ಮತ್ಸ್ಯರೂಪಿ ವಿಷ್ಣುವಿನ ಜನ್ಮ !

“ಭಗವಂತನೇ, ನಿಮ್ಮ ಕೈಯಿಂದ ನನಗೆ ಮರಣ ದೊರೆಯಲೆಂದೇ ನಾನು ವೇದಗಳನ್ನು ಅಪಹರಿಸಿದೆ. ನೀವು ನನ್ನನ್ನು ಅವಶ್ಯ ವಧಿಸಿರಿ, ಆದರೆ ನನ್ನದೊಂದು ಇಚ್ಛೆಯಿದೆ, ಅದೆಂದರೆ ನನ್ನ ಮೃತ ಶರೀರವನ್ನು ನೀವು ಯಾವಾಗಲೂ ನಿಮ್ಮ ಎಡಗೈಯಲ್ಲಿ ಧರಿಸಬೇಕು…

ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ

ಹಬ್ಬವನ್ನು ಶಾಸ್ತ್ರಕ್ಕನುಸಾರ ಏಕೆ ಆಚರಿಸಬೇಕು ? , ನವರಾತ್ರಿ, ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳ ಮಹತ್ವವೇನು ? 

ಸಾಧನೆಯಲ್ಲಿ ಕೇಳಿಸಿಕೊಳ್ಳುವುದು ಅಂದರೇನು ? ಕೇಳಿಸಿಕೊಳ್ಳುವುದು ಇದರ ನಿಜವಾದ ಅರ್ಥವೇನು ?

ಕಿವಿಗಳು ಕೇವಲ ಹೇಳಿದ ಮಾತುಗಳು ಅಥವಾ ಶಬ್ದಗಳು ಒಳಗೆ ಹೋಗುವ ಬಾಗಿಲು ಗಳಾಗಿವೆ; ಆದರೆ ‘ಕೇಳಿಸಿಕೊಳ್ಳುವುದು’ ಎನ್ನುವುದು ಅಂತಃಕರಣದ ಕಾರ್ಯವಾಗಿದೆ.

ಸನಾತನದ ಸಂತರ ಸಮಷ್ಟಿ ಕಾರ್ಯವು, ಅವರ ಬ್ರಾಹ್ಮತೇಜದ ಸ್ತರದ ಸಾಧನೆಯೇ ಆಗಿದೆ !

ಕೆಲವರು ‘ಯೋಗ್ಯ ಕಾಲ ಬಂದಾಗ ಸಾಧನೆಯನ್ನು ಮಾಡುತ್ತೇವೆ’ ಎನ್ನುತ್ತಾರೆ; ಆದರೆ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಬಾಲ್ಯವು ಶಿಕ್ಷಣದಲ್ಲಿ, ಯೌವ್ವನವು ಸಂಸಾರದಲ್ಲಿ ಮತ್ತು ವೃದ್ಧಾಪ್ಯವು ಅನಾರೋಗ್ಯದಲ್ಲಿ ಕಳೆಯುತ್ತದೆ. ಆದುದರಿಂದ ಸಾಧನೆಗೆ ಪ್ರತ್ಯೇಕವಾದ ಸಮಯವೇ ಉಳಿಯುವುದಿಲ್ಲ.

ಶಾಶ್ವತ ಪರಿವರ್ತನೆ !

ನಾವು ಜೀವನದಲ್ಲಿ ಶಾಶ್ವತ ಪರಿವರ್ತನೆಯನ್ನು ತಂದುಕೊಳ್ಳಲು ಸಾಧನೆ ಮಾಡಬೇಕು, ಉಳಿದ ಬದಲಾವಣೆಗಳೆಲ್ಲವೂ ಅಶಾಶ್ವತವಾಗಿವೆ. ಇಂತಹ ಪರಿವರ್ತನೆ ವ್ಯಕ್ತಿಯಲ್ಲಿ ಉಂಟಾದರೆ, ಅದರ ಪರಿಣಾಮ ಸಮಾಜ, ಸಂಸ್ಕೃತಿ ಮತ್ತು ರಾಷ್ಟ್ರದ ಮೇಲೆ ಆಗುತ್ತದೆ.

ಯುಗಾದಿಯ ನಿಮಿತ್ತ ಭಾರತೀಯರು ‘ವಸುಧೈವ ಕುಟುಂಬಕಮ್’ (ಸಂಪೂರ್ಣ ಪೃಥ್ವಿ ಒಂದು ಕುಟುಂಬ) ಎಂಬ ಸಂಕಲ್ಪವನ್ನು ಮಾಡಬೇಕು !

ಚೈತ್ರ ಶುಕ್ಲ ಪಾಡ್ಯವನ್ನು ‘ಯುಗಾದಿ’ ಎಂದು ಕರೆಯಲಾಗುತ್ತದೆ. ಮನೆಮನೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಬೆಳಗ್ಗಿನಿಂದಲೇ  ಮಂಗಳವಾದ್ಯಗಳ ಸ್ವರಗಳು ಮೊಳಗುತ್ತಿರುತ್ತವೆ. ಮಹಿಳೆಯರು ಮನೆಯ ಮುಂದೆ ಸುಂದರ ರಂಗೋಲಿಗಳನ್ನು ಹಾಕುತ್ತಿದ್ದರೆ, ಪುರುಷರು ವಿಜಯ ಮತ್ತು ಮಂಗಲದ ಸಂಕೇತವಾದ ಬ್ರಹ್ಮಧ್ವಜವನ್ನು ನಿಲ್ಲಿಸುವಲ್ಲಿ ಮಗ್ನರಾಗಿರುತ್ತಾರೆ.

ಯುಗಾದಿ ಹಬ್ಬದಂದು ವರ್ಷಫಲ ಶ್ರವಣ ಮಾಡುವುದರ ಲಾಭ !

ಬರಗಾಲ ಬೀಳುವುದಿದ್ದರೆ, ಧಾನ್ಯ ಮತ್ತು ಮೇವುಗಳ ಮಿತವ್ಯಯ ಮಾಡಿ ಅಥವಾ ಯಾವ ದೇಶಗಳಲ್ಲಿ ಸಮೃದ್ಧಿ ಆಗುವುದಿದ್ದರೆ ಅಥವಾ ಆಗಿದ್ದರೆ ಅಲ್ಲಿಂದ ಧಾನ್ಯ, ಮೇವು ತಂದು ಸಂಗ್ರಹಿಸಿಡಬಹುದು ಮತ್ತು ಅಡಚಣೆಯ ಸಮಯಕ್ಕಾಗಿ ವ್ಯವಸ್ಥೆ ಮಾಡಿ ಇಡಬಹುದು.

ಯುಗಾದಿ ಆಚರಣೆಯ ಬಗ್ಗೆ ನಿಮಗಿದು ತಿಳಿದಿದೆಯೇ ?

ಯುಗಾದಿ ಹಬ್ಬದ ದಿನದಂದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ (ಪಾನಕ) ಮಾಡುವುದು ಮತ್ತು ನೀರಿನಿಂದ ತುಂಬಿದ ಮಡಕೆಯನ್ನು ದಾನ ಮಾಡುವುದು ಒಂದು ರೂಢಿಯಲ್ಲಿರುವ ಸಂಪ್ರದಾಯವಾಗಿದೆ. ಈ ಶುಭ ದಿನದಂದು ವಿವಿಧೆಡೆ ಮುಂಜಾನೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಗುತ್ತದೆ.

ಯುಗಾದಿಯ ಮಹತ್ವ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ನಂಬಿಕೆಗಳು

ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದ ದಿನದಿಂದ ಜೀವನಮಾನವು ಪ್ರಾರಂಭವಾಯಿತು. ಆದ್ದರಿಂದ ಚೈತ್ರದಿಂದ ಹೊಸ ವರ್ಷವನ್ನು ಪರಿಗಣಿಸಲಾಗುತ್ತದೆ. ಚೈತ್ರ ಪಾಡ್ಯದಂದು ದುರ್ಗಾದೇವಿಯು ಪ್ರಕಟಗೊಂಡಳು ಮತ್ತು ದುರ್ಗಾದೇವಿಯ ಸೂಚನೆಯ ಮೇರೆಗೆ ಬ್ರಹ್ಮದೇವನು ಈ ದಿನದಂದು ಸೃಷ್ಟಿಯ ರಚನೆಯನ್ನು ಮಾಡಿದನು.