ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ಪೊಲೀಸರ ದಾಳಿ ; ‘ಸಿಡಿಮದ್ದು’ (ಗನ ಪೌಡರ) ವಶ !

ಪಾಟಲಿಪುತ್ರ (ಬಿಹಾರ) – ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ದಾಳಿ ನಡೆಸಿ ‘ಸಿಡಿಮದ್ದು’ (ಗನ ಪೌಡರ) ವಶಪಡಿಸಿಕೊಂಡು ಹಲವಾರು ಯುವಕರನ್ನು ಬಂಧಿಸಿದ್ದಾರೆ. ಈ ಯುವಕರು ಪಟೇಲ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ. ಪೊಲೀಸರು ಜೂನ ೨೬ ರಂದು ಪಾಟ್ನಾ ವಿಶ್ವವಿದ್ಯಾಲಯದ ಎಲ್ಲಾ ವಸತಿಗೃಹಗಳ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಿಡಿಮದ್ದು (ಗನ ಪೌಡರ) ಉಪಯೋಗ ಎಲ್ಲಲ್ಲಿ ಆಗುತ್ತದೆ ?

ಸಿಡಿಮದ್ದು (ಗನ ಪೌಡರ) ಉಪಯೋಗವು ಪಟಾಕಿ, ಬಾಂಬ, ಹ್ಯಾಂಡ ಗ್ರೆನೆಡ ಮತ್ತು ಇತರ ಶಸ್ತ್ರಗಳನ್ನು ತಯಾರಿಸಲು ಬಳಸಲಾಗುತ್ತದೆ.