ಭಾರತೀಯ ವಿದ್ಯಾರ್ಥಿಗಳನ್ನು ರಷ್ಯಾದ ಮೂಲಕ ಹೊರತರಲು ಸಹಾಯ ಮಾಡುವೆವು ! – ಭಾರತದಲ್ಲಿನ ರಷ್ಯಾದ ರಾಜದೂತರ ಆಶ್ವಾಸನೆ

ಭಾರತದಲ್ಲಿನ ರಷ್ಯಾದ ರಾಜದೂತರಾದ ಡೆನಿಸ ಅಲೀಪೊಹ್ವ

ಕೀವ (ಯುಕ್ರೇನ) – ಭಾರತದಲ್ಲಿನ ರಷ್ಯಾದ ರಾಜದೂತರಾದ ಡೆನಿಸ ಅಲೀಪೊಹ್ವರವರು ‘ಯುಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಿಂದೆ ಕರೆತರಲು ಭಾರತೀಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ರಷ್ಯಾದ ಕ್ಷೇತ್ರದಿಂದ ಈ ವಿದ್ಯಾರ್ಥಿಗಳನ್ನು ಹೊರತರುವ ಬಗ್ಗೆ ವಿಚಾರ ಮಾಡಲಾಗುತ್ತಿದೆ’ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ. ಯುಕ್ರೇನಿನ ಖಾರಕೀವ ನಗರವು ರಷ್ಯಾದ ಗಡಿಗೆ ಹತ್ತಿರದಲ್ಲಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಪೊಲೆಂಡ್‌ ಅಥವಾ ರುಮಾನಿಯಾಗಳ ಗಡಿಯಿಂದ ಹೊರಗೆ ಹೋಗಬೇಕಾದರೆ ೨೦ ಗಂಟೆ ಬೇಕಾಗಬಹುದು. ಇದರ ಬದಲು ಅವರು ರಷ್ಯಾದ ಗಡಿಯನ್ನು ಬೇಗನೇ ತಲುಪಬಹುದು.

ರಷ್ಯಾದ ೬ ಸಾವಿರ ಸೈನಿಕರು ಹತರಾದರು ! – ಯುಕ್ರೇನಿನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿ

‘ಕಳೆದ ೬ ದಿನಗಳಲ್ಲಿ ಯುಕ್ರೇನಿನ ಸೈನಿಕರು ರಷ್ಯಾದ ೬ ಸಾವಿರ ಸೈನಿಕರನ್ನು ಕೊಂದಿದ್ದಾರೆ’, ಎಂಬ ಮಾಹಿತಿಯನ್ನು ಯುಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲೋದೊಮಿರ ಝೆಲೆಂಸ್ಕಿಯವರು ನೀಡಿದ್ದಾರೆ. ರಷ್ಯಾವು ಖಾರಕೀವನಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ರಮಣವನ್ನು ಆರಂಭಿಸಿದೆ. ಅಲ್ಲಿ ಸತತವಾಗಿ ಸ್ಫೋಟಗಳಾಗುತ್ತಿವೆ. ಖಾರಕೀವನಲ್ಲಿ ೨೧ ಜನರ ಮೃತ್ಯುವಾಗಿದೆ ಹಾಗೂ ೧೧೨ ಜನರು ಗಾಯಗೊಂಡಿದ್ದಾರೆ.

ಯುಕ್ರೇನಿನಿಂದ ಹೊರಬರಲು ಪಾಕಿಸ್ತಾನ ಮತ್ತು ತುರ್ಕಸ್ತಾನ ದೇಶಗಳ ವಿದ್ಯಾರ್ಥಿಗಳು ಭಾರತೀಯ ರಾಷ್ಟ್ರಧ್ವಜವನ್ನು ಬಳಸುತ್ತಿದ್ದಾರೆ !

* ಇದರಿಂದ ಈ ದೇಶಗಳ ಭಾರತದ ತುಲನೆಯಲ್ಲಿ ವಿದೇಶದಲ್ಲಿರುವ ವರ್ಚಸ್ಸು ಕಂಡುಬರುತ್ತದೆ ! ಅಂತರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಭಾರತವಿರೋಧಿ ಭೂಮಿಕೆಯನ್ನು ಮಂಡಿಸುವ ಈ ೨ ದೇಶಗಳ ಆಡಳಿತಗಾರರಗಿಗೆ ಇದು ಕಪಾಳಮೋಕ್ಷವೇ ಆಗಿದೆ !- ಸಂಪಾದಕರು

ನವದೆಹಲಿ – ಯುಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ದೂತಾವಾಸವು ಈ ಹಿಂದೆಯೇ ಹತ್ತಿರದ ಪೊಲಂಡ, ಹಂಗೆರಿ ಮತ್ತು ರುಮಾನಿಯಾ ದೇಶಗಳ ಗಡಿ ಪ್ರದೇಶಕ್ಕೆ ಹೋಗಲು ಹೇಳಿತ್ತು. ಅಲ್ಲಿ ಹೋಗುವಾಗ ಭಾರತೀಯ ರಾಷ್ಟ್ರಧ್ವಜವನ್ನು ಹಾಕಲು ಆದೇಶಿಸಿತ್ತು. ಇದರಿಂದ ದಾರಿಯಲ್ಲಿ ರಷ್ಯಾ ಹಾಗೂ ಯುಕ್ರೇನಿನ ಸೈನಿಕರು ಅವರನ್ನು ತಡೆಯದಿರುವುದು ಕಂಡುಬಂದಿದೆ. ಇದರಿಂದಾಗಿಯೇ ಯುಕ್ರೇನಿನಲ್ಲಿ ಸಿಲುಕಿದ ಪಾಕಿಸ್ತಾನಿ ಮತ್ತು ತುರ್ಕಸ್ತಾನಿ ವಿದ್ಯಾರ್ಥಿಗಳು ಭಾರತೀಯ ರಾಷ್ಟ್ರಧ್ವಜವನ್ನು ಇದೇ ರೀತಿಯಲ್ಲಿ ಬಳಸುತ್ತಿರುವುದು ಕಂಡುಬಂದಿದೆ.

೧. ಭಾರತಕ್ಕೆ ಹಿಂತಿರುಗಿದ ಓರ್ವ ವಿದ್ಯಾರ್ಥಿಯು ‘ನಾವು ಮಾರುಕಟ್ಟೆಯಿಂದ ಬಣ್ಣದ ಸ್ಪ್ರೇ ಮತ್ತು ಬಿಳಿಯ ಪರದೆಗಳನ್ನು ತಂದೆವು. ಅವುಗಳಿಗೆ ಬಣ್ಣ ಹಚ್ಚಿ ಭಾರತೀಯ ರಾಷ್ಟ್ರಧ್ವಜವನ್ನು ತಯಾರಿಸಿದೆವು ಮತ್ತು ನಮ್ಮ ಬಸ್ಸಿನ ಮೇಲೆ ಹಚ್ಚಿ ಪ್ರವಾಸ ಮಾಡಿದೆವು. ಈಗ ಇದನ್ನೇ ಅಲ್ಲಿ ಸಿಲುಕಿರುವ ಪಾಕಿಸ್ತಾನಿ ಮತ್ತು ತುರ್ಕಸ್ತಾನಿ ವಿದ್ಯಾರ್ಥಿಗಳೂ ಮಾಡುತ್ತಿದ್ದಾರೆ’ ಎಂದು ಹೇಳಿದನು.

೨. ಇನ್ನೂ ಓರ್ವ ವಿದ್ಯಾರ್ಥಿಯು ‘ಯುಕ್ರೇನಿನ ಓದೆಸಾದಿಂದ ನಾವು ಬಸ್ಸಿನಿಂದ ಮಾಲ್ಡೋವಾದ ಗಡಿಗೆ ಹೋಗುತ್ತಿರುವಾಗ ದಾರಿಯಲ್ಲಿ ಸೈನಿಕರಿರುವುದು ಕಂಡುಬಂದಿತು. ಅವರು ನಮ್ಮ ಬಸ್ಸಿನ ಮೇಲಿರುವ ರಾಷ್ಟ್ರಧ್ವಜವನ್ನು ನೋಡಿದಾಗ ಗುಂಡಿನ ದಾಳಿಯನ್ನು ನಿಲ್ಲಿಸಿ, ನಮಗೆ ತಕ್ಷಣ ಹೊರಡಲು ಅನುವು ಮಾಡಿಕೊಟ್ಟರು’ ಎಂದು ಹೇಳಿದನು.