ಹಿಂದೂ ದೇವತೆಗಳ ಅಪಮಾನವನ್ನು ತಡೆಯಲು ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂಗಳ ಶಾಂತತೆಯ ಮೆರವಣಿಗೆ !

ಹಿಂದೂಗಳ ದೇವತೆಗಳ ವಿರುದ್ಧ ನೀಡಲಾಗುವ ಹೇಳಿಕೆಗಳನ್ನು ವಿರೋಧಿಸಲು ಇಲ್ಲಿ ಹಿಂದೂಗಳು ಶಾಂತಿಯ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ ಮಹಿಳಾ ಸಂತರೂ ಉಪಸ್ಥಿತರಿದ್ದರು. ಇದರೊಂದಿಗೆ ಭಾಜಪದ ಸ್ಥಳೀಯ ಶಾಸಕರಾದ ಅನಿತಾ ಭದೆಲರವರೂ ಸಹಭಾಗಿಯಾಗಿದ್ದರು.

ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಬಂಧನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ. ಏಪ್ರಿಲ ೨೦೨೨ ರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ವಿಜಯ ಬಾಬು ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರು ದುಬೈಗೆ ಓಡಿಹೋಗಿದ್ದರು.

ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ಪೊಲೀಸರ ದಾಳಿ ; ‘ಸಿಡಿಮದ್ದು’ (ಗನ ಪೌಡರ) ವಶ !

ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ದಾಳಿ ನಡೆಸಿ ‘ಸಿಡಿಮದ್ದು’ (ಗನ ಪೌಡರ) ವಶಪಡಿಸಿಕೊಂಡು ಹಲವಾರು ಯುವಕರನ್ನು ಬಂಧಿಸಿದ್ದಾರೆ. ಈ ಯುವಕರು ಪಟೇಲ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ.

‘ಪೂಜಾ ಸ್ಥಳಗಳ ಕಾಯ್ದೆ’ಯ ಕೆಲವು ಪರಿಚ್ಛೇಧಗಳ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು

ಜ್ಞಾನವ್ಯಾಪಿ ಮಸಿದಿ ಪ್ರಕರಣದಿಂದಾಗಿ ಪ್ರಸಿದ್ಧಿ ಪಡೆದ ‘೧೯೯೧ ರ ಪೂಜಾ ಸ್ಥಳಗಳ ಕಾಯ್ದೆ’ಯ (‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ ೧೯೯೧’ರ) ಕೆಲವು ಪರಿಚ್ಛೇಧಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾಜಪದ ಮಾಜಿ ಸಂಸದ ಚಿಂತಾಮಣಿ ಮಾಲವೀಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರಾಜಸ್ಥಾನದಲ್ಲಿ ಅಪಾರ ಪ್ರಮಾಣದ ಯುರೇನಿಯಂ ಪತ್ತೆ !

ಜಾರ್ಖಂಡ ಮತ್ತು ಆಂಧ್ರಪ್ರದೇಶದ ನಂತರ ರಾಜಸ್ಥಾನದಲ್ಲಿ ಯುರೇನಿಯಂನ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿವೆ. ಖಂಡೆಲಾ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವಗ ೧೦೮೬.೪೬ ಹೆಕ್ಟೆರ ಪ್ರದೇಶದಲ್ಲಿ ೧.೮ ಕೋಟಿ ಟನ ಯುರೇನಿಯಂ ಮತ್ತು ಸಂಬಂಧಿತ ಖನಿಜಗಳು ಕಂಡುಬಂದಿವೆ.

ವಿದ್ಯುತ್ ಉಳಿತಾಯಕ್ಕಾಗಿ ರಾತ್ರಿ 9 ಗಂಟೆಯ ನಂತರ ಬೀದಿ ದೀಪಗಳನ್ನು ಬಂದ ಮಾಡಲು ಪಾಕಿಸ್ತಾನ ಸರಕಾರ ಆದೇಶ ನೀಡಿದೆ

ಜಿಹಾದಿ ಚಟುವಟಿಕೆಗಳ ಮೂಲಕ ಜಗತ್ತನ್ನು ಹಿಂಸಿಸುವ ಪಾಕಿಸ್ತಾನಕ್ಕೆ ದುರಾವಸ್ಥೆಯಾಗಿದ್ದರೆ ಅದರಲ್ಲಿ ಆಶ್ಚರ್ಯವೇನು ?

ಶಾಲೆಗೆ ಬರಲು ೧೦ ನಿಮಿಷ ತಡವಾಗಿದಕ್ಕೆ ಶಿಕ್ಷಕಿಗೆ ಮುಖ್ಯೋಪಾಧ್ಯಾಯರಿಂದ ಚಪ್ಪಲಿ ಏಟು

ಇಂತಹ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮುಂದೆ ಏನು ಆದರ್ಶ ಇಡುವರು ?

ಹಿಂದೂ ದೇವಸ್ಥಾನದ ಹಣ ಹಿಂದೂಗಳ ಹಿತಕ್ಕಾಗಿಯೇ ಬಳಸಬೇಕು ! – ವಿಶ್ವ ಹಿಂದೂ ಪರಿಷತ್

ದೇವಸ್ಥಾನಗಳಿಗೆ ಸಿಗುವ ಆದಾಯ ಸರಕಾರಿ ಮತ್ತು ಆಡಳಿತ ಖರ್ಚಿಗಾಗಿ ಉಪಯೋಗಿಸದೆ ಕೇವಲ ದೇವಸ್ಥಾನದ ನಿರ್ವಹಣೆಗಾಗಿ ಮತ್ತು ಹಿಂದುಗಳ ಹಿತಕ್ಕಾಗಿಯೇ ಉಪಯೋಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು ಒತ್ತಾಯಿಸಿದ್ದಾರೆ.

ಗೌತಮ್ ಅಡಾಣಿ ಇವರ ಕುಟುಂಬದಿಂದ ಸಮಾಜ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ !

ಏಷ್ಯಾ ಖಂಡದ ಎಲ್ಲಕ್ಕಿಂತ ಶ್ರೀಮಂತ ಉದ್ಯಮಿ ಗೌತಮ ಅಡಾಣಿ ಇವರ ೬೦ ನೇ ಹುಟ್ಟುಹಬ್ಬದ ದಿನದಂದು ಅವರ ಕುಟುಂಬದಿಂದ ಸಾಮಾಜಿಕ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ ನೀಡಿದ್ದಾರೆ.

ಕತಾರನಿಂದ ಬಂದಿದ್ದ ನೇಪಾಳಿ ಮುಸಲ್ಮಾನನಿಂದ ಅಪ್ರಾಪ್ತ ಹುಡುಗಿಯ ಅಪಹರಣ !

ನೇಪಾಳ ಮೂಲದ ನಿವಾಸಿ ಮತ್ತು ಕತಾರನಲ್ಲಿ ಕೂಲಿ ಕೆಲಸ ಮಾಡುವ ಇಜರಾಯಿಲ್ ನದಾಫ ಹೆಸರಿನ ಯುವಕ ರಾಜಸ್ಥಾನದ ದೌಸಾ ಜಿಲ್ಲೆಯ ಬಾಂಧಿಕೂಯಿಯ ಓರ್ವ ೧೩ ವರ್ಷದ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿದನು.