ಭಾರತೀಯರನ್ನು ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮದ ವಾರ್ತೆಯ ಬಗ್ಗೆ ವಿದೇಶಾಂಗ ಸಚಿವಾಲಯವು ಖಂಡಿಸಿದೆ

ನವದೆಹಲಿ – ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ. ‘ಯುದ್ಧ ನಿಲ್ಲಿಸುವುದು’ ಹೇಳುವುದು ಎಂದರೆ ‘ನಮ್ಮ ಹೇಳಿಕೆಯ ಮೇರೆಗೆ ಮತ್ತೆ ಬಾಂಬ್ ದಾಳಿ ಆರಂಭವಾಗುವುದೇ ?’, ಎಂದು ಹೇಳಿದ ಹಾಗೆ ಇದೆ. ನಾನು ಈ ವಾರ್ತೆಯ ಮೇಲೆ ಟೀಕಿಸುವುದಿಲ್ಲ’, ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗಚಿ ಇವರು ಹೇಳಿದರು.

ಬಾಗಚಿ ತಮ್ಮ ಮಾತನ್ನು ಮುಂದುವರೆಸುತ್ತಾ, ಇಲ್ಲಿಯವರೆಗೆ ೨೮ ಸಾವಿರ ಭಾರತೀಯ ನಾಗರಿಕರು ಉಕ್ರೇನ್ ತೊರೆದಿದ್ದಾರೆ. ‘ಆಪರೇಷನ್ ಗಂಗಾ’ ಅಡಿಯಲ್ಲಿ ಈವರೆಗೆ ೩೦ ವಿಮಾನದಿಂದ ೬ ಸಾವಿರದ ೪೦೦ ಭಾರತೀಯರನ್ನು ಉಕ್ರೇನ್‌ನಿಂದ ಕರೆತರಲಾಗಿದೆ. ಮುಂದಿನ ೨೪ ಗಂಟೆಯಲ್ಲಿ ೧೮ ವಿಮಾನಗಳ ಹಾರಾಟದ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.