ಕುಲಭೂಷಣ್ ಜಾಧವ್ ಪರವಾಗಿ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಅವಕಾಶ ನೀಡಬೇಕು ! – ಪಾಕಿಸ್ತಾನ ಸರಕಾರಕ್ಕೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯದಿಂದ ಆದೇಶ

ಇಸ್ಲಾಮಾಬಾದ (ಪಾಕಿಸ್ತಾನ) – ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಂತೆ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಏಪ್ರಿಲ್ ೧೩, ೨೦೨೨ ರೊಳಗೆ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯ ಪಾಕಿಸ್ತಾನ ಸರಕಾರಕ್ಕೆ ಆದೇಶ ನೀಡಿದೆ. ಇದರಿಂದ ಪಾಕಿಸ್ತಾನಿ ಸೈನ್ಯ ನ್ಯಾಯಾಲಯವು ಕುಲಭೂಷಣ್ ಜಾಧವ್ ಇವರಿಗೆ ನ್ಯಾಯಾಲಯದ ಮುಂದೆ ‘ಪಾಕಿಸ್ತಾನದಿಂದ ಅಪರಾಧಿ ಎಂದು ನಿರ್ಧರಿಸುವ ಮತ್ತು ಶಿಕ್ಷೆಯ ಆಲಿಕೆಯ ವಿರುದ್ಧ ಹೇಳಿಕೆಯನ್ನು ಸಲ್ಲಿಸಲು ಸಾಧ್ಯವಾಗುತ್ತಲಿದೆ. ೫೧ ವರ್ಷದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮೇಲೆ ಗೂಢಾಚಾರ ಮತ್ತು ಭಯೋತ್ಪಾದನೆಯ ಆರೋಪವಿದೆ ಎಂದು ಹೇಳುತ್ತಾ ಎಪ್ರಿಲ್ ೨೦೧೭ ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

ಇದಾದ ನಂತರ, ಜಾಧವ್‌ಗೆ ‘ಕ್ಯಾನ್ಸುಲರ್ ಎಕ್ಸೆಸ್’ವನ್ನು (ಕಾನೂನುಬದ್ಧ ನೆರವು) ನೀಡದೇ ಇದ್ದರಿಂದ ಭಾರತವು ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಜುಲೈ ೨೦೧೯ ರಲ್ಲಿ ನ್ಯಾಯಾಲಯವು ತೀರ್ಪು ನೀಡುತ್ತಾ, ಜಾಧವ್ ಅವರಿಗೆ ಭಾರತದಿಂದ ‘ಕಾನೂನು ನೆರವು ನೀಡಬೇಕು’, ಎಂದು ಆದೇಶ ನೀಡಿತು. ಜೊತೆಗೆ ಜಾಧವ್ ಅವರ ಶಿಕ್ಷೆಯನ್ನು ಮರು ಪರುಷೀಲಿಸುವಂತೆ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯವು ಆದೇಶ ನೀಡಿತ್ತು.