ಭಾರತದಲ್ಲಿ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚದ ಕಾರಣದಿಂದಾಗಿ, ಬುದ್ಧಿವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ ! – ರಷ್ಯಾದ ದಾಳಿಯಲ್ಲಿ ಸಾವನ್ನಪ್ಪಿದ ನವೀನ್ ನ ತಂದೆ

ಯುಕ್ರೇನನಲ್ಲಿ ಅಕ್ರಮಣದಲ್ಲಿ ಹತನಾದ ವಿದ್ಯಾರ್ಥಿ ನವೀನ ಶೇಖರಪ್ಪಾನ ತಂದೆಯವರ ಆರೋಪ

ಸ್ವಾತಂತ್ರ್ಯದ ನಂತರ ಈವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ಲಜ್ಜಾಸ್ಪದವಾಗಿದೆ ! ಈ ಪರಿಸ್ಥಿತಿ ಹಿಂದೂ ರಾಷ್ಟ್ರದಲ್ಲಿ ಬದಲಾಗಿಸಲಾಗುವುದು !

ಹಾವೇರಿ (ಕರ್ನಾಟಕ) – ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ವೈದ್ಯರಾಗಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಿದ್ದಾರೆ, ಈ ರೀತಿಯ ಆರೋಪವನ್ನು ಯುಕ್ರೇನ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ನವೀನ ಶೇಖರಪ್ಪಾನ ತಂದೆ ಶೇಖರಪ್ಪಾ ಜ್ಞಾನಗೌಡಾ ಇವರು ಮಾಡಿದ್ದಾರೆ.

ಶೇಖರಪ್ಪಾ ಜ್ಞಾನಗೌಡಾ ಮಾತನ್ನು ಮುಂದುವರೆಸುತ್ತಾ, ಖಾಸಗಿ ಮಹಾವಿದ್ಯಾಲಯಗಳಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸೀಟ ಪಡೆಯಲು ಕೋಟಿಗಟ್ಟಲೆ ರೂಪಾಯಿಗಳು ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ವೈದೈಕೀಯ ಶಿಕ್ಷಣ ಪಡೆಯುವುದು ಕಠಿಣವಾಗಿದೆ. ರಾಜಕೀಯ ಪ್ರಣಾಳಿ, ಶಿಕ್ಷಣ ವ್ಯವಸ್ಥೆ ಮತ್ತು ಜಾತಿವಾದ ಇವುಗಳಿಂದಾಗಿ ದುಃಖಿತನಾಗಿದ್ದೇನೆ; ಕಾರಣ ಎಲ್ಲವು ಖಾಸಗಿ ಸಂಸ್ಥೆಗಳ ನಿಯಂತ್ರಣದಲ್ಲಿದೆ. ನನ್ನ ಮಗ ೧೦ ನೇ ತರಗತಿಯಲ್ಲಿ ಶೇ. ೯೬ ಮತ್ತು ೧೨ ನೇ ತರಗತಿಯಲ್ಲಿ ಶೇ. ೯೭ ಅಂಕಗಳು ಪಡೆದಿದ್ದ. ಆದ್ದರಿಂದ ಅವನು ವೈದ್ಯನಾಗುವ ಕನಸನ್ನು ಕಂಡಿದ್ದನು. ಶಿಕ್ಷಣ ವ್ಯವಸ್ಥೆ ಮತ್ತು ಜಾತಿವಾದದಿಂದಾಗಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಸೀಟ ಸಿಗಲಿಲ್ಲ. ವಾಸ್ತವದಲ್ಲಿ ಅವನು ಬುದ್ಧಿವಂತ ವಿದ್ಯಾರ್ಥಿಯಾಗಿದ್ದನು. ಮಹಾವಿದ್ಯಾಲಯಗಳಲ್ಲಿ ವೈದ್ಯಕೀಯ ಸೀಟ ಪಡೆಯಲು ೧-೨ ಕೋಟಿ ರೂಪಾಯಿ ಲಂಚ ನೀಡಬೇಕಾಗುತ್ತದೆ. (ಎಲ್ಲಾ ಸರಕಾರಗಳಿಗೆ ಇದಕ್ಕಿಂತ ದೊಡ್ಡ ನಾಚಿಕೆಗೆಡುತನಕ್ಕಿಂತ ಇನ್ನೇನಿದೆ ? ಸರಕಾರ ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ ? – ಸಂಪಾದಕ) ಯುಕ್ರೇನನಲ್ಲಿ ಕೆಲವು ಲಕ್ಷ ರೂಪಾಯಿಗಳಲ್ಲಿ ವೈದ್ಯಕೀಯ ಶಿಕ್ಷಣ ಸಿಗುತ್ತಿದ್ದರೆ ಭಾರತದಲ್ಲಿ ಕೋಟಿಗಟ್ಟಲೆ ಖರ್ಚು ಏಕೆ ಮಾಡಬೇಕು? ಯುಕ್ರೆನ್‌ನಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಹಾಗೂ ಭಾರತದ ತುಲನೆಯಲ್ಲಿ ಅಲ್ಲಿಯ ಸಲಕರಣೆಗಳೂ ಉತ್ತಮವಾಗಿವೆ ಎಂದು ಹೇಳಿದರು.

ಖಾರಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸಿಲ್ಲ ! – ಶೇಖರಪ್ಪಾ ಜ್ಞಾನಗೌಡಾವರ ಹೇಳಿಕೆ

ಭಾರತೀಯ ರಾಯಭಾರಿ ಕಚೇರಿಯ ಯಾವುದೇ ವ್ಯಕ್ತಿಯು ಖಾರಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿಲ್ಲವೆಂದು ಶೇಖರಪ್ಪಾ ಜ್ಞಾನಗೌಡಾವರು ಹೇಳಿದ್ದಾರೆ. ಸಾವಿರಾರೂ ಭಾರತೀಯ ವಿದ್ಯಾರ್ಥಿಗಳು ಖಾರಕಿವ್‌ನಲ್ಲಿ ಸಿಲುಕಿ ಕೊಂಡಿದ್ದಾರೆ ಮತ್ತು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.