ಹಿಂದೂ ದೇವತೆಗಳ ಅಪಮಾನವನ್ನು ತಡೆಯಲು ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂಗಳ ಶಾಂತತೆಯ ಮೆರವಣಿಗೆ !

ಅಜಮೇರ (ರಾಜಸ್ಥಾನ) – ಹಿಂದೂಗಳ ದೇವತೆಗಳ ವಿರುದ್ಧ ನೀಡಲಾಗುವ ಹೇಳಿಕೆಗಳನ್ನು ವಿರೋಧಿಸಲು ಇಲ್ಲಿ ಹಿಂದೂಗಳು ಶಾಂತಿಯ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ ಮಹಿಳಾ ಸಂತರೂ ಉಪಸ್ಥಿತರಿದ್ದರು. ಇದರೊಂದಿಗೆ ಭಾಜಪದ ಸ್ಥಳೀಯ ಶಾಸಕರಾದ ಅನಿತಾ ಭದೆಲರವರೂ ಸಹಭಾಗಿಯಾಗಿದ್ದರು. ಈ ಸಮಯದಲ್ಲಿ ನೂಪುರ ಶರ್ಮಾರವರನ್ನು ಸಮರ್ಥಿಸಲಾಯಿತು. ಮೆರವಣಿಗೆಯ ಸುರಕ್ಷೆಗಾಗಿ ೨೦ ಪೊಲೀಸ ಅಧಿಕಾರಿಗಳು ಹಾಗೂ ೧ ಸಾವಿರ ಪೊಲೀಸ ಪೇದೆಗಳನ್ನೂ ನೇಮಿಸಲಾಗಿತ್ತು. ಮೆರವಣಿಗೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಒಯ್ಯಲಾಯಿತು. ಇಲ್ಲಿ ಕೊನೆಯಲ್ಲಿ ಹನುಮಾನ ಚಾಲಿಸಾದ ಪಠಣ ಮಾಡಲಾಯಿತು. ಅನಂತರ ಜಿಲ್ಲಾಧಿಕಾರಿಗಳ ಬಳಿ ರಾಷ್ಟ್ರಪತಿಗಳಿಗೆ ನೀಡಲು ಮನವಿಯನ್ನು ನೀಡಲಾಯಿತು.

೧. ಮಹಿಳಾ ಸಂತರು ‘ನಮ್ಮ ಹೆಣ್ಣುಮಕ್ಕಳು ‘ಲವ್‌ ಜಿಹಾದ’ಗೆ ಬಲಿಯಾಗುತ್ತಿದ್ದಾರೆ. ಅವರಿಗೆ ಬೆದರಿಕೆ ಹಾಕಿ ಕೊಲ್ಲಲಾಗುತ್ತಿದೆ, ಅವರ ಮೇಲೆ ಆಮ್ಲಗಳನ್ನು ಎಸೆಯಲಾಗುತ್ತಿದೆ. ಇದನ್ನೇ ವಿರೋಧಿಸಲು ನಾವು ಈ ಮೆರವಣಿಗೆಯನ್ನು ನಡೆಸುತ್ತಿದ್ದೇವೆ’ ಎಂದು ಹೇಳಿದರು.

೨. ಭಾಜಪದ ಶಾಸಕಿಯಾಗದ ಅನಿತಾ ಭದೆಲರವರು ಮಾತನಾಡುತ್ತ, ಹಿಂದೂ ಸಮಾಜವು ಯಾವಾಗಲೂ ಸದ್ಭಾವನೆಯಿಂದ ಇರುತ್ತದೆ, ಆದುದರಿಂದ ನಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಬಾರದು’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳು ಸಂಘಟಿತರಾಗಿ ಮೆರವಣಿಗೆಯನ್ನು ನಡೆಸಿರುವುದು ಅಭಿನಂದನಾರ್ಹವಾಗಿದೆ; ಆದರೂ ಇಂತಹ ಮೆರವಣಿಗೆಗಳನ್ನು ನಡೆಸಿ ಹಿಂದೂ ದೇವತೆಗಳ ಅಪಮಾನವನ್ನು ತಡೆಯಲು ಸಾಧ್ಯವಿಲ್ಲದಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅತ್ಯಂತ ಆವಶ್ಯಕವಾಗಿದೆ !