
‘ಸನಾತನ ಸಂಸ್ಥೆಯು ಕಲಿಸುತ್ತಿರುವ ‘ಗುರುಕೃಪಾಯೋಗಾ’ನುಸಾರ ಸಾಧನೆಯಿಂದಾಗಿ ಈವರೆಗೆ ೧೩೫ ಸಾಧಕರು ಸಂತಪದವಿಗೆ ತಲುಪಿದ್ದಾರೆ. ಅವರು ಸಂತಪದವಿಗೆ ತಲುಪಿದ್ದಾರೆ ಎಂದರೆ, ಸಮಾಜದಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುವ ಸಂತರಂತೆ ಅವರ ಮಾನಸನ್ಮಾನಗಳು ಹೆಚ್ಚಾದವು ಎಂದರ್ಥವಲ್ಲ; ಬದಲಿಗೆ ಅವರ ಆಧ್ಯಾತ್ಮಿಕ ಸ್ತರದ ಕಾರ್ಯದ ವ್ಯಾಪ್ತಿಯು ಈಗ ವಿಸ್ತಾರಗೊಂಡಿದೆ ಎಂದರ್ಥ. ಸನಾತನದ ವ್ಯಷ್ಟಿ ಪ್ರಕೃತಿಯ ಸಂತರು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಎದುರಾಗುವ ಸೂಕ್ಷ್ಮ ಸ್ತರದ ಅಡೆತಡೆಗಳನ್ನು ದೂರ ಗೊಳಿಸಲು ಹಾಗೂ ಸಾಧಕರು ಮತ್ತು ಹಿಂದುತ್ವನಿಷ್ಠರನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸಲು ಹಗಲಿರುಳು ನಾಮಜಪ ಮಾಡಿ ಸೂಕ್ಷ್ಮ ಸ್ತರದ ಯುದ್ಧವನ್ನು ಮಾಡುತ್ತಿದ್ದಾರೆ. ಸಮಷ್ಟಿ ಪ್ರಕೃತಿಯ ಸಂತರು ಸಾಧಕರಿಗೆ ಮತ್ತು ಹಿಂದುತ್ವನಿಷ್ಠರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಸಮಾಜದಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸುತ್ತಿದ್ದಾರೆ. ಈ ರೀತಿಯಾಗಿ ಸನಾತನದ ಸಂತರು ಮಾನಸನ್ಮಾನ ಮತ್ತು ಜನಪ್ರಿಯತೆಯಲ್ಲಿ ಸಿಲುಕಿಕೊಳ್ಳದೆ ಬ್ರಾಹ್ಮತೇಜದ ಸ್ತರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
‘ಕೆಲವರು ‘ಯೋಗ್ಯ ಕಾಲ ಬಂದಾಗ ಸಾಧನೆಯನ್ನು ಮಾಡುತ್ತೇವೆ’ ಎನ್ನುತ್ತಾರೆ; ಆದರೆ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಬಾಲ್ಯವು ಶಿಕ್ಷಣದಲ್ಲಿ, ಯೌವ್ವನವು ಸಂಸಾರದಲ್ಲಿ ಮತ್ತು ವೃದ್ಧಾಪ್ಯವು ಅನಾರೋಗ್ಯದಲ್ಲಿ ಕಳೆಯುತ್ತದೆ. ಆದುದರಿಂದ ಸಾಧನೆಗೆ ಪ್ರತ್ಯೇಕವಾದ ಸಮಯವೇ ಉಳಿಯುವುದಿಲ್ಲ. ಆದ್ದರಿಂದ, ಸಾಧನೆಗಾಗಿ ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಬೇಕು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !