ರಷ್ಯಾ ಭಾರತೀಯ ವಿದ್ಯಾರ್ಥಿಗಳಿಗೆ ಖಾರಕೀವದಿಂದ ಸುರಕ್ಷಿತವಾಗಿ ಹೊರಬರಲು ೬ ಗಂಟೆ ದಾಳಿ ನಿಲ್ಲಿಸಿದ್ದರು !

ಭಾರತದ ವಿನಂತಿಯ ಪರಿಣಾಮ !

ಖಾರಕೀವ (ಯುಕ್ರೇನ್) – ಇಲ್ಲಿ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯುತ್ತಿರುವಾಗ ಇಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆ ಯುದ್ಧವನ್ನು ನಿಲ್ಲಿಸಿತ್ತು. ಮಾರ್ಚ್ ೨ರ ರಾತ್ರಿ ರಷ್ಯಾ ಇದಕ್ಕಾಗಿ ಯುದ್ಧ ನಿಲ್ಲಿಸಿತ್ತು. ಭಾರತವು ರಷ್ಯಾಗೆ ಮಾಡಿರುವ ವಿನಂತಿ ನಂತರ ರಷ್ಯಾದಿಂದ ಈ ಕೃತಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨ ರಾತ್ರಿ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರ ಜೊತೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತೆಗೆಯುವ ಬಗ್ಗೆ ದೂರವಾಣಿಯ ಮೂಲಕ ಚರ್ಚೆ ನಡೆಸಿದ ನಂತರ ರಷ್ಯಾದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.