‘ಪೂಜಾ ಸ್ಥಳಗಳ ಕಾಯ್ದೆ’ಯ ಕೆಲವು ಪರಿಚ್ಛೇಧಗಳ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು

ನವ ದೆಹಲಿ – ಜ್ಞಾನವ್ಯಾಪಿ ಮಸಿದಿ ಪ್ರಕರಣದಿಂದಾಗಿ ಪ್ರಸಿದ್ಧಿ ಪಡೆದ ‘೧೯೯೧ ರ ಪೂಜಾ ಸ್ಥಳಗಳ ಕಾಯ್ದೆ’ಯ (‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ ೧೯೯೧’ರ) ಕೆಲವು ಪರಿಚ್ಛೇಧಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾಜಪದ ಮಾಜಿ ಸಂಸದ ಚಿಂತಾಮಣಿ ಮಾಲವೀಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಮೂಲಕ ಅವರು ‘ಪೂಜಾ ಸ್ಥಳ ಕಾಯಿದೆ’ಯ ಪರಿಚ್ಛೇದ ೨, ೩ ಮತ್ತು ೪ ರ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಈ ಪರಿಚ್ಛೇದಗಳು ಜಾತ್ಯತೀತತೆಯ ತತ್ವಗಳು ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆದ್ದರಿಂದ ಈ ಪರಿಚ್ಛೇದಗಳು ಅಸಂವಿಧಾನಿಕವೆಂದು ಘೋಷಿಸಲು ಆದೇಶ ನೀಡಬೆಕು. ಎಂದು ಮನವಿಯಲ್ಲಿ ಅಗ್ರಹಿಸಿದ್ದಾರೆ.

‘ಪೂಜಾ ಸ್ಥಳ ಕಾಯಿದೆ ೧೯೯೧’ರ ಕೆಲವು ನಿಭಂದನೆಗಳ ಸಿಂಧುತ್ವವನ್ನು ಇಗಾಗಲೇ ಪ್ರಶ್ನಿಸಲಾಗಿದೆ. ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಹಲವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ೧೯೯೧ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ ಅವರ ಅವಧಿಯಲ್ಲಿ ದೇಶದ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಕಾನೂನನ್ನು ಜಾರಿಗೊಳಿಸಲಗಿತ್ತು. ಈ ಕಾಯಿದೆಯ ಪ್ರಸ್ತಾವನೆಯಲ್ಲಿ, ೧೫ ಅಗಸ್ಟ ೧೯೪೭ ರ ಮೊದಲು ಅಸ್ತಿತ್ವದಲ್ಲಿರುವ ಯಾವುದೇ ದೇವಾಲಯ, ಮಸೀದಿ, ಮಠ, ಚರ್ಚ, ಗುರುದ್ವಾರ ಇತ್ಯಾದಿಗಳ ಸ್ವರೂಪವನ್ನು ಬದಲಾಯಿಸಲಾಗುವದಿಲ್ಲ. ಹಾಗೆ ಮಾಡಿದವರಿಗೆ ಶಿಕ್ಷೆಗೆ ಅವಕಾಶವಿರುತ್ತದೆ. ಜೊತೆಗೆ ಹೆಚ್ಚುವರಿಯಾಗಿ ಕಲಂ ೪೯ ರ ಪ್ರಕಾರ ಧಾರ್ಮಿಕ ಸ್ಥಳಗಳನ್ನು ರಕ್ಷಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.