ಕಾಬುಲ್ ವಿಮಾನ ನಿಲ್ದಾಣದಿಂದ ಕಥಿತ ಅಪಹರಣವಾದ 150 ನಾಗರಿಕರು ಸುರಕ್ಷಿತ
ವಿಮಾನ ನಿಲ್ದಾಣದ ಹತ್ತಿರ 150 ಜನರನ್ನು ಅಪಹರಿಸಲಾಗಿದೆ ಎಂದು ವಾರ್ತಾ ವಾಹಿನಿಗಳಲ್ಲಿ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು.
ವಿಮಾನ ನಿಲ್ದಾಣದ ಹತ್ತಿರ 150 ಜನರನ್ನು ಅಪಹರಿಸಲಾಗಿದೆ ಎಂದು ವಾರ್ತಾ ವಾಹಿನಿಗಳಲ್ಲಿ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು.
ತಾಲಿಬಾನಿನ ಉಗ್ರಗಾಮಿಗಳು ಅಫಘಾನಿಸ್ತಾನದಲ್ಲಿನ ಕಂಧಾರ ಹಾಗೂ ಹೆರಾತನಲ್ಲಿ ಮುಚ್ಚಿರುವ ಭಾರತೀಯ ರಾಯಭಾರ ಕಛೇರಿಯೊಳಗೆ ನುಗ್ಗಿದರು. ತಾಲಿಬಾನಿ ಉಗ್ರಗಾಮಿಗಳು ರಾಯಭಾರಿ ಕಚೇರಿಯ ಬೀಗವನ್ನು ಒಡೆದು ಒಳಗೆ ನುಗ್ಗಿದರು. ಅವರು ರಾಯಭಾರ ಕಚೇರಿಯಲ್ಲಿರುವ ಕೆಲವು ಕಾಗದಪತ್ರಗಳ ತಪಾಸಣೆ ಮಾಡಿದರು.
ಚೀನಾ ಒಂದು ದೊಡ್ಡ ಅರ್ಥವ್ಯವಸ್ಥೆ ಹಾಗೂ ಕ್ಷಮತೆಯಿರುವ ದೇಶವಾಗಿದೆ. ಚೀನಾವು ಅಫಘಾನಿಸ್ತಾನದಲ್ಲಿ ಶಾಂತತೆ ಹಾಗೂ ಹೆಚ್ಚಿಸಲು ರಚನಾತ್ಮಕ ಭೂಮಿಕೆಯನ್ನು ವಹಿಸಿದೆ. ನನಗೆ ಅನಿಸುತ್ತದೆ, ಚೀನಾವು ಅಪಘಾನಿಸ್ತಾನದ ಪುನರ್ವಸತಿ ಹಾಗೂ ಪುನರ್ನಿರ್ಮಾಣದಲ್ಲಿ ದೊಡ್ಡ ಭೂಮಿಕೆಯನ್ನು ವಹಿಸಿದೆ.
ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ನಿಧಾನವಾಗಿ ತನ್ನ ಬಣ್ಣ ಬಯಲು ಮಾಡಲು ಆರಂಭಿಸಿದೆ. ತಾಲಿಬಾನವು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಮುರಿದಿದೆ, ಭಾರತದ ಜೊತೆ ಇರುವ ಎಲ್ಲಾ ರೀತಿಯ ಆಮದು-ರಫ್ತನ್ನು ಸಹ ನಿಲ್ಲಿಸಿದೆ
ಮೈಜಡಿ ಮಾಸ್ಟರಪಾರಾ ಪ್ರದೇಶದ ಶಿವಮಂದಿರದ ಭಗವಾನ ಶಿವನ ಎರಡು ಮೂರ್ತಿಗಳನ್ನು ಭಗ್ನ ಮಾಡಿರುವ ಶಕೀಲ್ಉದ್ದಿನ್ ಎಂಬ ೧೮ ವರ್ಷದ ಮತಾಂಧನನ್ನು ಘಟನಾ ಸ್ಥಳದಲ್ಲೇ ಇಲ್ಲಿಯ ಹಿಂದುಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದರು.
ಪಾಕ್ನ ಪಂಜಾಬ ಪ್ರಾಂತ್ಯದ ಬಹಾವನಗರದಲ್ಲಿ ಶಿಯಾ ಮುಸಲ್ಮಾನರು ಮೊಹರಮ್ ನಿಮಿತ್ತ ಮೆರವಣಿಗೆಯನ್ನು ನಡೆಸಿದ್ದರು, ಆ ಸಮಯದಲ್ಲಾದ ಬಾಂಬ್ಸ್ಫೋಟದಲ್ಲಿ ೩ ಮಂದಿ ಸಾವನ್ನಪ್ಪಿದ್ದು, ೧೫ ಮಂದಿ ಗಾಯಗೊಂಡಿದ್ದಾರೆ.
‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ (ಡಿಸ್ಮಾಂಟಲಿಂಗ್ ಗ್ಲೋಬಲ್ ಹಿಂದುತ್ವ) ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಪರಿಷತ್ತನ್ನು ಆಯೋಜಿಸಲಾಗಿದೆ. ಜಗತ್ತಿನಲ್ಲಿನ ೪೦ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು ಈ ಪರಿಷತ್ತನ್ನು ಆಯೋಜಿಸಲು ಮುಂದಾಳತ್ವ ವಹಿಸಿವೆ.
ಫೇಸ್ಬುಕ್ ನಂತರ, ಈಗ ‘ಯೂಟ್ಯೂಬ್’ ಕೂಡ ತಾಲಿಬಾನ್ ಖಾತೆಗಳನ್ನು ನಿಷೇಧಿಸಿದೆ. (‘ಫೇಸ್ಬುಕ್’ ಮತ್ತು ‘ಯುಟ್ಯೂಬ್’ನಲ್ಲಿ ಇನ್ನೆಷ್ಟು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಜಿಹಾದಿ ನಾಯಕರ ಖಾತೆಗಳಿವೆ ಎಂಬುದು ಘೋಷಿಸುವ ಮೂಲಕ ಜಗತ್ತಿಗೆ ತಿಳಿಸಬೇಕು.
ಅಫ್ಘಾನಿಸ್ತಾನದಲ್ಲಿನ ತಾಲಿಬಾನಿ ಸರಕಾರ ಇದು ಜನತೆಯ ಸರಕಾರವಾಗಿದೆ. ಆದ್ದರಿಂದ ಬಾಂಗ್ಲಾದೇಶವು ತಾಲಿಬಾನ್ ಸರಕಾರವನ್ನು ಸ್ವೀಕರಿಸುವುದು, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೋಮೆನ್ ಹೇಳಿದರು.
ಲಾಹೋರ ಕೋಟೆಯಲ್ಲಿರುವ ಅಶ್ವಾರೂಢ ಮಹಾರಾಜಾ ರಣಜೀತ ಸಿಂಹರ ಪ್ರತಿಮೆಯನ್ನು ಮತಾಂಧರು ಧ್ವಂಸಗೊಳಿಸಿದರು. ಪಾಕ್ನಲ್ಲಿ ನಿರ್ಬಂಧಕ್ಕೊಳಗಾಗಿರುವ ತಹರೀಕ-ಎ-ಲಬ್ಬೈಕ ಪಾಕಿಸ್ತಾನ ಎಂಬ ಉಗ್ರಗಾಮಿ ಸಂಘಟನೆಯು ಈ ಕೃತ್ಯವನ್ನು ಮಾಡಿದೆ.