‘ತಹರಿಕ-ಎ-ತಾಲಿಬಾನ್ ಪಾಕಿಸ್ತಾನ’ ಇವರು ನಮ್ಮ ಮಾತನ್ನು ಕೇಳಲೇಬೇಕು ! – ತಾಲಿಬಾನ್ ಎಚ್ಚರಿಕೆ

ತಾಲಿಬಾನ್ ಈ ರೀತಿಯ ಎಚ್ಚರಿಕೆ ನೀಡುವುದರ ಅರ್ಥ ತಾಲಿಬಾನ ಪಾಕ್‌ಗೆ ಸಹಾಯ ಮಾಡುತ್ತಿದೆ ಮತ್ತು ‘ತಹರೀಕ-ಎ-ತಾಲಿಬಾನ ಪಾಕಿಸ್ತಾನ’ವು ಪಾಕ್‌ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದೇ ಆಗಿದೆ !

ಕಾಬುಲ್(ಅಫ್ಘಾನಿಸ್ತಾನ) – ‘ತಹರೀಕ-ಎ-ತಾಲಿಬಾನ ಪಾಕಿಸ್ತಾನ’ವು (ಪಾಕ್‌ನಲ್ಲಿಯ ಭಯೋತ್ಪಾದಕ ಸಂಘಟನೆ) ನಮ್ಮನ್ನು (ಅಫ್ಘಾನಿಸ್ತಾನದಲ್ಲಿನ ತಾಲಿಬಾನ್‌ಗೆ) ತಮ್ಮ ನಾಯಕನೆಂದು ಪರಿಗಣಿಸುತ್ತಿದ್ದಲ್ಲಿ ನಮ್ಮ ಮಾತನ್ನು ಕೇಳಬೇಕು; ಅದು ಯೋಗ್ಯ ಇರಲಿ ಅಥವಾ ಇಲ್ಲದಿರಲಿ, ಎಂದು ತಾಲಿಬಾನದ ವಕ್ತಾರ ಜಬಿವುಲ್ಲಾಹ ಮುಜಾಹಿದ ಈತನು ‘ತಹರಿಕ-ಎ-ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಗೆ ಎಚ್ಚರಿಕೆಯನ್ನು ನೀಡಿದ್ದಾನೆ. ‘ಜಿಯೋ ನ್ಯೂಸ್’ ಈ ವಾರ್ತಾವಾಹಿನಿಗೆ ಸಂದರ್ಶನ ನೀಡುವಾಗ ಈತನು ಈ ಎಚ್ಚರಿಕೆಯನ್ನು ಕೊಟ್ಟಿದ್ದಾನೆ. ಜಬಿವುಲ್ಲಾಹ ಮುಜಾಹಿದ ಅವನು, ಅಫ್ಘಾನಿಸಾನವಲ್ಲ ಪಾಕಿಸ್ತಾನವೇ ‘ತಹರಿಕ-ಎ-ತಾಲಿಬಾನ್’ ಈ ಸಂಘಟನೆಯ ಜೊತೆಗೆ ಹೋರಾಡಬೇಕಾಗಿದೆ, ಇದು ಪಾಕ್ ಮತ್ತು ಅಲ್ಲಿಯ ಉಲೇಮಾ ಗಳ ಮೇಲೆ ಅವಲಂಬಿಸಿದೆ, ತಾಲಿಬಾನಿಗಳ ಮೇಲಲ್ಲ ಎಂದು ಹೇಳಿದ್ದಾನೆ.