Exclusive: ಪಾಕಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಮಾತನಾಡುವುದೂ ಈಶನಿಂದೆಯೇ ಆಗಿದೆ ! – ರಾಹತ ಆಸ್ಟಿನ್, ಮಾನವಾಧಿಕಾರ ಕಾರ್ಯಕರ್ತ, ಪಾಕಿಸ್ತಾನ

* ಪಾಕಿಸ್ತಾನದಲ್ಲಿನ 8 ವರ್ಷದ ಹಿಂದೂ ಹುಡುಗನ ಮೇಲಿನ ಆರೋಪ ರದ್ದು !

* ಪಾಕಿಸ್ತಾನದಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿದ ನಂತರ ಅಲ್ಲಿ ಪುನಃ ಹೊಸ ಮೂರ್ತಿಯನ್ನು ಇರಿಸದೇ ದೇವತೆಯ ಚಿತ್ರಗಳನ್ನು ಇಡಲಾಗುತ್ತದೆ !

* ನಾಗರಿಕತ್ವ ಸುಧಾರಣಾ ಕಾಯಿದೆ (ಸಿಎಎ) ಯು ಮುಸಲ್ಮಾನ ವಿರೋಧಿಯಾಗಿದೆ ಎಂದು ಹೇಳುತ್ತ ಆಕ್ರೋಶ ವ್ಯಕ್ತಪಡಿಸುವ ಭಾರತದಲ್ಲಿನ ತಥಾಕಥಿತ ಜಾತ್ಯಾತೀತವಾದಿಗಳು ಪಾಕಿಸ್ತಾನದಲ್ಲಿನ ಹಿಂದೂಗಳ ದೈನ್ಯಾವಸ್ಥೆಯ ಕುರಿತು ಯಾವಾಗಲೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು 

* ಪಾಕಿಸ್ತಾನದಲ್ಲಿನ ಈಶನಿಂದೆಯ ಕಾನೂನಿನ ವಿರುದ್ಧ ಚಕಾರವೆತ್ತದವರು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾದಾಗ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಾಲುಣಿಸುತ್ತಾರೆ. ಹಿಂದುಗಳೇ, ಈ ಜನರ ಹಿಂದೂದ್ವೇಷವನ್ನು ಅರಿತು ಅವರನ್ನು ಕಾನೂನುಬದ್ಧ ಮಾರ್ಗದಿಂದ ವಿರೋಧಿಸಿ ! – ಸಂಪಾದಕರು 

ರಾಹತ ಆಸ್ಟಿನ್, ಮಾನವಾಧಿಕಾರ ಕಾರ್ಯಕರ್ತ, ಪಾಕಿಸ್ತಾನ

ನವದೆಹಲಿ – ಕೆಲವು ವಾರಗಳ ಹಿಂದೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಭೊಂಗ ನಗರದಲ್ಲಿ ಓರ್ವ 8 ವರ್ಷದ ಹಿಂದೂ ಹುಡುಗನು ಅಲ್ಲಿನ ಮದರಸಾದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಅವನ ಮೇಲೆ ಈಶನಿಂದೆಯ ಆರೋಪ ಮಾಡಿ ಅವನನ್ನು ಬಂಧಿಸಲಾಗಿತ್ತು. ಇದರಿಂದ ಪಾಕಿಸ್ತಾನದಲ್ಲಿನ ಈಶನಿಂದೆಯ ತೊಂದರೆದಾಯಕ ಕಾನೂನು ಪುನಃ ಇನ್ನೊಮ್ಮೆ ಬಂದೆರಗಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮಾನವಾಧಿಕಾರಗಳಿಗಾಗಿ ಹೋರಾಡುವ ರಾಹತ ಆಸ್ಟಿನ್ ಇವರು ‘ಪಾಕಿಸ್ತಾನದಲ್ಲಿ ತಾಲಿಬಾನಿನ ವಿರುದ್ಧ ಮಾತನಾಡುವುದೂ ಈಶನಿಂದೆಯೇ ಆಗಿದೆ. ಅಲ್ಲಿ ಅಲ್ಪಸಂಖ್ಯಾತರ ಸ್ಥಿತಿಯು ಅತಿಶಯ  ದಯನೀಯವಾಗಿದೆ’ ಎಂದು ಹೇಳಿದ್ದರು. ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಗಳು ರಾಹತ ಆಸ್ಟಿನ್ ಇವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ್ದರು, ಆಗ ಅವರು ಪಾಕಿಸ್ತಾನದಲ್ಲಿನ ಭಯಾನಕ ಸ್ಥಿತಿಯ ಮಾಹಿತಿ ನೀಡಿದರು.

ಈ ಸಮಯದಲ್ಲಿ ಆಸ್ಟಿನರು ‘ಭೋಂಗ’ ನಗರದಲ್ಲಿನ ಅಮಾಯಕ ಹಿಂದೂ ಹುಡುಗನ ಕೃತ್ಯದ ಆಧಾರ ಪಡೆದು ನೂರಾರು ಸ್ಥಳೀಯ ಮತಾಂಧರು ಅಲ್ಲಿನ ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದ್ದರು. ದೇವಸ್ಥಾನವನ್ನು ಧ್ವಂಸಗೊಳಿಸಿ ಹಿಂದೂ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಲಾಗಿತ್ತು. ಆದರೆ ಈಗ ಸಂಬಂಧಿತ ಹುಡುಗನ ವಿರುದ್ಧದ ಎಲ್ಲ ಆರೋಪಗಳು ನಿರಾಧಾರವಾಗಿರುವುದು ಸ್ಪಷ್ಟವಾಗಿದ್ದರಿಂದ ಅವನ ಮೇಲಿನ ಆರೋಪವನ್ನು ಹಿಂಪಡೆಯಲಾಗಿದೆ. ಹೀಗಿರುವಾಗಲೂ ಮತಾಂಧರಿಂದ ಸಂಬಂಧಿತ ಹಿಂದೂ ಕುಟುಂಬಕ್ಕೆ ಅಪಾಯವಿರುವುದರಿಂದ ಇಂದಿಗೂ ಆ ಕುಟುಂಬವು ಪೊಲೀಸರ ಸಂರಕ್ಷಣಾ ಕೊಠಡಿಯಲ್ಲಿ ಇದೆ’ ಎಂದು ಹೇಳಿದರು.

ಆಸ್ಟಿನರು ಪಾಕಿಸ್ತಾನದಲ್ಲಿನ ಮತಾಂಧತೆಯ ಬಗ್ಗೆ ಭಯಾನಕ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳಿದ ಮಾಹಿತಿಯು ಮುಂದಿನಂತಿದೆ.

1. ಪಾಕಿಸ್ತಾನದಲ್ಲಿನ ಮತಾಂಧರಿಗೆ ದೇವಸ್ಥಾನ ಮತ್ತು ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡಲು ಯಾವುದೇ ನೆಪ ಸಾಕಿರುತ್ತದೆ. ಹಿಂದೂ ಧರ್ಮ ಮತ್ತು ಹಿಂದೂಗಳ ವಂಶನಾಶ ಮಾಡುವುದು ಇಲ್ಲಿನ ಸಂಖ್ಯಾತರ ಏಕೈಕ ಕಾರ್ಯಕ್ರಮವಾಗಿರುತ್ತದೆ. ಆದುದರಿಂದ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

2. ಪಾಕಿಸ್ತಾನದಲ್ಲಿನ ದೇವಸ್ಥಾನಗಳ ಮೇಲೆ ಆಕ್ರಮಣವಾದಾಗ ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಲಾಗುತ್ತದೆ. ಅನಂತರ ಪುನಃ ಮೂರ್ತಿಯನ್ನು ಸ್ಥಾಪಿಸಲಾಗುವುದಿಲ್ಲ. ದೇವಸ್ಥಾನದಲ್ಲಿ ಕೇವಲ ಹಿಂದೂ ದೇವತೆಗಳ ಚಿತ್ರಗಳನ್ನು ಹಚ್ಚಿ ಹಿಂದೂಗಳ ಬಾಯಿ ಮುಚ್ಚಿಸಲಾಗುತ್ತದೆ. ಇದು ಓರ್ವ ಮಹಿಳೆಯ ಬಲಾತ್ಕಾರದ ನಂತರ ಆಕೆಗೆ ಉತ್ತಮ ಬಟ್ಟೆಗಳನ್ನು ಹಾಕಿ ಅಲ್ಲಿನ ಭೂಮಿಯನ್ನು ಸ್ವಚ್ಛಗೊಳಿಸಿದಂತೆ ಆಗಿದೆ.

3. ಭೊಂಗ ನಗರದಲ್ಲಿ ನಡೆದ ಹಿಂಸೆಯಿಂದಾಗಿ ಅಲ್ಲಿನ 150 ಹಿಂದೂ ಕುಟುಂಬಗಳು ಪಲಾಯನ ಮಾಡಿದ್ದವು. ಅವುಗಳಲ್ಲಿನ ಕೆಲವೇ ಕುಟುಂಬಗಳು ಹಿಂತಿರುಗಿ ಬಂದಿವೆ. ಅನೇಕ ಕುಟುಂಬಗಳು ಇಂದಿಗೂ ಭಯದಿಂದ ಹಿಂತಿರುಗಲಿಲ್ಲ.

4. ಪಾಕಿಸ್ತಾನದಲ್ಲಿನ ವ್ಯಕ್ತಿಯು ಎಷ್ಟು ಕಲಿತಿರುತ್ತಾನೆಯೋ ಅಷ್ಟೇ ಕಟ್ಟರನಾಗಿರುತ್ತಾನೆ. ನಾನು ಸ್ವತಃ ನ್ಯಾಯವಾದಿಯಾಗಿರುವುದರಿಂದ ನ್ಯಾಯಾಲಯದಲ್ಲಿನ ಲಿಪಿಕನಿಗಿಂತಲೂ ನ್ಯಾಯಾಧೀಶರು ಹೆಚ್ಚು ಕಟ್ಟರರಾಗಿರುತ್ತಾರೆ ಮತ್ತು ಧರ್ಮದ ಆಧಾರದಲ್ಲಿಯೇ ವಿಚಾರ ಮಾಡುತ್ತಾರೆ ಎಂಬುದನ್ನು ಹೇಳಬಹುದು. 2009 ರಿಂದ ನಾನು ಇದನ್ನೇ ಅನುಭವಿಸುತ್ತ ಬಂದಿದ್ದೇನೆ.