ಆರೋಗ್ಯ ಸಚಿವಾಲಯದ ಮಹಿಳಾ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಬೇಕು ! – ತಾಲಿಬಾನ್ ಮನವಿ

ದೇಶದಲ್ಲಿ ಶರಿಯತನ್ನು ಜಾರಿಗೊಳಿಸುತ್ತಿರುವ ತಾಲಿಬಾನಿಗಳಿಗೆ ಈಗ ಆರೋಗ್ಯ ವ್ಯವಸ್ಥೆಯು ಕುಸಿದಿರುವಾಗ ಮಹಿಳೆಯರ ಅವಶ್ಯಕತೆಯ ಅರಿವಾಗುತ್ತಿದೆ ಎಂಬುದನ್ನು ಗಮನಿಸಿ ! – ಸಂಪಾದಕರು 


ಕಾಬುಲ್ (ಅಫ್ಘಾನಿಸ್ತಾನ) – ಅಫಫಾನಿಸ್ತಾನದ ಸಾರ್ವಜನಿಕ ಆರೋಗ್ಯ ಸಚಿವಾಲಯದ ಎಲ್ಲಾ ಮಹಿಳಾ ಸಿಬ್ಬಂದಿಗಳು ಮತ್ತೊಮ್ಮೆ ಕೆಲಸಕ್ಕೆ ಮರಳಬಹುದು. ಮಹಿಳೆಯರು ನೌಕರಿ ಮಾಡುವ ಬಗ್ಗೆ ತಾಲಿಬಾನ್ ಸರಕಾರಕ್ಕೆ ಯಾವುದೇ ಆಕ್ಷೇಪವಿಲ್ಲ, ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಟ್ವೀಟ್ ಮಾಡಿದ್ದಾರೆ. ಬ್ಯಾಂಕುಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಮನೆಗೆ ಕಳಿಸಿ ಕೆಲಸಕ್ಕೆ ಮರಳದಂತೆ ತಾಲಿಬಾನ್ ಆದೇಶಿಸಿತ್ತು ಎಂದು ಈ ಮೊದಲು ವರದಿಯಾಗಿತ್ತು. ಮಹಿಳೆಯರು ತಮ್ಮ ನೌಕರಿಗಳನ್ನು ಮನೆಯಲ್ಲಿನ ಪುರುಷರಿಗೆ ನೀಡಬೇಕು ಎಂದು ಹೇಳಲಾಗಿತ್ತು.