ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದುಬಂದ ಅಮೃತಬಿಂದು !

‘ವಿಚಾರಿಸಿಕೊಳ್ಳುವುದು, ಕೇಳಿಸಿಕೊಳ್ಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ನೀಡುವುದು’, ಇವು ಸಾಧನೆಯ ದೈವೀ ಪಂಚಸೂತ್ರಗಳಾಗಿವೆ. ಸಾಧನೆಯ ಈ ಪಂಚಸೂತ್ರಗಳಲ್ಲಿನ ಎರಡನೇ ಮಹತ್ವದ ಸೂತ್ರವೆಂದರೆ ‘ಕೇಳಿಸಿಕೊಳ್ಳುವುದು’ ! ಸಾಧಕರು ಅಥವಾ ಜವಾಬ್ದಾರ ಸಾಧಕರು ನಮಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನಗಳ ದೃಷ್ಟಿಯಿಂದ ಏನು ಹೇಳುತ್ತಾರೆಯೋ, ಅದನ್ನು ‘ಕೇಳಿಸಿಕೊಳ್ಳುವುದು’ ಮತ್ತು ‘ಕೇಳಿಸಿಕೊಂಡ ಪ್ರಯತ್ನಗಳನ್ನು ಕೃತಿಯಲ್ಲಿ ತರುವುದು.’ ‘ಕೇಳಿಸಿಕೊಳ್ಳುವುದು’ ಅಂದರೆ ನಿಖರವಾಗಿ ಏನು ? ಕೇಳಿಸಿಕೊಳ್ಳುವುದು ಇದರ ನಿಜವಾದ ಅರ್ಥವೇನು ? ಅದೆಂದರೆ…
೧. ಸಾಧನೆಯಲ್ಲಿ ‘ಹೇಳಿದ್ದನ್ನು ಕೇಳುವುದು’ ಅಂದರೆ ಕೇವಲ ಕಿವಿಗಳಿಂದ ಅಲ್ಲ, ಮನಸ್ಸಿನಿಂದ ಕೇಳಿಸಿಕೊಳ್ಳುವುದು
ಹೇಳಿದ್ದನ್ನು ಕೇಳುವಾಗ ಕೇವಲ ಕಿವಿಗಳಿಂದ ಕೇಳಿಸಿಕೊಂಡರೆ ಕೇವಲ ಶಬ್ದಗಳು ಕೇಳಿ ಬರುತ್ತವೆ. ಈ ರೀತಿ ‘ಕೇಳಿಸಿಕೊಳ್ಳುವುದು’ ಇದು ಮೇಲ್ನೋಟವಾಗಿರುತ್ತದೆ. ನಮ್ಮ ಸಾಧನೆಯಾಗಲು ಅಂತಃಕರಣದಿಂದ ಕೇಳಿಸಿಕೊಂಡು ಆ ರೀತಿ ಕೃತಿ ಮಾಡಬೇಕು.
೨. ‘ಹೇಳಿದ್ದನ್ನು ಕೇಳುವುದು’ ಇದು ಅಂತಃಕರಣದ ಕಾರ್ಯ
ಕಿವಿಗಳು ಕೇವಲ ಹೇಳಿದ ಮಾತುಗಳು ಅಥವಾ ಶಬ್ದಗಳು ಒಳಗೆ ಹೋಗುವ ಬಾಗಿಲು ಗಳಾಗಿವೆ; ಆದರೆ ‘ಕೇಳಿಸಿಕೊಳ್ಳುವುದು’ ಎನ್ನುವುದು ಅಂತಃಕರಣದ ಕಾರ್ಯವಾಗಿದೆ. ಆದ್ದರಿಂದ, ಕಿವಿಗಳಿಂದ ಕೇಳಿಸಿಕೊಳ್ಳುವುದರ ಜೊತೆಗೆ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಿದರೆ, ಶಬ್ದಗಳ ಜೊತೆಗೆ ಅವುಗಳ ಹಿಂದಿರುವ ಬೋಧನೆ ಕೂಡ ನಮಗೆ ಪ್ರಾಪ್ತವಾಗುತ್ತದೆ.
೩. ‘ಕೇಳುವ ವೃತ್ತಿ’ ಎಂದರೆ ತನ್ನ ಅಹಂಕಾರವನ್ನು ಬದಿಗಿಡುವುದು ಮತ್ತು ಹೇಳಿದ್ದನ್ನು ಮನಃಪೂರ್ವಕವಾಗಿ ಗ್ರಹಿಸುವುದು !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೦.೧೨.೨೦೨೫)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು