ರಾಜಸ್ಥಾನದಲ್ಲಿ ಅಪಾರ ಪ್ರಮಾಣದ ಯುರೇನಿಯಂ ಪತ್ತೆ !

ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸಹ ಉಪಯುಕ್ತವಾಗಿದೆ !

ಸೀಕರ (ರಾಜಸ್ಥಾನ) – ಜಾರ್ಖಂಡ ಮತ್ತು ಆಂಧ್ರಪ್ರದೇಶದ ನಂತರ ರಾಜಸ್ಥಾನದಲ್ಲಿ ಯುರೇನಿಯಂನ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿವೆ. ಖಂಡೆಲಾ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವಗ ೧೦೮೬.೪೬ ಹೆಕ್ಟೆರ ಪ್ರದೇಶದಲ್ಲಿ ೧.೮ ಕೋಟಿ ಟನ ಯುರೇನಿಯಂ ಮತ್ತು ಸಂಬಂಧಿತ ಖನಿಜಗಳು ಕಂಡುಬಂದಿವೆ. ಯುರೇನಿಯಂನ ಪುಷ್ಟಿಕರಣದ ಆಧಾರದ ಮೇಲೆ ಅದನ್ನು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಾಗುವುದು.

೧. ರಾಜಸ್ಥಾನ ಸರಕಾರವು ಜೂನ ೨೬ ರಂದು ಗಣಿಗಾರಿಕೆಗಾಗಿ ‘ಯುರೇನಿಯಂ ಕಾರ್ಪೊರೇಷನ ಆಫ ಇಂಡಿಯಾ ಲಿಮಿಟೆಡ’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯು ಅಂದಾಜು ೩ ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಲಿದೆ. ಈ ಮೂಲಕ ಸಾಧಾರಣ ೩ ಸಾವಿರ ಜನರಿಗೆ ಉದ್ಯೋಗ ಸಿಗಲಿದೆ.

೨. ರಾಜ್ಯದ ಗಣಿ ಮತ್ತು ಪೆಟ್ರೋಲಿಯಂ ಇಲಾಖೆಯು ಹೆಚ್ಚುವರಿ ಮುಖ್ಯ ಕಾರ್ಯದರ್ಶೀ ಡಾ. ಸುಬೋಧ ಅಗ್ರವಾಲ ಇವರು, ಯುರೇನಿಯಂ ವಿಶ್ವದ ಅಪರೂಪದ ಖನಿಜಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಯುರೇನಿಯಂ ಪರಮಾಣು ಶಕ್ತಿಗೆ ಬಹಳ ಅಮುಲ್ಯವಾದ ಖನಿಜವಾಗಿದೆ ಎಂದು ಹೇಳಿದರು.