ಕೊರೊನಾದಿಂದ ಗುಣಮುಖರಾದರೂ ಒಂದು ವರ್ಷದ ತನಕ ಉಳಿಯುತ್ತವೆ ರೋಗಲಕ್ಷಣಗಳು ! – ಸಂಶೋಧಕರ ಸಂಶೋಧನೆ

(ಸಾಂಕೇತಿಕ ಛಾಯಾಚಿತ್ರ)

ಬೀಜಿಂಗ್ (ಚೀನಾ) – ಕೊರೊನಾದ ಸೋಂಕು ಆದನಂತರ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗಳ ಪೈಕಿ ಶೇ. 49 ರೋಗಿಗಳಿಗೆ ವರ್ಷ ಕಳೆದರೂ ಕೊರೊನಾದ ಲಕ್ಷಣಗಳು ತೊಂದರೆ ಕೊಡುತ್ತಿವೆ, ಎಂಬ ನಿಷ್ಕರ್ಷವು ಬೆಳಕಿಗೆ ಬಂದಿದೆ. ‘ಲ್ಯಾನ್ ಸೆಟ್’ ಎಂಬ ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯಲ್ಲಿ ಇದನ್ನು ನೀಡಲಾಗಿದೆ.

ಚೀನಾದ ವುಹಾನ್ ನಗರದಲ್ಲಿ 1,276 ರೋಗಿಗಳ ಅಧ್ಯಯನ ಮಾಡಿದ ನಂತರ ಕೊರೊನಾದ ಮೂರು ರೋಗಿಗಳಲ್ಲಿ ಒಬ್ಬರಿಗೆ ಕೊರೊನಾ ಆಗಿ ಹೋದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಉಸಿರಾಟದ ತೊಂದರೆಯಾಗುತ್ತಿರುವುದು ಮತ್ತು ಕೆಲವು ರೋಗಿಗಳಿಗೆ ನಿರಂತರ ಪುಪ್ಪುಸದ ತೊಂದರೆಗಳಿವೆ ಎಂದು ಕಂಡುಬಂದಿದೆ. ಕೊರೊನಾದಿಂದ ಬದುಕುಳಿದವರ ಆರೋಗ್ಯವು ಕೊರೊನಾ ಆಗದಿರುವ ಇತರ ಸಾಮಾನ್ಯ ರೋಗಿಗಳ ತುಲನೆಯಲ್ಲಿ ಹಾಳಿದೆ ಎಂದು ಅಧ್ಯಯನವು ಒತ್ತಿಹೇಳಿದೆ.