ಉಕ್ರೇನ್‌ನಿಂದ ೧೭ ಸಾವಿರ ಭಾರತೀಯರ ನಿರ್ಗಮನ !

ಕ್ರೀವ್ (ಉಕ್ರೇನ್) – ಉಕ್ರೇನ್‌ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಪೈಕಿ ೧೭ ಸಾವಿರ ಭಾರತೀಯರು ಉಕ್ರೇನ್ ನಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಭಾರತೀಯ ವಾಯು ಸೇನೆಯ ೪ ವಿಮಾನಗಳು ಸುಮಾರು ೪೦೦ ಭಾರತೀಯ ನಾಗರಿಕರನ್ನು ತೆಗೆದುಕೊಂಡು ಉಕ್ರೇನ್‌ನಿಂದ ಹಾರಾಟ ಮಾಡಿವೆ. ಈ ವಿಮಾನಗಳು ಮಾರ್ಚ್ ೩, ರ ಮಧ್ಯರಾತ್ರ್ರಿ ೨ ಗಂಟೆಗೆ ಸುಮಾರು ಗಾಝಿಯಾಬಾದದಲ್ಲಿನ ಹಿಂಡನ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿವೆ.

ಖಾರಕಿವ್ ಬಿಡಿ, ವಾಹನ ಸಿಗದಿದ್ದರೆ ಕಾಲ್ನಡಿಗೆಯಲ್ಲಿ ಹೋಗಿ ! – ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಭಾರತೀಯರಿಗೆ ಆದೇಶ

ಉಕ್ರೇನ್‌ನಲ್ಲಿರುವ ಭಾರತೀಯ ರಾವಭಾರಿ ಕಚೇರಿಗಾಗಿ, ಅಲ್ಲಿನ ಭಾರತೀಯರಿಗೆ ‘ಖಾರಕಿವ್ ಬಿಡಿ. ವಾಹನ ಸಿಗದಿದ್ದರೆ ಕಾಲ್ನಡಿಗೆಯಲ್ಲಿ ಹೋಗಿ’, ಎಂಬ ಆದೇಶ ನೀಡಿದೆ. ರಾಯಭಾರಿ ಕಚೇರಿಯಿಂದ ಒಂದು ಗಂಟೆಯಲ್ಲಿ ಎರಡು ಸಲ ಆದೇಶ ನೀಡಲಾಯಿತು.