ಶಾಶ್ವತ ಪರಿವರ್ತನೆ !

೧೯ ಮಾರ್ಚ್ ೨೦೨೬ ಈ ದಿನದಂದು ಯುಗಾದಿ ಇದೆ ! ಇದು ಹೊಸ ವರ್ಷದ ಆರಂಭ. ಅಂದರೆ ಹಳೆಯದನ್ನು ಹೊರಹಾಕಿ ಹೊಸದನ್ನು ಅಂಗೀಕರಿಸುವ ದಿನ. ಸೃಷ್ಟಿಯಲ್ಲಿ ಇಂದಿನಿಂದ ಹೊಸ ಸೃಷ್ಟಿ ಆರಂಭವಾಗಲಿದೆ. ಅಂದರೆ ಮತ್ತೊಮ್ಮೆ ಒಂದು ಪರಿವರ್ತನೆ ಉಂಟಾಗಲಿದೆ.

ಪರಿವರ್ತನೆಯು ಸೃಷ್ಟಿಯ ನಿಯಮವೇ ಆಗಿದೆ. ಪ್ರಕೃತಿಯಲ್ಲಿ ೬ ಋತುಗಳಿವೆ. ಪ್ರತಿಯೊಂದು ಋತುವಿನ ನಂತರ ಎರಡನೇ ಋತು ಬರುತ್ತದೆ, ಇದು ಸಹ ಒಂದು ಪರಿವರ್ತನೆಯಾಗಿದೆ. ಸೂರ್ಯೋದಯವಾದ ನಂತರ ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲೆ ಬರುತ್ತಾನೆ ಮತ್ತು ಸಾಯಂಕಾಲ ಸೂರ್ಯನು ಅಸ್ತನಾಗುತ್ತಾನೆ ಮತ್ತು ರಾತ್ರಿಯು ಆರಂಭವಾಗುತ್ತದೆ. ದಿನವಿಡೀ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಸೃಷ್ಟಿಯಲ್ಲಿ ಹೇಗೆ ಬದಲಾವಣೆಗಳು ಆಗುತ್ತವೆಯೋ, ಹಾಗೆಯೇ ವ್ಯಕ್ತಿ, ಸಮಾಜ, ಸಂಸ್ಕೃತಿ, ರಾಷ್ಟ್ರ ಮುಂತಾದವುಗಳಲ್ಲಿಯೂ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿರುತ್ತವೆ; ಹಾಗಾದರೆ ಅದನ್ನು ಒಳ್ಳೆಯ ಅಥವಾ ಕೆಟ್ಟ ಬದಲಾವಣೆ ಅಥವಾ ಪರಿವರ್ತನೆ ಎಂದು ಕರೆಯಬಹುದು. ಉದಾ. ಇಂದು ‘ಗ್ಲೋಬಲ್ ವಾರ್ಮಿಂಗ್’ದಿಂದಾಗಿ (ಜಾಗತಿಕ ತಾಪಮಾನ ಏರಿಕೆಯಿಂದ) ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯು ಭೂಮಿಯ ಮತ್ತು ಪರ್ಯಾಯವಾಗಿ ಸೃಷ್ಟಿಯ ವಿನಾಶಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಗ್ಲೋಬಲ್ ವಾರ್ಮಿಂಗ್‌ನಿಂದ ಪಾರಾಗಲು ಎಲ್ಲಾ ದೇಶಗಳು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿವೆ, ಅದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ.

ಶ್ರೀ. ಪ್ರಶಾಂತ ಕೋಯಂಡೆ

ವ್ಯಕ್ತಿಯಲ್ಲೂ ಪರಿವರ್ತನೆ ಉಂಟಾಗುತ್ತಿರುತ್ತದೆ. ವಯಸ್ಸಿಗೆ ಅನುಗುಣವಾಗಿ ಪ್ರತಿಯೊಬ್ಬರಲ್ಲೂ ಬದಲಾವಣೆಯಾಗುತ್ತದೆ. ಬಾಲಕ, ಕಿಶೋರ, ತರುಣ, ಗೃಹಸ್ಥ, ವಯೋವೃದ್ಧ ಹೀಗೆ ವಿವಿಧ ಹಂತಗಳಲ್ಲಿ ವ್ಯಕ್ತಿಯಲ್ಲಿ ಬದಲಾವಣೆಗಳಾಗುತ್ತವೆ. ಸಮಾಜದಲ್ಲಿ ಬದಲಾವಣೆಯಾಗುವಾಗ ವಿವಿಧ ಘಟನೆಗಳು ಕಾರಣವಾಗುತ್ತವೆ, ಅದರಲ್ಲಿ ‘ಕಾಲ’ವು ಅತ್ಯಂತ ಪ್ರಮುಖವಾದುದು. ಕಾಲಾನುಸಾರ ವ್ಯಕ್ತಿ, ಸಮಾಜ ಮುಂತಾದವುಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ, ಉದಾ. ೧ ಸಾವಿರ ವರ್ಷಗಳ ಹಿಂದೆ, ಅಂದರೆ ಮುಸಲ್ಮಾನ ಆಕ್ರಮಣಕಾರರು ಮತ್ತು ಆಂಗ್ಲರು ಭಾರತಕ್ಕೆ ಬರುವ ಮೊದಲು ಭಾರತವು ಜಗತ್ತಿನ ‘ವಿಶ್ವಗುರು’ ಆಗಿತ್ತು. ಭಾರತದ ಸಕಲ ರಾಷ್ಟ್ರೀಯ ಉತ್ಪನ್ನವು ಶೇ. ೨೮ ರಷ್ಟಿತ್ತು. ಇಲ್ಲಿ ಅತ್ಯಂತ ಉನ್ನತ ಮತ್ತು ಸಂಪನ್ನ ಸಂಸ್ಕೃತಿ ನೆಲೆಸಿತ್ತು. ಭಾರತದ ಪ್ರಾಚೀನ ಸ್ಮಾರಕಗಳು ಮತ್ತು ದೇವಸ್ಥಾನಗಳನ್ನು ನೋಡಿದಾಗ ನಮಗೆ ಇದರ ಅರಿವಾಗುತ್ತದೆ; ಆದರೆ ಒಂದು ಸಾವಿರ ವರ್ಷಗಳ ನಂತರ ಇಂದು ನಾವು ಅದರ ಬಗ್ಗೆ ಯೋಚಿಸಿದಾಗ, ನಾವು ಅದೆಲ್ಲವನ್ನೂ ಕಳೆದುಕೊಂಡಿದ್ದೇವೆ ಎಂಬುದು ಗಮನಕ್ಕೆ ಬರುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಇದನ್ನು ‘ಕಾಲದ ಮಹಿಮೆ’ ಎಂದೇ ಹೇಳಬೇಕಾಗುತ್ತದೆ. ಈ ಕಾಲಚಕ್ರವನ್ನು ಗಮನದಲ್ಲಿಟ್ಟು ಕಳ್ಳಬೇಕಾಗುತ್ತದೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಈಗಿನ ಕಲಿಯುಗ ಹೀಗೆ ನಾಲ್ಕು ಯುಗಗಳಿವೆ. ಈ ಯುಗಗಳಲ್ಲಿನ ವ್ಯಕ್ತಿ, ಸಮಾಜ ಮುಂತಾದವುಗಳ ಸ್ಥಿತಿ ಬೇರೆಬೇರೆಯಾಗಿರುತ್ತದೆ ಎಂದು ನಾವು ಪೌರಾಣಿಕ ಗ್ರಂಥಗಳಲ್ಲಿ ಓದಿದ್ದೇವೆ. ಪ್ರತಿಯೊಂದು ಯುಗದಲ್ಲಿ ಸಣ್ಣ ಸಣ್ಣ ಯುಗಗಳ ಚಕ್ರಗಳು ನಡೆಯುತ್ತಿರುತ್ತವೆ. ಈ ಯುಗ ಬದಲಾವಣೆಯನ್ನು ನಾವು ಉತ್ಕ್ರಾಂತಿ ಎಂದು ಕರೆಯಬಹುದು. ಅದರಲ್ಲಿ ರಾಜ್ಯವ್ಯವಸ್ಥೆ, ಆಡಳಿತವ್ಯವಸ್ಥೆ, ಶಿಕ್ಷಣವ್ಯವಸ್ಥೆ, ವ್ಯಾಪಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಆಮೂಲಾಗ್ರ ಬದಲಾವಣೆಗಳಾಗುತ್ತವೆ.

ನಾವು ಜೀವನದಲ್ಲಿ ಶಾಶ್ವತ ಪರಿವರ್ತನೆಯನ್ನು ತಂದುಕೊಳ್ಳಲು ಸಾಧನೆ ಮಾಡಬೇಕು, ಉಳಿದ ಬದಲಾವಣೆಗಳೆಲ್ಲವೂ ಅಶಾಶ್ವತವಾಗಿವೆ. ಇಂತಹ ಪರಿವರ್ತನೆ ವ್ಯಕ್ತಿಯಲ್ಲಿ ಉಂಟಾದರೆ, ಅದರ ಪರಿಣಾಮ ಸಮಾಜ, ಸಂಸ್ಕೃತಿ ಮತ್ತು ರಾಷ್ಟ್ರದ ಮೇಲೆ ಆಗುತ್ತದೆ. ಅನೇಕ ದಾರ್ಶನಿಕ ಸಂತರು ಹೇಳುತ್ತಿರುವಂತೆ, ಕಲಿಯುಗದ ಅಂತರ್ಗತ ಒಂದು ‘ಸತ್ಯಯುಗ’ವು ಬರಲಿದೆ ಮತ್ತು ಭಾರತವು ಮತ್ತೆ ವಿಶ್ವಗುರು ಸ್ಥಾನದಲ್ಲಿ ವಿರಾಜಮಾನವಾಗಲಿದೆ.

– ಶ್ರೀ. ಪ್ರಶಾಂತ ಕೋಯಂಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ.