ಕೀವನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಗೆ ಗಾಯ ! – ಕೇಂದ್ರೀಯ ಸಚಿವ ವಿ.ಕೆ. ಸಿಂಹ

ಕೀವ (ಉಕ್ರೇನ್) – ರಷ್ಯಾ ಮತ್ತು ಉಕ್ರೇನ್ ಇವರಲ್ಲಿನ ನಡೆಯುತ್ತಿರುವ ಯುದ್ಧದಲ್ಲಿ ಕೀವನಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗಲಿ ಗಾಯಗೊಂಡಿದ್ದಾನೆ, ಎಂದು ಕೇಂದ್ರ ಸಚಿವ ವಿ.ಕೆ. ಸಿಂಹ ಅವರು ಮಾಹಿತಿ ನೀಡಿದರು. ಈ ಮೊದಲು ಯುದ್ಧದಲ್ಲಿ ಗುಂಡಿನ ದಾಳಿಯಿಂದ ನವೀನ ಶೇಖರಪ್ಪ ಇವರು ಸಾವನ್ನಪ್ಪಿದ್ದು ಬೇರೆ ಒಬ್ಬ ವಿದ್ಯಾರ್ಥಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ.

ವಿ.ಕೆ ಸಿಂಹ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ವಿದ್ಯಾರ್ಥಿ ಕೀವದಿಂದ ಓಡಿ ಹೋಗುವ ಪ್ರಯತ್ನ ಮಾಡುತ್ತಿರುವಾಗ ಅವನ ಮೇಲೆ ಗುಂಡು ಹಾರಿಸಲಾಯಿತು. ಅದರ ನಂತರ ಅವನನ್ನು ಮತ್ತೆ ನಗರಕ್ಕೆ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಿದರು.