ಕತಾರನಿಂದ ಬಂದಿದ್ದ ನೇಪಾಳಿ ಮುಸಲ್ಮಾನನಿಂದ ಅಪ್ರಾಪ್ತ ಹುಡುಗಿಯ ಅಪಹರಣ !

ದರಭಂಗ (ಬಿಹಾರ)ದಿಂದ ಬಂಧಿಸಿದ ಪೊಲೀಸರು !

ವಾಸನಾಂಧ ಮುಸಲ್ಮಾನ !

ಪಾಟಲಿಪುತ್ರ (ಬಿಹಾರ) – ನೇಪಾಳ ಮೂಲದ ನಿವಾಸಿ ಮತ್ತು ಕತಾರನಲ್ಲಿ ಕೂಲಿ ಕೆಲಸ ಮಾಡುವ ಇಜರಾಯಿಲ್ ನದಾಫ ಹೆಸರಿನ ಯುವಕ ರಾಜಸ್ಥಾನದ ದೌಸಾ ಜಿಲ್ಲೆಯ ಬಾಂಧಿಕೂಯಿಯ ಓರ್ವ ೧೩ ವರ್ಷದ ಅಪ್ರಾಪ್ತ ಹುಡುಗಿಗೆ ‘ಇನ್ಸ್ಟ್ರಾಗ್ರಾಮ್’ ಮೂಲಕ ಪ್ರೇಮದ ಬಲೆಯಲ್ಲಿ ಸಿಲುಕಿಸಿ ಆಕೆಯನ್ನು ಭೇಟಿಯಾಗಲು ಆತ ರಾಜಸ್ಥಾನಕ್ಕೆ ಬಂದು ಆಕೆಯನ್ನು ಅಪಹರಿಸಿದ. ಪೊಲೀಸರು ಇರಿಬ್ಬರನ್ನು ಬಿಹಾರದ ದರ್ಭಂಗಾದಿಂದ ವಶಕ್ಕೆ ಪಡೆದರು. ಪೊಲೀಸರು ಇಜರಾಯಿಲ ನನ್ನು ಬಂದಿಸಿ ಹುಡುಗಿಗೆ ಕುಟುಂಬದವರಿಗೆ ಒಪ್ಪಿಸಿದ್ದಾರೆ.

ಪೊಲೀಸರ ತನಿಖೆಯಲ್ಲಿ ‘ಸಂತ್ರಸ್ತೆ ‘ಫ್ರೀ ಫೈಯರ್ ಗೇಮ್’ ಈ ಆನ್‌ಲೈನ್ ಆಟ ಆಡುತ್ತಿದ್ದಳು’, ಎಂದು ತಿಳಿದುಬಂದಿದೆ. ಇದರ ವಿಸ್ತೃತ ಮಾಹಿತಿ ಪಡೆದು ಅದರ ಆಧಾರದಲ್ಲಿ ಪೊಲೀಸರು ‘ಪ್ರಸ್ತುತ ಆಕೆ ಎಲ್ಲಿದ್ದಾಳೆ ?, ಎಂಬುದನ್ನು ಕಂಡುಹಿಡಿದರು. ಅದೇ ಸಂಚಾರ ವಾಣಿಯಿಂದ ಆಕೆ ವಿಶಿಷ್ಟ ಇನ್ಸ್ಟಾಗ್ರಾಮ್ ಖಾತೆ ನೋಡುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ. ಈ ಖಾತೆ ಇಜರಾಯಿಲ್ ನದಾಫನದ್ದಾಗಿತ್ತು. ಇದರಿಂದ ಪೊಲೀಸರು ನದಾಫ್‌ನ ಸಂಚಾರವಾಣಿಯ ಸಂಖ್ಯೆಯ ಕಂಡುಹಿಡಿದು ಅವರಿಬ್ಬರು ಬಿಹಾರದ ದರಭಂಗಾಗೆ ಬಂದಿರುವುದು ತಿಳಿಯುತ್ತಲೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.