ಫೇಸ್‌ಬುಕ್‌ನ ಅನ್ಯಾಯದ ವರ್ತನೆಯ ಕುರಿತು ಹಿಂದೂ ಬಾಂಧವರಿಂದ ದೇಶದಾದ್ಯಂತ ಆಂದೋಲನದ ಮೂಲಕ ತೀವ್ರ ಖಂಡನೆ !

ಹಿಂದುತ್ವನಿಷ್ಠ ಸಂಘಟನೆ ಮತ್ತು ಗಣ್ಯರ ಫೇಸ್‌ಬುಕ್ ಪೇಜ್‌ಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲು ಆಗ್ರಹ

ಶ್ರೀ. ಮೋಹನ ಗೌಡ

ಬೆಂಗಳೂರು : ಕಳೆದ ಕೆಲವು ಕಾಲದಲ್ಲಿ ಫೇಸ್‌ಬುಕ್ ದೇಶದಾದ್ಯಂತದ ಹಿಂದುತ್ವನಿಷ್ಠ ಗಣ್ಯರ ಮತ್ತು ಸಂಘಟನೆಗಳ ಪುಟಗಳನ್ನು ಯಾವುದೇ ಕಾರಣವನ್ನು ನೀಡದೇ ನಿಲ್ಲಿಸಿದೆ. ಈ ಸ್ವೇಚ್ಛಾವರ್ತನೆ ಕಾರ್ಯಾಚರಣೆಯು ಆತಂಕಕಾರಿಯಾಗಿದ್ದು ಹಿಂದೂ ಬಾಂಧವರಲ್ಲಿ ಜನಾಕ್ರೋಶ ಉದ್ಭವಿಸಿದೆ. ಶನಿವಾರದಂದು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಆಕ್ರೋಶ ಕಂಡುಬಂದಿತು. ಹಿಂದುತ್ವನಿಷ್ಠ ಗಣ್ಯರು ಮತ್ತು ಸಂಘಟನೆಗಳ ಪುಟಗಳ ಮೇಲೆ ಹೇರಲಾದ ನಿಷೇಧವನ್ನು ತಕ್ಷಣ ತೆಗೆಯಬೇಕೆಂಬ, ಆಗ್ರಹದ ಬೇಡಿಕೆಯನ್ನು ಎಲ್ಲ ಸ್ತರಗಳಲ್ಲಿ ಮಾಡಲಾಯಿತು.

ಫೇಸ್‌ಬುಕ್ ಭಾರತದಲ್ಲಿನ ಹಿಂದುತ್ವವಾದಿ ಕಾರ್ಯಕರ್ತರು, ಸಂಘಟನೆಗಳು, ಮೀಡಿಯಾ, ಮುಖಂಡರು ಇವರ ಮೇಲೆ ಪಕ್ಷಪಾತಯುಕ್ತ ಕಾರ್ಯಾಚರಣೆ ಮಾಡುತ್ತಿದ್ದು, ಅವರ ಪೋಸ್ಟ್ ಡಿಲೀಟ್ ಮಾಡುವುದು, ಅವರ ಫಾಲೋವರ್ಸ್ ಸಂಖ್ಯೆಯನ್ನು ಕಡಿಮೆ ಮಾಡುವುದು, ಅವರಿಗೆ ಮೇಲಿಂದ ಮೇಲೆ ನೋಟಿಸ್ ಕಳುಹಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕುವುದು, ಈ ರೀತಿಯ ಸ್ವೇಚ್ಛಾವರ್ತನೆಯ ಕಾರ್ಯಾಚರಣೆಯನ್ನು ಮಾಡುತ್ತಿದೆ.

ಫೇಸ್‌ಬುಕ್ ಯಾವುದೇ ಕಾರಣವನ್ನು ನೀಡದೇ ಹಿಂದೂ ಜನಜಾಗೃತಿ ಸಮಿತಿಯ ಪುಟ facebook.com/HinduAdhiveshan,  ಸಹಿತ ಜಿಲ್ಲೆ ಮತ್ತು ರಾಜ್ಯಮಟ್ಟದ ಒಟ್ಟು ೩೫ ಪುಟಗಳನ್ನು ನಿಲ್ಲಿಸಿದೆ. ಅದರೊಂದಿಗೆ ಸನಾತನ ಪ್ರಭಾತ ನಿಯತಕಾಲಿಕೆಯ ಪುಟ facebook.com/sanatanprabhat,  ಸನಾತನ  ಶಾಪ್‌ನ್ ಪೇಜ್ facebook.com/sanatanshop, ಈ ಪುಟಗಳ ಮೇಲಿಯೂ ನಿರ್ಬಂಧವನ್ನು ತಂದಿದೆ. ಅದೇ ರೀತಿ ಸುದರ್ಶನ ಟಿವಿ. ಭಾಜಪದ ತೆಲಂಗಾಣದ ಶಾಸಕರಾದ ಶ್ರೀ. ಟಿ. ರಾಜಾಸಿಂಗ ಇವರೊಂದಿಗೆ ಅನೇಕ ಹಿಂದುತ್ವನಿಷ್ಠರ ಫೇಸ್‌ಬುಕ್ ಪೇಜ್‌ಗಳ ಮೇಲೆ ನಿರ್ಬಂಧವನ್ನು ಹೇರಿದೆ. ಯಾವುದೇ ಕಾರಣವನ್ನು ಅಥವಾ ಸೂಚನೆಯನ್ನು ನೀಡದೇ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ.

ವಾಸ್ತವದಲ್ಲಿ ಯಾವುದೇ ಮಾಹಿತಿ ಅಥವಾ ಸಾಹಿತ್ಯ ಇವುಗಳ ಕುರಿತು ಆಕ್ಷೇಪವಿದ್ದರೆ, ಆ ಕುರಿತು ಫೇಸ್‌ಬುಕ್ ತಿಳಿಸುವುದಿರುತ್ತದೆ; ಆದರೆ ಹಾಗೇನೂ ತಿಳಿಸಿಲ್ಲ. ಇನ್ನೊಂದೆಡೆ ಕೋಮುದ್ವೇಷ ಹುಟ್ಟಿಸುವ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಮತ್ತು ಭಯೋತ್ಪಾದನೆ ಕಾರ್ಯಾಚರಣೆಗಳಿಂದ ಭಾರತ ಸರಕಾರವು ನಿಷೇಧಿಸಿದ ‘ಇಸ್ಲಾಮಿಕ್ ರಿಸರ್ಚ ಫೌಂಡೇಶನ್’ನ ಡಾ. ಝಾಕೀರ್ ನಾಯಿಕ ಇವರ ಖಾತೆ,  ದೇಶವಿಘಾತಕ ಚಟುವಟಿಕೆಗಳಲ್ಲಿ ತೊಡಗಿದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಖಾತೆಗಳನ್ನು ಇನ್ನೂ ಮುಂದುವರಿಸಿದೆ.

ಈ ಅನ್ಯಾಯದ ಕೃತಿಯ ವಿರುದ್ಧ ದೇಶದಾದ್ಯಂತದ ಹಿಂದೂ ಬಾಂಧವರು ಶನಿವಾರದಂದು ವಿವಿಧ ಮಾಧ್ಯಮಗಳಿಂದ ಫೆಸ್‌ಬುಕ್‌ನ ಕ್ರಮವನ್ನು ಖಂಡಿಸಿದರು. ಈ ಕುರಿತು ಟ್ವಟರ್‌ನಲ್ಲಿ #Facebook_Suppress_Hindu_Voices ಈ ಟ್ರೆಂಡ್‌ನ್ನು ನಡೆಸಲಾಯಿತು. ಅನೇಕ ಹಿಂದೂ ಬಾಂಧವರೊಂದಿಗೆ ಗಣ್ಯರು ಫೆಸ್‌ಬುಕ್‌ನ ಅನ್ಯಾಯದ ಕಾರ್ಯಾಚರಣೆಯ ವಿರುದ್ಧದ ಈ ಆನ್‌ಲೈನ್ ಅಭಿಯಾನದಲ್ಲಿ ತಮ್ಮ ಸಹಭಾಗವನ್ನು ನೋಂದಾಯಿಸಿದರು. ಸಂಬಂಧಿತ ಸರಕಾರಿ ವ್ಯವಸ್ಥೆ ಮತ್ತು ಮಂತ್ರಿಗಳಿಗೂ ಹಿಂದೂ ಸಂಘಟನೆಗಳ ಮೇಲಾಗುವ ದಬ್ಬಾಳಿಕೆಯನ್ನು ತಡೆಗಟ್ಟಲು ತ್ವರಿತ ಕಾರ್ಯಾಚರಣೆಯನ್ನು ಮಾಡಬೇಕೆಂಬ ಆಶಯದ ನಿವೇದನೆಯ ಈ-ಮೇಲ್ ಕಳುಹಿಸಲಾಯಿತು. ದೇಶದಾದ್ಯಂತದ ವಿವಿಧ ರಾಜ್ಯಗಳು, ಜಿಲ್ಲೆಗಳಲ್ಲಿ ಈ ಅಭಿಯಾನವು ನಡೆಯುತ್ತಿದ್ದು ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಗಣ್ಯರ ಫೇಸ್‌ಬುಕ್ ಪೇಜ್‌ಗಳ ಮೇಲಿನ ನಿರ್ಬಂಧವನ್ನು ಹಿಂಪಡೆಯುವ ವರೆಗೆ ಇದು ಹೀಗೆಯೇ ಮುಂದುವರೆಸಲಾಗುವುದೆಂದು ಹಿಂದೂ ಜನಜಾಗೃತಿ ಸಮಿತಿಯು ಹೇಳಿದೆ.