ಅಫ್ಘಾನಿಸ್ತಾನಕ್ಕೆ ಕೊಳೆತ ಗೋಧಿಯನ್ನು ಕಳುಹಿಸಿದ್ದಕ್ಕಾಗಿ ಪಾಕಿಸ್ತಾನ ವಿರುದ್ಧ ತಾಲಿಬಾನ್ ಅಸಮಧಾನ !

ನಾಗರಿಕರು ಭಾರತದ ಗೋದಿಯನ್ನು ನೋಡಿ ಹೊಗಳಿದರು

ಇದು ಇಸ್ಲಾಮಿಕ್ ದೇಶಗಳಿಗೂ ಮೋಸ ಮಾಡುತ್ತಿರುವ ಪಾಕಿಸ್ತಾನದ ಮನೋವೃತ್ತಿಯು ಕಂಡು ಬರುತ್ತದೆ !

ಕಾಬೂಲ್ (ಅಫ್ಘಾನಿಸ್ತಾನ) – ಭಾರತ ಮತ್ತು ಪಾಕಿಸ್ತಾನ ಕೂಡಾ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಿತ್ತು. ಪಾಕಿಸ್ತಾನವು ಕಳುಹಿಸಿದ ಗೋಧಿ ಅತ್ಯಂತ ಕಳಪೆ ಮಟ್ಟದ್ದು ಇದ್ದರಿಂದ ತಾಲಿಬಾನ್‌ವು ಪಾಕಿಸ್ತಾನದ ಈ ಕೃತ್ಯಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದು, ಭಾರತವನ್ನು ಹೊಗಳಿದೆ. ಅಫ್ಘಾನಿಸ್ತಾನದ ಪತ್ರಕರ್ತ ಅಬ್ದುಲ್ಲಾ ಒಮೆರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಾಲಿಬಾನ್ ನಾಯಕನೊಬ್ಬ ಪಾಕಿಸ್ತಾನ ಕಳುಹಿಸಿದ ಗೋಧಿ ತಿನ್ನಲು ಯೋಗ್ಯವಿಲ್ಲವೆಂದು ಹೇಳುತ್ತಿರುವುದು ಕಾಣಿಸುತ್ತದೆ. ಅದೆ ಸಮಯದಲ್ಲಿ ಅಫ್ಘಾನಿಸ್ತಾನದ ಜನರು ಉತ್ತಮ ಗೋದಿಗಾಗಿ ಭಾರತಕ್ಕೆ ಧನ್ಯವಾದ ಸಲ್ಲಿಸುತ್ತಿದ್ದಾರೆ.