ಮತ್ಸ್ಯ ಜಯಂತಿ (ಮಾರ್ಚ್ ೨೧) ನಿಮಿತ್ತ…

ಭಗವಾನ ವಿಷ್ಣುವು ಮತ್ಸ ರೂಪವನ್ನು ಧರಿಸಿ ಶಂಖಾಸುರನನ್ನು ವಧಿಸಿದನು, ಆ ಮತ್ಸ್ಯರೂಪಿ ವಿಷ್ಣುವಿನ ಜನ್ಮವು ಚೈತ್ರ ಶುಕ್ಲ ಪಾಡ್ಯದಂದೇ ಆಯಿತು. ಶಂಖಾಸುರನು ಸಾಗರದಿಂದ ಉತ್ಪನ್ನನಾದ ಸದಾ ಸಾಗರದಲ್ಲಿಯೇ ವಾಸಿಸುವ ಬಲಾಢ್ಯ ರಾಕ್ಷಸನಾಗಿದ್ದನು. ಈ ರಾಕ್ಷಸನು ಬಲವಂತವಾಗಿ ವೇದಗಳನ್ನು ಅಪಹರಿಸಿ ಸಾಗರದ ತಳದಲ್ಲಿ ಅಡಗಿ ಕುಳಿತನು. ಆಗ ದೇವತೆಗಳು ಮತ್ತು ಋಷಿಮುನಿಗಳು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿದ್ದ ಭಗವಾನ ವಿಷ್ಣುವನ್ನು ಜಾಗೃತಗೊಳಿಸಿದರು ಮತ್ತು ಶಂಖಾಸುರನಿಗೆ ಪಾಠ ಕಲಿಸಲು ಪ್ರಾರ್ಥಿಸಿದರು. ಭಗವಾನ ವಿಷ್ಣುವು ಮತ್ಸ್ಯರೂಪವನ್ನು ತಾಳಿ ಶಂಖಾಸುರನ ಅಡಗುತಾಣವನ್ನು ಪತ್ತೆಹಚ್ಚಿದನು ಮತ್ತು ಅವನ ಶಿರಚ್ಛೇದ ಮಾಡುವಷ್ಟರಲ್ಲಿ ಶಂಖಾಸುರನು, “ಭಗವಂತನೇ, ನಿಮ್ಮ ಕೈಯಿಂದ ನನಗೆ ಮರಣ ದೊರೆಯಲೆಂದೇ ನಾನು ವೇದಗಳನ್ನು ಅಪಹರಿಸಿದೆ. ನೀವು ನನ್ನನ್ನು ಅವಶ್ಯ ವಧಿಸಿರಿ, ಆದರೆ ನನ್ನದೊಂದು ಇಚ್ಛೆಯಿದೆ, ಅದೆಂದರೆ ನನ್ನ ಮೃತ ಶರೀರವನ್ನು ನೀವು ಯಾವಾಗಲೂ ನಿಮ್ಮ ಎಡಗೈಯಲ್ಲಿ ಧರಿಸಬೇಕು, ಹಾಗೆಯೇ ನನ್ನ ಮೃತಶರೀರವನ್ನು ಸ್ಪರ್ಶಿಸಿದ ನೀರಿನಿಂದ ನಿಮಗೆ ಸ್ನಾನ ಮಾಡಿಸದ ಹೊರತು ನಿಮ್ಮ ಪೂಜೆಯು ಪೂರ್ಣಗೊಳ್ಳಬಾರದು ಎಂಬ ವರವನ್ನು ನನಗೆ ನೀಡಿರಿ”, ಎಂದು ಹೇಳಿದನು. ಭಗವಾನ ವಿಷ್ಣುವು ‘ತಥಾಸ್ತು’ ಎಂದು ಹೇಳಿದನು ಮತ್ತು ಶಂಖಾಸುರನನ್ನು ವಧಿಸಿದನು. ಅಂದಿನಿಂದ ವಿಷ್ಣುವು ಕೈಯಲ್ಲಿ ಶಂಖವನ್ನು ಧರಿಸಿದನು.
ಯುಗಾದಿ ದಿನದಂದು ಶುಭಸಂಕಲ್ಪವನ್ನು ಮಾಡಿದರೆ, ಆ ಸಂಕಲ್ಪವು ನಮ್ಮ ಜೀವನಕ್ಕೆ ಫಲದಾಯಕವಾಗುತ್ತದೆ. ಇದಕ್ಕಾಗಿಯೇ ಸತ್ಯಸಂಕಲ್ಪರೂಪಿ ಧ್ವಜದ ಮಹೂರ್ತವನ್ನು ಮಾಡುವುದಿರುತ್ತದೆ.
– ಪರಾತ್ಪರ ಗುರು (ದಿ.) ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಆದಿ ಶಂಕರಾಚಾರ್ಯರ ಕೈಲಾಸಗಮನ ದಿನ ( ೩೦.೪.೨೦೨೬ )
ಪ.ಪೂ. ಸತ್ಯಸಾಯಿ ಬಾಬಾ ಪುಣ್ಯಸ್ಮರಣೆ (೨೪.೪.೨೦೨೬)
ಶ್ರೀ ವ್ಯಾಸರಾಜರ ಜಯಂತಿ, ವೈಶಾಖ ಶುಕ್ಲ ಸಪ್ತಮಿ (೨೩.೪.೨೦೨೬)