ಭಾರತವನ್ನು ತಡೆಯಲು ಪಾಕಿಸ್ತಾನವು ತಾಲಿಬಾನನ್ನು ಜನ್ಮಕ್ಕೆ ಹಾಕಿದೆ – ಅಪಘಾನಿಸ್ತಾನದ ಮಾಜಿ ಮಂತ್ರಿಯ ಹೇಳಿಕೆ

ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಡೆಸಲು ಯಾವ ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎಂಬುದು ಪುನಃ ಇನ್ನೊಮ್ಮೆ ಸ್ಪಷ್ಟವಾಗಿದೆ ! ಈಗಲಾದರೂ ಭಾರತದಲ್ಲಾಗುತ್ತಿರುವ ಭಯೋತ್ಪಾದಕ ಕಾರ್ಯಾಚರಣೆಯನ್ನು ತಡೆಯಲು ಭಾರತವು ಪಾಕಿಸ್ತಾನದ ನಾಶ ಮಾಡುವುದೇ ?

ಕಾಬೂಲ (ಅಫಘಾನಿಸ್ತಾನ) – ಭಾರತವನ್ನು ತಡೆಯಲು ಪಾಕಿಸ್ತಾನವು ತಾಲಿಬಾನನ್ನು ಜನ್ಮಕ್ಕೆ ಹಾಕಿದೆ ಎಂದು ಅಫಘಾನಿಸ್ತಾನದ ಮಾಜಿ ರಾಜದೂತ ಮಹಮೂದ ಸೈಕಲ ಇವರು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಜನರಲ್ ಪರ್ವೇಜ್ ಮುಷರಫ್ ಇವರಿಗೆ ಪ್ರತ್ಯುತ್ತರ ನೀಡುತ್ತ ಟ್ವೀಟ್ ಮಾಡಿದ್ದಾರೆ. ಮಹಮೂದ ಸೈಕಲ ಇವರು ಸಂಯುಕ್ತ ರಾಷ್ಟ್ರ ಮತ್ತು ಆಸ್ಟ್ರೇಲಿಯಾದಲ್ಲಿ ಅಫಘಾನಿಸ್ತಾನದ ರಾಜದೂತರಾಗಿದ್ದರು. ಸೈಕಲ ಇವರು ಹೇಳಿಕೆಗನುಸಾರ ಇಸ್ಲಾಮಿಕ್ ಸ್ಟೇಟ್ ಖುರಾಸಾನ , ತಾಲಿಬಾನ್ ಮತ್ತು ಅಲ್ ಕಾಯಿದಾ ಇವುಗಳ ನಡುವೆ ಉತ್ತಮ ಸಂಬಂಧವಿದೆ ಎಂದು ಅಮೆರಿಕಾದ ಒಂದು ವರದಿಯಲ್ಲಿ ಹೇಳಲಾಗಿದೆ. ಅಲ್-ಕಾಯದಾದ ನೇತಾರರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ವಾಸಿಸುತ್ತಾರೆ. ಅಲ್-ಕಾಯದಾದ ಭಯೋತ್ಪಾದಕರು ದೊಡ್ಡಸಂಖ್ಯೆಯಲ್ಲಿ ತಾಲಿಬಾನಿಗಳ ಜೊತೆಯಲ್ಲಿ ಅಫಘಾನಿಸ್ತಾನದಲ್ಲಿ ವಾಸಿಸುತ್ತಿದ್ದಾರೆ.