ಶಾಲೆಗೆ ಬರಲು ೧೦ ನಿಮಿಷ ತಡವಾಗಿದಕ್ಕೆ ಶಿಕ್ಷಕಿಗೆ ಮುಖ್ಯೋಪಾಧ್ಯಾಯರಿಂದ ಚಪ್ಪಲಿ ಏಟು

ಲಖಿಮಪೂರ ಖಿರಿ (ಉತ್ತರ ಪ್ರದೇಶ) – ಶಾಲೆಗೆ ಬರಲು ೧೦ ನಿಮಿಷ ತಡವಾದ ಕಾರಣ ಓರ್ವ ಶಿಕ್ಷಕಿಗೆ ಶಾಲೆಯ ಮುಖ್ಯೋಪಾಧ್ಯಾಯರು ಚಪ್ಪಲಿಯಿಂದ ಹೊಡೆದಿದ್ದಾರೆ. ಇಲ್ಲಿಯ ಮಾಹುಂಗಾ ಖೇಡಿ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ ಹೊಡೆಯುತ್ತಿರುವಾಗ ಶಾಲೆಯ ಇತರ ಶಿಕ್ಷಕ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಘಟನೆಯ ನಂತರ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಶಿಕ್ಷಣ ಅಧಿಕಾರಿ ಲಕ್ಷ್ಮಿಕಾಂತ ಪಾಂಡೆ ಇವರು ನೀಡಿದರು.

ಸಂಪಾದಕೀಯ ನಿಲುವು

* ಇಂತಹ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮುಂದೆ ಏನು ಆದರ್ಶ ಇಡುವರು ?