ನಾವು ಭಯೋತ್ಪಾದನೆಯಿಂದ ಪಡೆದಿರುವ ಅಧಿಕಾರವನ್ನು ಉಳಿಸಿ ತೋರಿಸುವೆವು !’

ತಾಲಿಬಾನನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರನ್ನು ಉದ್ದೇಶಿಸಿ ನಿರರ್ಥಕ ಮಾತು !

* ತಾಲಿಬಾನಿಗಳು ಈ ಮೊದಲು ಸಹ ಅಫಘಾನಿಸ್ತಾನದಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದರು; ಆದರೆ ಅದು 5 ವರ್ಷಕ್ಕೂ ಹೆಚ್ಚು ಕಾಲ ಉಳಿಯಲಿಲ್ಲ, ಇದು ಇತಿಹಾಸವಾಗಿದೆ. ತಾಲಿಬಾನಿಗಳು ಇದನ್ನು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ! – ಸಂಪಾದಕರು

* ಒಂದು ಚಿಕ್ಕ ದೇಶದ ಭಯೋತ್ಪಾದಕ ಸಂಘಟನೆಯು ಭಾರತದ ಪ್ರಧಾನ ಮಂತ್ರಿಯವರಿಗೆ ಈ ರೀತಿ ಹೇಳುವುದು, ಅತ್ಯಂತ ಖೇದಕರವಾಗಿದೆ. ಇಂತಹವರನ್ನು ದಾರಿಗೆ ತರಲು ಭಾರತವು ಆಕ್ರಮಣಕಾರಿ ನೀತಿಯನ್ನು ಅವಲಂಬಿಸುವ ಅವಶ್ಯಕತೆಯಿದೆ ! – ಸಂಪಾದಕರು

ತಾಲಿಬಾನದ ಮುಖ್ಯ ನಾಯಕ ಶಹಾಬುದ್ದೀನ ದಿಲಾವರ

ನವದೆಹಲಿ – ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ, ಭಯೋತ್ಪಾದನೆಯ ಮೂಲಕ ಸ್ಥಾಪಿಸಲಾಗುವ ಅಧಿಕಾರವು ಶಾಶ್ವತವಾಗಿ ಇರುವುದಿಲ್ಲ’ ಎಂಬ ಹೇಳಿಕೆಯನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ. ನಾವು ಭಯೋತ್ಪಾದನೆಯ ಬಲದಿಂದ ಪಡೆದಿರುವ ಅಧಿಕಾರವನ್ನು ಉಳಿಸಿಕೊಳ್ಳುತ್ತೇವೆ, ಎಂಬ ಹೇಳಿಕೆಯನ್ನು ತಾಲಿಬಾನದ ಮುಖ್ಯ ನಾಯಕ ಶಹಾಬುದ್ದೀನ ದಿಲಾವರ ಇವನು ಹೇಳಿದ್ದಾನೆ. ‘ತಾಲಿಬಾನ್ ಅಪಘ್ಘಾನಿಸ್ತಾನದಲ್ಲಿ ಯೋಗ್ಯ ರೀತಿಯಿಂದ ಆಡಳಿತಾತ್ಮಕ ನಿರ್ವಹಣೆ ನಡೆಸುವುದು ಆದಷ್ಟು ಬೇಗನೆ ಭಾರತಕ್ಕೆ ಕಂಡುಬರಲಿದೆ’ ಎಂದು ದಿಲಾವರನು ಹೇಳಿದ್ದಾನೆ. ಕೆಲವು ದಿನಗಳ ಹಿಂದೆ ಮೋದಿಯವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಮೇಲಿನ ಹೇಳಿಕೆಯನ್ನು ನೀಡಿದ್ದರು.

ದಿಲಾವರನು ‘ರೇಡಿಯೋ ಪಾಕಿಸ್ತಾನ’ಗೆ ಕೊಟ್ಟಿರುವ ಸಂದರ್ಶನದಲ್ಲಿ ಭಾರತಕ್ಕೆ ಎಚ್ಚರಿಕೆ ನೀಡುತ್ತಾ, ‘ಭಾರತವು ಅಫಘಾನಿಸ್ತಾನದ ಆಂತರಿಕ ಸಮಸ್ಯೆಯಲ್ಲಿ ಗಮನ ಕೊಡಬೇಕಾಗಿಲ್ಲ. (ತಾಲಿಬಾನಿಗಳು ಕೂಡ ಕಾಶ್ಮೀರ ಸಮಸ್ಯೆಯಲ್ಲಿ ಮೂಗು ತೋರಿಸಬಾರದು ಎಂದು, ಅವರಿಗೂ ಸಹ ಕಠೋರವಾಗಿ ಹೇಳುವುದು ಅವಶ್ಯಕ ! – ಸಂಪಾದಕರು) ಪಾಕಿಸ್ತಾನವು ನಮ್ಮ ‘ಮಿತ್ರರಾಷ್ಟ್ರ’ವಾಗಿದೆ. ಅವರು 30 ಲಕ್ಷಕ್ಕೂ ಅಧಿಕ ಅಪಘಾನೀ ನಾಗರಿಕರಿಗೆ ಆಶ್ರಯ ಕೊಟ್ಟಿರುವ ಬಗ್ಗೆ ನಾನು ಆಭಾರಿಯಾಗಿದ್ದೇನೆ’ ಎಂದು ಸಹ ಹೇಳಿದನು. ‘ತಾಲಿಬಾನಿಗೆ ಜಗತ್ತಿನ ಪ್ರತಿಯೊಂದು ದೇಶದ ಜೊತೆಗೆ ಶಾಂತಿ ಪೂರ್ಣ ಮತ್ತು ಸಾಮರಸ್ಯ ಆಧಾರಿತ ಗೌರವ ಪೂರಿತ ಸಂಬಂಧ ಸ್ಥಾಪಿಸುವ ಇಚ್ಛೆ ಇದೆ’, ಎಂದು ಸಹ ಹೇಳಿದನು. (ಇದರ ಮೇಲೆ ಯಾರು ವಿಶ್ವಾಸ ಇಡುವರು ? – ಸಂಪಾದಕರು)