ಅಫಘಾನಿಸ್ತಾನದಲ್ಲಿನ ನಿರಾಶ್ರಿತ ಉಘೂರ ಮುಸಲ್ಮಾನರು ಭಯದ ಛಾಯೆಯಲ್ಲಿ !

ಚೀನಾದ ಒತ್ತಡದಿಂದ ತಾಲಿಬಾನ್‍ನ ಉಗ್ರಗಾಮಿಗಳು ಉಘೂರ ಮುಸಲ್ಮಾನರನ್ನು ಚೀನಾಗೆ ಒಪ್ಪಿಸುವ ಸಾಧ್ಯತೆ

ತಾಲಿಬಾನಿನ ಹುಸಿ ಮುಸಲ್ಮಾನಪ್ರೇಮ ! ತಾನಿಬಾನಿಗಳು ಕಾಶ್ಮೀರಿ ಅಥವಾ ಪ್ಯಾಲಸ್ಟೀನ್‍ನ ಮುಸಲ್ಮಾನರ ಕಥಿತ ಮಾನವಾಧಿಕಾರಗಳ ವಿಷಯದಲ್ಲಿ ಮಾತನಾಡುತ್ತಾರೆ; ಆದರೆ ಚೀನಾದ ಭಯದಿಂದ ಅಲ್ಲಿನ ಉಘೂರ ಮುಸಲ್ಮಾನರ ಮೇಲಾಗುವ ಅತ್ಯಾಚಾರಗಳ ಬಗ್ಗೆ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು 

ನವ ದೆಹಲಿ – ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಚೀನಾದ ಹೇಳಿಕೆಯ ಮೇರೆಗೆ ತಾಲಿಬಾನಿ ಭಯೋತ್ಪಾದಕರು ಆ ಉಘೂರ ಮುಸಲ್ಮಾನರನ್ನು ಮತ್ತೊಮ್ಮೆ ಶಿನಜಿಯಾಂಗ ಪ್ರಾಂತ್ಯಕ್ಕೆ ಕಳುಹಿಸಲಾಗುವುದು ಎಂಬ ಭಯ ವ್ಯಕ್ತ ಪಡಿಸಲಾಗುತ್ತಿದೆ. ಹಾಗೆ ಮಾಡಿದರೆ, `ಚೀನಾ ಈ ಉಘೂರ ಮುಸಲ್ಮಾನರನ್ನು ಶಿಬಿರದಲ್ಲಿಟ್ಟು ಅವರ ಮೇಲೆ ಅತ್ಯಾಚಾರ ನಡೆಸುವುದು’, ಎಂಬ ಭಯ ವ್ಯಕ್ತ ಪಡಿಸಲಾಗುತ್ತದೆ. ಈಗ ಅಫಘಾನಿಸ್ತಾನದಲ್ಲಿ ಒಟ್ಟು 2 ಸಾವಿರ ಉಘೂರ ಮುಸಲ್ಮಾನರಿದ್ದಾರೆ.

ಅಫಘಾನಿಸ್ತಾನದಲ್ಲಿ ಹಲವಾರು ವರ್ಷಗಳಿಂದ ವಾಸಿಸುವ ಉಘೂರ ಮುಸಲ್ಮಾನರಿಗೆ ನಾಗರಿಕತ್ವ ದೊರೆಕಿದೆ; ಆದರೆ ಸರಕಾರಿ ಕಾಗದಪತ್ರಗಳಲ್ಲಿ ಅವರು ‘ಚೀನಾದಿಂದ ವಲಸೆ ಬಂದಿರುವರು’ ಎಂದು ಹೇಳಲಾಗಿದೆ. ಆದ್ದರಿಂದ ಅವರ ಪರಿಚಯ ಬಹಿರಂಗವಾಗಬಹುದು. ತಾಲಿಬಾನ್‍ನಿಂದ ಮ್ಯಾನಮಾರ ಹಾಗೂ ಪ್ಯಾಲೆಸ್ಟಾನ್‍ನ ಪೀಡಿತ ಮುಸಲ್ಮಾನರ ವಿಷಯದ ಅಂಶಗಳನ್ನು ಪ್ರಸ್ತುತ ಪಡಿಸಲಾಗುತ್ತದೆ; ಆದರೆ ಉಘೂರ ಮುಸಲ್ಮಾನರ ಮೇಲೆ ಚೀನಾ ಮಾಡುವ ಅತ್ಯಾಚಾರಗಳ ಬಗ್ಗೆ ಮೌನವಹಿಸಲಾಗುತ್ತಿದೆ. ಆದ್ದರಿಂದ ತಾಲಿಬಾನ್ ಹುಸಿ ಆರೋಪ ಹೇರಿ ಉಘೂರ ಮುಸಲ್ಮಾನರನ್ನು ಚೀನಾಗೆ ಒಪ್ಪಿಸುವ ಸಾಧ್ಯತೆಯಿದೆ.