ಯುಗಾದಿ ಪೂಜಾ ಪದ್ಧತಿ
ಸಂವತ್ಸರ ಫಲ ಎಂದರೆ ಏನು ? ಯುಗಾದಿ ಪಾಡ್ಯದಿಂದ ಪ್ರಾರಂಭವಾಗುವ ಹೊಸ ವರ್ಷವನ್ನು ‘ಸಂವತ್ಸರ’ ಎನ್ನಲಾಗುತ್ತದೆ. ಆ ವರ್ಷದ ಮೊದಲ ದಿನದಂದು ಮತ್ತು ನಂತರದ ಕೆಲವು ನಿರ್ದಿಷ್ಟ ದಿನಗಳ ಗ್ರಹಗತಿಗಳ ಸ್ಥಿತಿ – ಅಂದರೆ ವಾರ, ಚಂದ್ರ, ನಕ್ಷತ್ರ, ಸೂರ್ಯನ ವಿವಿಧ ನಕ್ಷತ್ರ ಪ್ರವೇಶ ಇತ್ಯಾದಿ ಆಧಾರದ ಮೇಲೆ ಈ ‘ಸಂವತ್ಸರ ಫಲ’ವನ್ನು ನಿರ್ಧರಿಸಲಾಗುತ್ತದೆ. ಸಂವತ್ಸರ ಫಲದಲ್ಲಿ ದೇಶ ಮತ್ತು ಕಾಲದ ನಿರ್ದೇಶನವೂ ಇರುತ್ತದೆ, ಅಂದರೆ ದೇಶದ ಯಾವ ಭಾಗದಲ್ಲಿ ಸುಖ-ಸಮೃದ್ಧಿ ಇರುತ್ತದೆ ಎಂಬುದನ್ನು ಸಂವತ್ಸರ ಫಲದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗುತ್ತದೆ. ವರ್ಷದ ಮೊದಲ ದಿನವಾದ ಯುಗಾದಿಯ ದಿನದಂದು ಯಾವ ವಾರವಿರುತ್ತದೆಯೋ, ಆ ವಾರಕ್ಕೆ ಸಂಬಂಧಿಸಿದ ಗ್ರಹವೇ ಆ ವರ್ಷದ ಅಧಿಪತಿ ಎಂದು ತಿಳಿಯಲಾಗುತ್ತದೆ. ಉದಾಹರಣೆಗೆ, ಇಂದು ಪ್ರಾರಂಭವಾಗುವ ಹೊಸ ವರ್ಷದ ದಿನವು ಗುರುವಾರವಾಗಿದ್ದರೆ, ‘ಗುರು’ ಗ್ರಹವು ಆ ವರ್ಷದ ಅಧಿಪತಿಯಾಗಿರುತ್ತಾನೆ, ಎಂದು ನಂಬಲಾಗುತ್ತದೆ. ೬೦ ಸಂವತ್ಸರಗಳನ್ನು ವಿವಿಧ ಪದ್ಧತಿಗಳಲ್ಲಿ ವಿಂಗಡಿಸಲಾಗಿದೆ.

ಒಂದು ವಿಂಗಡನೆಯಲ್ಲಿ, ೫ ಸಂವತ್ಸರಗಳಿಗೆ ಒಂದು ‘ಯುಗ’ದಂತೆ ೬೦ ಸಂವತ್ಸರಗಳನ್ನು ೧೨ ಯುಗಗಳಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಸಂವತ್ಸರ ಚಕ್ರದ ೮ ನೇ ‘ಭಾವ’ ಹೆಸರಿನ ಸಂವತ್ಸರದಿಂದ ೨೭ ನೇ ಸಂವತ್ಸರವಾದ ‘ವಿಜಯ’ದವರೆಗಿನ ೨೦ ಸಂವತ್ಸರಗಳ ಸ್ವಾಮಿ ಅಥವಾ ಪಾಲನಕರ್ತ ಶ್ರೀವಿಷ್ಣು ಎಂದು ನಂಬಲಾಗುತ್ತದೆ. ಬ್ರಹ್ಮದೇವನು ಈ ಮೊದಲ ತಿಥಿಯನ್ನು ಅತ್ಯಂತ ಶ್ರೇಷ್ಠವೆಂದು ಘೋಷಿಸಿದನು. ಇದಕ್ಕೆ ಮೊದಲ ಸ್ಥಾನ ಸಿಕ್ಕಿದ್ದರಿಂದ ಇದನ್ನು ‘ಪ್ರತಿಪದೆ’ ಎಂದು ಕರೆಯಲಾಗುತ್ತದೆ. ಈ ತಿಥಿಯನ್ನು ‘ಯುಗಾದಿ’ ತಿಥಿ ಎಂದೂ ಕರೆಯುತ್ತಾರೆ. ಈ ದಿನ ಉಪಾಧ್ಯಾಯರು ಪಂಚಾಂಗ ಶ್ರವಣ ಎಂದರೆ ವರ್ಷಫಲದ ಶ್ರವಣ ಮಾಡುತ್ತಾರೆ.
ಯುಗಾದಿ – ಕೃಷಿಯ ವಿಷಯದಲ್ಲಿ ಮಹತ್ವ
ಡಾ. ಸರೋಜಿನಿ ಬಾಬರ್ ಅವರ ಅಭಿಪ್ರಾಯದಂತೆ, ಜನಪದ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ. ಭೂಮಿಯು ಈ ಜಗತ್ತಿನ ‘ಗರ್ಭಕೋಶ’ವಿದ್ದಂತೆ; ಸೂರ್ಯನು ಅದರಲ್ಲಿ ಬೀಜವನ್ನು ಬಿತ್ತುತ್ತಾನೆ ಮತ್ತು ಮಳೆಯಾಗುತ್ತದೆ. ಅದರಿಂದ ಭೂಮಿಯು ಫಲವತ್ತಾಗುತ್ತದೆ. ಸೃಜನಶೀಲತೆಗೆ ಸಿಗುವ ‘ಶಕ್ತಿ’ಯೊಂದಿಗೆ ಬೆಸೆದುಕೊಂಡಿರುವ ಹಬ್ಬ ಇದಾಗಿದೆ ಎಂದು ಜನಪದ ಸಂಸ್ಕೃತಿಯ ಸಂಶೋಧಕರು ಪ್ರಮುಖವಾಗಿ ಒತ್ತಿ ಹೇಳುತ್ತಾರೆ.
ಯುಗಾದಿ – ಸಾಮಾಜಿಕ ಮಹತ್ವ
ಯುಗಾದಿ ಹಬ್ಬದ ದಿನದಂದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ (ಪಾನಕ) ಮಾಡುವುದು ಮತ್ತು ನೀರಿನಿಂದ ತುಂಬಿದ ಮಡಕೆಯನ್ನು ದಾನ ಮಾಡುವುದು ಒಂದು ರೂಢಿಯಲ್ಲಿರುವ ಸಂಪ್ರದಾಯವಾಗಿದೆ. ಈ ಶುಭ ದಿನದಂದು ವಿವಿಧೆಡೆ ಮುಂಜಾನೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಗುತ್ತದೆ. ದೀಪಾವಳಿಯ ಮುಂಜಾನೆ, ಹೊಸ ವರ್ಷದ ಮುಂಜಾನೆ ಮತ್ತು ಯುಗಾದಿ ಅಥವಾ ಹಿಂದೂ ಹೊಸ ವರ್ಷದ ಮುಂಜಾನೆಯ ಇಂತಹ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ಮೆರವಣಿಗೆ
ಯುಗಾದಿ ನಿಮಿತ್ತ ಹಿಂದೂ ಸಂಸ್ಕೃತಿಯನ್ನು ತೋರಿಸುವ ಮೆರವಣಿಗೆಯನ್ನು ತೆಗೆಯಲಾಗುತ್ತದೆ. ಮಹಿಳೆಯರು, ಪುರುಷರು, ಚಿಕ್ಕ ಮಕ್ಕಳು ಸಾಂಪ್ರದಾಯಿಕ ಉಡುಪುಗಳಲ್ಲಿ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. (ಆಧಾರ : ‘ಸಂತಸಾಹಿತ್ಯ’ದ ಜಾಲತಾಣ)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !