ನಾವು ಸಾಂಸ್ಕೃತಿಕ, ಆರ್ಥಿಕ ಹಾಗೂ ವ್ಯಾವಹಾರಿಕ ಮಟ್ಟದಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ! – ತಾಲಿಬಾನ್

ಭಾರತವು ಭಯೋತ್ಪಾದಕರೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಭಾರತವು ತಾಲಿಬಾನಿಗೆ ನಿಷ್ಠುರವಾಗಿ ಹೇಳಬೇಕು ! – ಸಂಪಾದಕರು 

ತಾಲಿಬಾನ್‍ನ ಮುಖಂಡ ಶೇರ ಮಹಂಮದ್ ಅಬ್ಬಾಸ ಸ್‍ಟಾನೆಕಾಝಾ

ಕಾಬುಲ್ (ಅಫಘಾನಿಸ್ತಾನ) – ಭಾರತೀಯ ಉಪಖಂಡಕ್ಕಾಗಿ ಭಾರತವು ಒಂದು ಅತ್ಯಂತ ಮಹತ್ವವಾದ ದೇಶವಾಗಿದೆ. ನಮಗೆ ಮೊದಲಿದ್ದಂತೆ ಭಾರತದೊಂದಿಗೆ ನಮ್ಮ ಸಾಂಸ್ಕೃತಿಕ, ಆರ್ಥಿಕ ಹಾಗೂ ವ್ಯಾವಹಾರಿಕ ಸಂಬಂಧಗಳನ್ನು ಮುಂದುವರಿಸಲಿಕ್ಕಿದೆ. ನಾವು ಭಾರತದೊಂದಿಗಿನ ನಮ್ಮ ರಾಜಕೀಯ, ಆರ್ಥಿಕ ಹಾಗೂ ವ್ಯಾವಹಾರಿಕ ಸಂಬಂಧಗಳಿಗೆ ಯೋಗ್ಯ ಮಹತ್ವ ನೀಡುತ್ತೇವೆ ಹಾಗೂ ಈ ಸಂಬಂಧವು ಶಾಶ್ವತವಾಗಿ ಮುಂದುವರೆಯಲಿ ಎಂಬುದು ನಮ್ಮ ಇಚ್ಛೆಯಾಗಿದೆ. ನಾವು ಈ ಸಂದರ್ಭದಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ, ಎಂಬ ಹೇಳಿಕೆಯು ಮೊದಲ ಬಾರಿಗೆ ತಾಲಿಬಾನಿನಿಂದ ಬಂದಿದೆ. ತಾಲಿಬಾನ್‍ನ ಮುಖಂಡ ಶೇರ ಮಹಂಮದ್ ಅಬ್ಬಾಸ ಸ್‍ಟಾನೆಕಾಝಾಈ ಇವನು ಹೇಳಿಕೆ ನೀಡಿದ್ದನು. ಅಫಘಾನ್ ಸೈನ್ಯದ ‘ಕ್ಯಾಡೆಟ್‍ಸ್’ಗೋಸ್ಕರ (ಸೈನಿಕರಿಗೋಸ್ಕರ) ತರಬೇತಿಯ ಭಾಗವೆಂದು 1980 ರ ದಶಕದಲ್ಲಿ ಸ್‍ಟಾನೆಕಝಾಈ ಡೆಹರಾಡೂನ್‍ನ ‘ಇಂಡಿಯನ್ ಮಿಲಿಟರಿ ಅಕಾಡಮಿ’ ಗೆ ಬಂದಿದ್ದನು. ವರ್ಷ 1996 ರಲ್ಲಿ ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅವನು ಉಸ್ತುವಾರಿ ಉಪ ವಿದೇಶಾಂಗ ಮಂತ್ರಿಯಾಗಿದ್ದನು.

ಭಾರತ ಹಾಗೂ ಪಾಕಿಸ್ತಾನದ ಗಡಿವಿವಾದದಲ್ಲಿ ನಾವು ತಲೆಹಾಕುವುದಿಲ್ಲ !

ಭಾರತ ಹಾಗೂ ಪಾಕಿಸ್ತಾನದ ನಡುವೆ ಕಳೆದ ಅನೇಕ ವರ್ಷಗಳಿಂದ ಗಡಿವಿವಾದವಿದೆ. ಅದು ಅವರ ಆಂತರಿಕ ಸಮಸ್ಯೆಯಾಗಿದೆ. ಅವರವರ ವಾದದಲ್ಲಿ ಅಫಘಾನಿಸ್ತಾನವು ಮಧ್ಯೆ ಬರುವುದಿಲ್ಲ, ಎಂದು ಕೂಡ ಸ್‍ಟಾನೆಕಝಾಈಯವರು ಸ್ಪಷ್ಟಪಡಿಸಿದ್ದಾರೆ. ‘ಅವರು ತಮ್ಮ ಆಂತರಿಕ ಹೋರಾಟದಲ್ಲಿ ಅಫಘಾನಿಸ್ತಾನವನ್ನು ಬಳಸಿಕೊಳ್ಳುವುದಿಲ್ಲ. ಅವರು ತಮ್ಮ ಗಡಿಯಲ್ಲಿ ಹೋರಾಡಬಹುದು. ನಾವು ಯಾವುದೇ ದೇಶಕ್ಕೆ ನಮ್ಮ ಭೂಮಿಯನ್ನು ಬಳಸಲು ಬಿಡುವುದಿಲ್ಲ’, ಎಂದು ಸ್‍ಟಾನೆಕಝಾಈಯು ಸ್ಪಷ್ಟ ಪಡಿಸಿದ್ದಾನೆ.