇಪಾಳವು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಲಿಪುಲೇಖ, ಕಾಲಾಪಾಣಿ ಮತ್ತು ಲಿಂಪಿಯಾಧುರಾ ತನ್ನ ಕ್ಷೇತ್ರದ ಭಾಗಗಳಾಗಿವೆ; ಆದ್ದರಿಂದ ತನ್ನೊಂದಿಗೆ ಸಮಾಲೋಚನೆ ನಡೆಸದೆ ಈ ಮಾರ್ಗದ ಕುರಿತು ಯಾವುದೇ ಒಪ್ಪಂದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬುದು ಅದರ ವಾದವಾಗಿತ್ತು. ಇದರ ನಂತರ ನೇಪಾಳವು ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ರಾಜತಾಂತ್ರಿಕ ವಿರೋಧವನ್ನು ವ್ಯಕ್ತಪಡಿಸಿತ್ತು.
ವಿಶೇಷವೆಂದರೆ, ಶಿಶಿರ ಖನಾಲ ರವರು ಇತ್ತೀಚಿನ ಭಾರತ ಪ್ರವಾಸದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಆಗ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಇತರ ವಿಷಯಗಳ ಕುರಿತು ಚರ್ಚಿಸಿದ್ದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು